Advertisement

‘ಇನ್ಸ್‌ಪೆಕ್ಟರ್‌ ವಿಕ್ರಂ’ ರೆಡಿ ಟು ರಿಪೋರ್ಟಿಂಗ್‌ …

03:11 PM Jan 22, 2021 | Team Udayavani |

“ನಾನು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಸಿನಿಮಾ ಮಾಡಿದ್ದಾರೆ…’- ಹೀಗೆ ಹೇಳಿ ನಕ್ಕರು ಪ್ರಜ್ವಲ್‌ ದೇವರಾಜ್‌. ಅವರ ನಗುವಿಗೆ ಕಾರಣವಾಗಿದ್ದು, “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರ.

Advertisement

ಈ ಚಿತ್ರ ಫೆ.5ರಂದು ತೆರೆಕಾಣುತ್ತಿದೆ. ಈ ಮೂಲಕ ಬಿಗ್‌ ಬಜೆಟ್‌ ಸಿನಿಮಾಗಳ ಪರ್ವ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾ ಪ್ರಮೋಶನ್‌ಗೆ ಮುಂದಾಗಿದೆ. “ಇದು ಇಡೀ ತಂಡದ ಎರಡೂವರೆ ವರ್ಷದ ಕನಸು. ಆ್ಯಕ್ಷನ್‌ ಕಾಮಿಡಿ ಡ್ರಾಮಾ ಸಿನಿಮಾವಾಗಿ ಪ್ರೇಕ್ಷಕರನ್ನು ಈ ಚಿತ್ರ ರಂಜಿಸುವ ವಿಶ್ವಾಸವಿದೆ. ಕಥೆ ಹೇಳಿದಾಗಲೇ ಈ ಸಿನಿಮಾ ಹೇಗೆ ಮೂಡಿಬರಬಹುದೆಂಬ ಕಲ್ಪನೆ ಇತ್ತು. ಆದರೆ, ಸಿನಿಮಾ ಮಾತ್ರ ನನ್ನ ಕಲ್ಪನೆಗಿಂತಲೂ ಚೆನ್ನಾಗಿ ಮೂಡಿಬಂದಿದೆ. ಹೊಸ ವರ್ಷದಲ್ಲಿ ಪ್ರೇಕ್ಷಕರಿಗೆ ಇದೊಂದು ಫ್ಯಾಮಿಲಿ ಎಂಟರ್‌ ಟೈನರ್‌ ಸಿನಿಮಾವಾಗಿ ರಂಜಿಸಲಿದೆ’ ಎನ್ನುವುದು ಪ್ರಜ್ವಲ್‌ ದೇವರಾಜ್‌ ಮಾತು.

ಇದನ್ನೂ ಓದಿ:ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್‌ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು

ಈ ಚಿತ್ರವನ್ನು ವಿಖ್ಯಾತ್‌ ನಿರ್ಮಿಸಿದ್ದಾರೆ. ಹೊಸ ವರ್ಷದ ಮೊದಲ ಸ್ಟಾರ್‌ ಸಿನಿಮಾವಾಗಿ “ಇನ್ಸ್‌ಪೆಕ್ಟರ್‌ ವಿಕ್ರಂ’ ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ ಎಂಬುದು ನಿರ್ಮಾಪಕ ವಿಖ್ಯಾತ್‌ ಮಾತು. ಇನ್ನು, ಈ ಚಿತ್ರ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂಬ ಮಾಹಿತಿ ಹಂಚಿಕೊಂಡರು.

ನರಸಿಂಹ ಈ ಚಿತ್ರದ ನಿರ್ದೇಶಕರು. ಅವರು ಈ ಕಥೆ ಬರೆಯುವಾಗಲೇ  ಪ್ರಜ್ವಲ್‌ ಅವರನ್ನು ಮನಸ್ಸಲಿಟ್ಟುಕೊಂಡಿದ್ದರಂತೆ. ಅದರಂತೆ ಪ್ರಜ್ವಲ್‌ ಕೂಡಾ ಕಥೆ ಕೇಳಿ ಖುಷಿಪಟ್ಟಿದ್ದಾರೆ.  “ಇದು ಥ್ರಿಲ್ಲರ್‌ ಸಿನಿಮಾ ಅಲ್ಲ. ಇಡೀ ಸಿನಿಮಾದಲ್ಲಿ ತುಂಬಾ ಮಜಾವಾದ ಅಂಶಗಳಿವೆ. ಹಾಗಾಗಿ, ಸಿನಿಮಾದ ಕಥೆ ಬಿಟ್ಟುಕೊಡುವಂತಿಲ್ಲ. ನಗಿಸಿ, ರಂಜಿಸಿ, ಖುಷಿಪಡಿಸಿ ಈ ಚಿತ್ರ ಪ್ರೇಕ್ಷಕರನ್ನು ಆಚೆ ಕಳುಹಿಸುತ್ತದೆ’ ಎಂಬ ವಿಶ್ವಾಸವಿದೆ ಎನ್ನುವುದು ನರಸಿಂಹ ಮಾತು.

Advertisement

ಇದನ್ನೂ ಓದಿ: ಅತ್ಯುತ್ತಮ ತಂತ್ರಜ್ಞಾನ ಕಂಡು ಹಿಡಿದ ಟ್ವಿಟ್ಟರ್ ಗೆ ಉದ್ಯಮಿ ಎಲೋನ್ ಮಸ್ಕ್ ಬಹುಮಾನ ಘೋಷಣೆ!

ಚಿತ್ರದಲ್ಲಿ ರಘು ಮುಖರ್ಜಿ, ಧರ್ಮಣ್ಣ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ರಘು ಮುಖರ್ಜಿಗೆ ವಿಭಿನ್ನ ಪಾತ್ರ ಸಿಕ್ಕರೆ, ಧರ್ಮಣ್ಣ ಇಲ್ಲಿ ಕಾನ್ಸ್‌ಟೇಬಲ್‌. ಈ ಚಿತ್ರದಲ್ಲಿ ನಟ ದರ್ಶನ್‌ ಕೂಡಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅನೂಪ್‌ ಸೀಳೀನ್‌ ಸಂಗೀತವಿದ್ದು, ಜನವರಿ 26ರಂದು ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ.

ಶಿವಣ್ಣ ವಾಯ್ಸಓವರ್‌

ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಧ್ವನಿ ನೀಡಲಿದ್ದಾರೆ. ಅದು ತನ್ನ ಡ್ನೂಟಿಯನ್ನು ಪ್ರಜ್ವಲ್‌ಗೆ ಹ್ಯಾಂಡೋವರ್‌ ಮಾಡುವ ಮೂಲಕ. ಹೌದು, ಶಿವರಾಜ್‌ಕುಮಾರ್‌ “ಇನ್ಸ್‌ಪೆಕ್ಟರ್‌ ವಿಕ್ರಂ’ ಎಂಬ ಸಿನಿಮಾ ಮಾಡಿದ್ದು ಗೊತ್ತೇ ಇದೆ. ಈಗ ಪ್ರಜ್ವಲ್‌ ಅದೇ ಟೈಟಲ್‌ನಡಿ ನಟಿಸಿದ್ದಾರೆ. ಹಾಗಾಗಿ, ಶಿವಣ್ಣ ಧ್ವನಿ ನೀಡಲು ಒಪ್ಪಿದ್ದು, ಡ್ನೂಟಿ ಹ್ಯಾಂಡೋವರ್‌ ಮಾಡುವ ತರಹದ ಮಾತುಕತೆಗೆ ಧ್ವನಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next