Advertisement

ಚುನಾವಣಾ ಪ್ರಚಾರಕ್ಕೆ ಪ್ರಜ್ವಲ್‌ ರೇವಣ್ಣ ಎಂಟ್ರಿ

05:57 AM Mar 13, 2019 | Karthik A |

ಹಾಸನ: ಮಾಜೀ ಪ್ರಧಾನಿ ದೇವೇಗೌಡರ ಮೂರನೇ ತಲೆಮಾರು ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದೆ. ಒಂದೆಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖೀಲ್‌ ಕುಮಾರಸ್ವಾಮಿ ಅವರು ಈ ಬಾರಿಯ ಸಂಸತ್‌ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನೊಂದೆಡೆ ರೇವಣ್ಣ ಅವರ ಪುತ್ರ ಪ್ರಜ್ವಲ್‌ ರೇವಣ್ಣ ಅವರು ಹಾಸನ ಕ್ಷೇತ್ರದಲ್ಲಿ ಜೆ.ಡಿ.ಎಸ್‌. ಪಕ್ಷದ ಪರವಾಗಿ ಪ್ರಚಾರ ಪ್ರಾರಂಭಿಸುವ ಮೂಲಕ ತಮ್ಮ ರಾಜಕೀಯ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

Advertisement

ಬುಧವಾರ ಬೆಳಿಗ್ಗೆ ಹೊಳೇನರಸೀಪುರದ ಮೂಡಲಹಿಪ್ಪೆ ಮತ್ತು ಪಡವಲಹಿಪ್ಪೇ ಗ್ರಾಮಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಜ್ವಲ್‌ ಅವರು ಪಕ್ಷದ ಕಾರ್ಯಕರ್ತರು ಮತ್ತು ನಾಯಕರೊಂದಿಗೆ ಲೋಕಸಭಾ ಪ್ರಚಾರ ಪ್ರಕ್ರಿಯೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಚಿವ ಹೆಚ್‌.ಡಿ. ರೇವಣ್ಣ ಮತ್ತು ಭವಾನಿ ರೇವಣ್ಣ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್‌ ರೇವಣ್ಣ, ‘ಜೆಡಿಎಸ್‌ ಪಕ್ಷದ ಪರವಾಗಿ ನಾನಿಂದು ಪ್ರಚಾರಕ್ಕೆ ಇಳಿಯುತ್ತಿದ್ದೇನೆ. ಹಾಸನ ಕ್ಷೇತ್ರದಿಂದ ಪಕ್ಷವು ಯಾರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೂ ನಾನು ಅವರ ಪರ ಪ್ರಚಾರ ಮಾಡುತ್ತೇನೆ, ನಮಗೆಲ್ಲಾ ಜೆಡಿಎಸ್‌ ಗೆಲುವು ಮುಖ್ಯ’ ಎಂದು ಹೇಳಿದರು.

ಹಾಸನ ಲೋಕಸಭಾ ಕ್ಷೇತ್ರಕ್ಕೆ ಜೆ.ಡಿ.ಎಸ್‌. ಅಭ್ಯರ್ಥಿ ಯಾರೆಂದು ಇನ್ನೂ ಫೈನಲ್‌ ಆಗಿಲ್ಲವಾದರೂ ಬಹುತೇಕ ಸಚಿವ ರೇವಣ್ಣ ಅವರ ಪುತ್ರ ಪ್ರಜ್ವಲ್‌ ರೇವಣ್ಣ ಅವರೇ ಇಲ್ಲಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಇಂದು ಪ್ರಜ್ವಲ್‌ ಅವರು ಭರ್ಜರಿಯಾಗಿ ತಮ್ಮ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next