ಬೇಲೂರು: ರೈತಪರ ಮತ್ತು ಕೂಲಿಕಾರ್ಮಿಕ ಮತ್ತು ಶೋಷಿತರವಾಗಿ ಅವಿರತವಾಗಿ ಹೋರಾಟ ಮಾಡುವ ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೆ ಬಹು ಮುಖ್ಯ. ಚುನಾವಣೆ ವೇಳೆ ಪಕ್ಷದಲ್ಲಿ ಶಿಪಾರಸು ಮತ್ತು ಲಾಬಿಗೆಅವಕಾಶವಿಲ್ಲ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯವೆಂದು ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಹೇಳಿದರು.
ಪಟ್ಟಣದ ಪುಟ್ಟಮ್ಮ ಚನ್ನಕೇಶವೇಗೌಡ ಕಲ್ಯಾಣ ಮಂಟಪದಲ್ಲಿ ತಾಲೂಕು ಜೆಡಿಎಸ್‌ನಿಂದಹಮ್ಮಿಕೊಂಡ ಪುರಸಭಾ ಚುನಾವಣೆ ಅಭಿಪ್ರಾಯಸಂಗ್ರಹ ಸಭೆ ಯಲ್ಲಿ ಮಾತನಾಡಿದರು. ಹತ್ತು ವರ್ಷದಿಂದ ಬೇಲೂ ರು ಕರ್ಮಭೂಮಿಯಲ್ಲಿ ಇಲ್ಲಿಯವರೆಗೆ ನಡೆದ ಪುರಸಭಾ, ಜಿಪಂ, ತಾಪಂ, ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಬಹುಮತಪಡೆದು ಅಧಿಕಾರ ಚುಕ್ಕಾಣಿ ಹಿಡಿದಿದೆ. ಆದರೆ, ಕಳೆದ ಬಾರಿ ಬೇಲೂರು ಪುರಸಭೆ ಬಹುಮತ ವಿಲ್ಲದೆಪಕ್ಷೇತರ ರಚಿಸಿದ ಆಡಳಿತ ಐದು ವರ್ಷ ಕಷ್ಟವಾಗಿತ್ತುಈ ಭಾರಿ ಬಹುಮತ ನೀಡಬೇಕಿದೆ ಎಂದು ಮನವಿ ಮಾಡಿದರು.
ಜೆಡಿಎಸ್‌ನಲ್ಲಿ ಲಾಬಿ ನಡೆಯುವುದಿಲ್ಲ. ಬದಲಾಗಿ ಕಾರ್ಯಕರ್ತರ ಅಭಿಪ್ರಾಯ ಮತ್ತು ಸಲಹೆ ಮೇಲೆ ಅಭ್ಯರ್ಥಿಗಳಿಗೆ ಬಿ- ಪಾರಂ ನೀಡಲಾಗುತ್ತದೆ. ಇಡೀ ಚುನಾವಣೆ ಜೆಡಿಎಸ್ ನಾಯಕತ್ವ ಇಡೀ ಜಿಲ್ಲೆಗೆತಿಳಿಸುವ ಕೆಲಸ ಬೇಲೂರಿನಿಂದ ನಡೆಯಬೇಕಿದೆ. ನಮ್ಮಲ್ಲಿನ ಭಿನ್ನಮತ, ಗೊಂದಲ ಅನ್ಯರಿಗೆವರವಾಗಬಾರದು. ಟಿಕೆಟ್ ನೀಡುವ ವಿಚಾರದಲ್ಲಿಇಕ್ಕಟ್ಟಿಗೆ ಸಿಲುಕಿದ್ದಾರೆ. ಪಕ್ಷದಿಂದ ನೀಡುವ ಒಂದೇ ಟಿಕೆಟ್‌ಗೆ ಹತ್ತಾರು ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.ಈ ಕಾರಣದಿಂದ ಅಯಾ ವಾರ್ಡ್ ಕಾರ್ಯಕರ್ತರಅಭಿಪ್ರಾಯ ಪಡೆದು ಅಭ್ಯರ್ಥಿಗಳ ಘೋಷಣೆಯನ್ನು ಮಾಡಲಾಗಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತ ಸುಬ್ಬರಾಯ ಮಾತನಾಡಿ, 27 ರಂದು ನಡೆಯುವ ಪುರಸಭಾ ಚುನಾವಣೆ ನಿಮಿತ್ತ ಪುರಸಭಾ 23 ವಾರ್ಡ್ ಗಳಲ್ಲಿ ಹಿರಿಯರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಸಿ. ಸ್ಥಳೀಯವಾಗಿ ಅಭಿಪ್ರಾಯ ಸಂಗ್ರಹಿಸಲಾಗಿದೆ.ಅಂತಯೇ ಅಂತಿಮವಾಗಿ ಅರ್ಜಿ ಸಲ್ಲಿಸಿದ ಅಕಾಂಕ್ಷಿಗಳ ಸಂಸದ ಸಮ್ಮುಖದಲ್ಲಿ ಮಾಹಿತಿ ಸಂಗ್ರಹಿಸಿ ಎಲ್ಲರಒಪ್ಪಿಗೆ ಮೇಲೆ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುತ್ತದೆ ಎಂದರು.
ಶಾಸಕ ಕೆ.ಎಸ್.ಲಿಂಗೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಕಾರ್ಯಾಧ್ಯಕ್ಷ ಬಿ.ಸಿ.ಮಂಜುನಾಥ, ಜಿಪಂ ಮಾಜಿ ಅಧ್ಯಕ್ಷಬಿ.ಡಿ.ಚಂದ್ರೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜು, ಮಾಜಿ ಪುರಸಭಾ ಅಧ್ಯಕ್ಷ ಶ್ರೀನಿಧಿಮುಖಂಡ ಎಂ.ಕೆ.ಆರ್ ನಾಗೇಶ್, ದೇವರಾಜ್,ಸಂಗಮ್, ಮಹಿಳಾ ಅಧ್ಯಕ್ಷೆ ಜಿ.ಟಿ. ಇಂದಿರಾ ಇತರರಿದ್ದರು.