Advertisement
2017 ರಲ್ಲಿ ಕೊನೆಯ ಬಾರಿಗೆ ಆಡಿದ ಪಂದ್ಯಾವಳಿಯು, ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ಥಾನಕ್ಕೆ ಪ್ರಯಾಣಿಸಲು ಅಸಮರ್ಥತೆಯ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಐಸಿಸಿಗೆ ತಿಳಿಸಿದ ನಂತರ ಈ ವಿದ್ಯಮಾನ ನಡೆದಿದೆ. ಐಸಿಸಿ ಯು ಪಾಕ್ ಕ್ರಿಕೆಟ್ ಮಂಡಳಿಯ ನಿರ್ಧಾರಕ್ಕೆ ತಡೆ ನೀಡಿದೆ.
Related Articles
Advertisement
“ಐಸಿಸಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಪಾಕಿಸ್ಥಾನಕ್ಕೆ ಸಂಬಂಧಿಸಿದಂತೆ, ಯಾವುದೇ ಸಮಸ್ಯೆ ಇಲ್ಲ ಆದರೆ POK ಗೆ ಯಾವುದೇ ಟ್ರೋಫಿ ಪ್ರವಾಸ ಸಾಧ್ಯವಿಲ್ಲ’ ಎಂದು ಬಿಸಿಸಿಐ ಹೇಳಿದೆ.
ಎಂಟು ತಂಡಗಳ ಪಂದ್ಯಾವಳಿ 2025 ಫೆಬ್ರವರಿ-ಮಾರ್ಚ್ ನಲ್ಲಿ ಪಾಕಿಸ್ಥಾನದಲ್ಲಿ ಆಯೋಜಿಸಲಾಗಿದ್ದು, ಕ್ರಿಕೆಟ್ ಸಂಭ್ರಮವನ್ನು ನಿರ್ಮಿಸಲು, PCB ಟ್ರೋಫಿ ಪ್ರವಾಸವನ್ನು ಆಯೋಜಿಸಿದೆ. ಸದ್ಯ 1947 ರಲ್ಲಿ ಉಭಯ ದೇಶಗಳ ವಿಭಜನೆಯ ನಂತರ ಭಾರತ ಮತ್ತು ಪಾಕಿಸ್ಥಾನದ ನಡುವಿನ ವಿವಾದಿತ ಭೂಮಿಯಾಗಿರುವ ಪಿಒಕೆಯಲ್ಲಿ ಟ್ರೋಫಿ ಪ್ರವಾಸವನ್ನು ಬಿಸಿಸಿಐ ಬಲವಾಗಿ ಖಂಡಿಸಿದೆ.
ಪಿಒಕೆ ಪ್ರದೇಶದಲ್ಲಿರುವ ಸ್ಕರ್ದು, ಮುರ್ರೆ ಮತ್ತು ಮುಜಫರಾಬಾದ್ಗೆ ಚಾಂಪಿಯನ್ಸ್ ಟ್ರೋಫಿ ಟ್ರೋಫಿ ಸಂಚರಿಸಲು ಪಿಸಿಬಿ ನಿರ್ಧರಿಸಿತ್ತು. ಕಪ್ ಸಂಚರಿಸಲಾಗುವುದಿಲ್ಲ ಎಂದು ಐಸಿಸಿ ಹೇಳಿದೆ.
ಐಸಿಸಿ ಮಂಡಳಿಯ ಸದಸ್ಯರನ್ನು ಪಿಟಿಐ ಸಂಪರ್ಕಿಸಿ ದಾಗ “ಟ್ರೋಫಿ ಪ್ರವಾಸದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಉಲ್ಲೇಖಿಸಲಾದ ನಾಲ್ಕು ನಗರಗಳ ಬಗ್ಗೆ ಪಿಸಿಬಿ ಎಲ್ಲವನ್ನೂ ತಡೆ ಹಿಡಿದು ಇರಿಸಿದೆಯೇ ಎಂದು ನನಗೆ ತಿಳಿದಿಲ್ಲ ಆದರೆ ಇಲ್ಲದಿದ್ದರೆ ಅದು ಖಂಡಿತವಾಗಿಯೂ ಸರಿಯಾದ ಕೆಲಸವಲ್ಲ. ಯಾವುದೇ ವಿವಾದಿತ ಪ್ರದೇಶಕ್ಕೆ ಟ್ರೋಫಿಯನ್ನು ತೆಗೆದುಕೊಳ್ಳಲು ಐಸಿಸಿ ಪಿಸಿಬಿಗೆ ಅವಕಾಶ ನೀಡುತ್ತದೆ ಎಂದು ನಾನು ಭಾವಿಸುವುದಿಲ್ಲ” ಎಂದು ಹೇಳಿದ್ದಾರೆ.
ಶನಿವಾರ ಇಸ್ಲಾಮಾಬಾದ್ನಿಂದ ಐಸಿಸಿ ಟ್ರೋಫಿ ಸಂಚಾರ ಆರಂಭವಾಗಬೇಕಿತ್ತು. ಇದರ ವೇಳಾಪಟ್ಟಿಯನ್ನು ಐಸಿಸಿ ಅಧಿಕೃತವಾಗಿ ಪ್ರಕಟಿಸಬೇಕಿತ್ತು. ಆದರೆ ಗುರುವಾರ ಪಿಸಿಬಿ ತಾನೇ ಮೇಲೆ ಬಿದ್ದು ಪಿಒಕೆಯಲ್ಲೂ ಟ್ರೋಫಿ ಸಂಚರಿಸಲಿದೆ ಎಂದು ಟ್ವೀಟ್ ಮಾಡಿತ್ತು. ಇದು ಬಿಸಿಸಿಐ ಕೆಂಗಣ್ಣಿಗೆ ಕಾರಣವಾಗಿತ್ತು.