Advertisement

ಪ್ರಜ್ವಲ್‌, ತಾತನ ಮೀರಿಸುವ ಮೊಮ್ಮಗ: ಭವಾನಿ ರೇವಣ್ಣ

11:14 PM Apr 13, 2019 | Lakshmi GovindaRaju |

ಸಕಲೇಶಪುರ: “ಪ್ರಜ್ವಲ್‌, ತಾತನ ಮೀರಿಸುವ ಮೊಮ್ಮಗ’ ಎಂದು ಭವಾನಿ ರೇವಣ್ಣ ಶ್ಲಾಘಿಸಿದ್ದಾರೆ. ತಾಲೂಕಿನ ವಿವಿಧೆಡೆ ಭಾನುವಾರ ಪುತ್ರ ಪ್ರಜ್ವಲ್‌ ರೇವಣ್ಣ ಪರ ಅವರು ಪ್ರಚಾರ ಭಾಷಣ ಮಾಡಿದರು.

Advertisement

“ನಮ್ಮದು ಕುಟುಂಬ ರಾಜಕಾರಣವಲ್ಲ. ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ವೇಳೆ ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿಯ ಜೆಡಿಎಸ್‌ ಮುಖಂಡರ ಅಭಿಪ್ರಾಯ ಆಲಿಸಿ, ಅವರ ಸೂಚನೆಯಂತೆ ಪ್ರಜ್ವಲ್‌ಗೆ ಟಿಕೆಟ್‌ ನೀಡಲಾಗಿದೆ.

ಲೋಕದಲ್ಲಿ ಗುರು ಮೀರಿದ ಶಿಷ್ಯ ಹಾಗೂ ತಂದೆ ಮೀರಿದ ಮಗ ಇರಬೇಕು ಎಂಬುದು ಪುರಾತನ ಗಾದೆ. ಅದರಂತೆ ದೇವೇಗೌಡರನ್ನು ಅಭಿವೃದ್ಧಿಯಲ್ಲಿ ರೇವಣ್ಣನವರು ಮುಂದೆ ಹಾಕಿದ್ದಾರೆ. ಇದರಂತೆ ಪ್ರಜ್ವಲ್‌ ಕಳೆದ ಏಳು ವರ್ಷದಿಂದ ಯಾವುದೇ ಅಧಿಕಾರ ಇಲ್ಲದಿದ್ದರೂ ಸಾರ್ವಜನಿಕರ ಕೆಲಸ ಮಾಡಿಕೊಡುವುದರಲ್ಲಿ ಜಿಲ್ಲೆಯಲ್ಲಿ ಮನೆಮಾತಾಗಿದ್ದು,

ಅಭಿವೃದ್ಧಿಯಲ್ಲಿ ರೇವಣ್ಣನವರನ್ನು ಮೀರಿ ಬೆಳೆಯುವ ಶಕ್ತಿ, ಯುಕ್ತಿ ಪ್ರಜ್ವಲ್‌ಗೆ ಇದೆ. ಪ್ರಜ್ವಲ್‌, ಅಭಿವೃದ್ಧಿ ವಿಚಾರದಲ್ಲಿ ತಾತನನ್ನು, ಅಪ್ಪನನ್ನು ಮೀರಿಸುತ್ತಾರೆ.ಆದ್ದರಿಂದ, ಪ್ರಜ್ವಲ್‌ ರೇವಣ್ಣನವರನ್ನು ಈ ಬಾರಿ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು’ ಎಂದರು.

Advertisement

Udayavani is now on Telegram. Click here to join our channel and stay updated with the latest news.