Advertisement

ಮಾದೇಶ್ವರ ಸನ್ನಿಧಿಯಲ್ಲಿ ಪ್ರಜ್ವಲ್‌ ‘ಅಬ್ಬರ’!

03:56 PM Jun 06, 2022 | Team Udayavani |

ಟೈಸನ್‌’, “ಕ್ರಾಕ್‌’ ಸಿನಿಮಾಗಳ ನಿರ್ದೇಶಕ ರಾಮ್‌ ನಾರಾಯಣ್‌ ಇದೀಗ ಪ್ರಜ್ವಲ್‌ ದೇವರಾಜ್‌ ಅಭಿನಯದ “ಅಬ್ಬರ’ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದು, ಈಗಾಗಲೇ ಸದ್ದಿಲ್ಲದೆ ಈ ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿದೆ. “ಸಿ ಆ್ಯಂಡ್‌ ಎಂ ಮೂವೀಸ್‌’ ಬ್ಯಾನರ್‌ನಲ್ಲಿ ಬಸವರಾಜ್‌ ಮಂಚಯ್ಯ ನಿರ್ಮಿಸುತ್ತಿರುವ “ಅಬ್ಬರ’ ಚಿತ್ರದಲ್ಲಿ ನಾಯಕ ಪ್ರಜ್ವಲ್‌ ದೇವರಾಜ್‌ ಅವರಿಗ ನಿಮಿಕಾ ರತ್ನಾಕರ್‌, ಲೇಖಾಚಂದ್ರ, ರಾಶಿ ಪೊನ್ನಪ್ಪ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

Advertisement

ಇತ್ತೀಚೆಗೆ “ಅಬ್ಬರ’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ನಾಗರಬಾವಿಯ ಮಲೆಮಾದೇಶ್ವರ ದೇವಸ್ಥಾನದಲ್ಲಿ ಕುಂಬಳಕಾಯಿ ಒಡೆಯುವ ಮೂಲಕ ಚಿತ್ರೀಕರಣಕ್ಕೆ ತೆರೆ ಎಳೆಯಲಾಯಿತು.  ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತಿಗೆ ಸಿಕ್ಕ ಚಿತ್ರತಂಡ, “ಅಬ್ಬರ’ ಸಾಗಿಬಂದ ರೀತಿಯ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.

ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರಾಮ್‌ ನಾರಾಯಣ್‌, “ಈ ಸಿನಿಮಾದಲ್ಲಿ ಬಹಳಷ್ಟು ವಿಶೇಷತೆಗಳಿವೆ. ಕೊನೇ ಹಂತದ ಚಿತ್ರೀಕರಣ ಬಾದಾಮಿ, ಪಟ್ಟದಕಲ್ಲು ಸುತ್ತಮುತ್ತ ನಡೆಸಲಾಯಿತು. ಸಿನಿಮಾದಲ್ಲಿ ಮೂವರು ನಾಯಕಿಯರೂ ಪೈಪೋಟಿಗೆ ಬಿದ್ದವರಂತೆ ಅಭಿನಯ ಮಾಡಿದ್ದಾರೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಆದಷ್ಟು ಬೇಗ ಸಿನಿಮಾ ತೆರೆಗೆ ಬರಲಿದೆ’ ಎಂದರು.

ಇದನ್ನೂ ಓದಿ:‘ರಕ್ಕಮ್ಮ’ನ ಮೊಗದಲ್ಲಿ 50 ಮಿಲಿಯನ್‌ ಖುಷಿ: ವಿಕ್ರಾಂತ್ ರೋಣ ಹಾಡು ಸೂಪರ್ ಹಿಟ್

“ಸಿನಿಮಾ ತುಂಬ ಚೆನ್ನಾಗಿ ಮೂಡಿಬರುತ್ತಿದ್ದು, ಎಲ್ಲರಿಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ ಎಂಬ ಭರವಸೆಯಿದೆ. ಇದೇ ಜುಲೈ ಅಥವಾ ಆಗಸ್ಟ್‌ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಯೋಚನೆಯಿದೆ’ ಎನ್ನುವುದು ನಿರ್ಮಾಪಕ ಬಸವರಾಜ ಮಂಚಯ್ಯ ಮಾತು.

Advertisement

ಚಿತ್ರದ ಬಗ್ಗೆ ಮಾತನಾಡುವ ನಾಯಕ ಪ್ರಜ್ವಲ್‌ ದೇವರಾಜ್‌, “ಈ ಸಿನಿಮಾ ನನ್ನ ಕೆರಿಯರ್‌ನಲ್ಲಿ ತುಂಬ ವಿಭಿನ್ನವಾದದ್ದು. ಒಂದೇ ಸೀನ್‌ನಲ್ಲಿ 3 ಪಾತ್ರಗಳನ್ನು ಮಾಡಬೇಕಿತ್ತು. ಮೂರು ಶೇಡ್‌ ಅಲ್ಲದೆ ಸೂರ್ಪ ಹೀರೋ ಬುಲ್‌ಬುಲ್‌ ಬಾಬಾ ಗೆಟಪ್‌ ಕೂಡ ಸಿನಿಮಾದಲ್ಲಿದೆ. ಕಾಮಿಡಿ, ಆ್ಯಕ್ಷನ್‌, ಡ್ರಾಮಾ ಎಲ್ಲವೂ ನನ್ನ ಕ್ಯಾರೆಕ್ಟರ್‌ನಲ್ಲಿದೆ. ನಾವು ನಡೆಯುವ ದಾರಿ ಹೀಗೇ ಇರಬೇಕು ಅಂದುಕೊಂಡಿರುತ್ತೇವೆ. ಆದರೆ, ಹೋಗ್ತಾ ಹೋಗ್ತಾ ಅದು ಕಳೆದುಹೋಗುತ್ತದೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎಂಬುವುದನ್ನ ಸಿನಿಮಾದಲ್ಲಿ ಹೇಳಿದ್ದೇವೆ’ ಎಂದರು. ನಾಯಕಿಯರಾದ ನಿಮಿಕಾ ರತ್ನಾಕರ್‌, ಲೇಖಾಚಂದ್ರ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

ಉಳಿದಂತೆ “ಅಬ್ಬರ’ ಸಿನಿಮಾದಲ್ಲಿ ರವಿಶಂಕರ್‌, ಶೋಭರಾಜ್‌, ಕೋಟೆ ಪ್ರಭಾಕರ್‌, ಶಂಕರ್‌ ಅಶ್ವಥ್‌, ವಿಕ್ಟರಿ ವಾಸು, ಪ್ರಶಾಂತ್‌ ನಟನ, ಅರಸು ಮಹಾರಾಜ್‌, ಮೋಹನ್‌ ಜುನೇಜ, ಉಮೇಶ್‌, ಗೋವಿಂದೇ ಗೌಡ, ವಿಜಯ್‌ ಚೆಂಡೂರ್‌, ಮೂಗು ಸುರೇಶ್‌, ಸಲ್ಮಾನ್‌, ಮಮತಾ ರಾಹುತ್‌, ಖುಷಿ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next