Advertisement

ಪ್ರಜ್ಞೇಶ್ ಗುರಿ ಟಾಪ್‌-50

06:00 AM Dec 25, 2018 | |

ಚೆನ್ನೈ: ಪ್ರಸಕ್ತ ಋತುವಿನಲ್ಲಿ 2 ಜಾಲೆಂಜರ್‌ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಭಾರತದ ಭರವಸೆಯ ಟೆನಿಸ್‌ ಆಟಗಾರ ಪ್ರಜ್ಞೇಶ್  ಗುಣೇಶ್ವರನ್‌, ವಿಶ್ವ ರ್‍ಯಾಂಕಿಂಗ್‌ನ ಅಗ್ರ 50ರಲ್ಲಿ ಸ್ಥಾನ ಸಂಪಾದಿಸಬೇಕೆಂಬ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.

Advertisement

“2018 ನನ್ನ ಜೀವನದ ಅತ್ಯುತ್ತಮ ವರ್ಷವಾಗಿದೆ. ಈ ಋತುವಿನಲ್ಲಿ ನಾನು 2 ಚಾಲೆಂಜರ್‌ ಪ್ರಶಸ್ತಿಯನ್ನು ಜಯಿಸಿದ್ದೇನೆ. ಮುಂದಿನ ವರ್ಷ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವ ಭರವಸೆಯಿದೆ. ನನ್ನ ಪ್ರಯತ್ನಕ್ಕೆ ಉತ್ತಮ ವೇದಿಕೆ ದೊರಕಿದ್ದು, ಅದರ ಸದುಪಯೋಗ ಪಡೆದುಕೊಳ್ಳುತ್ತೇನೆ’ ಎಂದು ಎಟಿಪಿ ರ್‍ಯಾಂಕಿಂಗ್‌ನಲ್ಲಿ 107ನೇ ಸ್ಥಾನದಲ್ಲಿರುವ ಪ್ರಜ್ಞೆàಶ್‌ ಹೇಳಿದರು.

“ಅಗ್ರ ನೂರರೊಳಗಿನ ಸ್ಥಾನದಲ್ಲಿದ್ದರೆ, ಅಗ್ರ 50ರಲ್ಲಿ ಸ್ಥಾನ ಸಂಪಾದಿಸಲು ಒಂದು ಅವಕಾಶವಿರುತ್ತದೆ. ಕಳೆದ ಕೆಲವು ಸಮಯದಿಂದ ನೂರರ ಆಸುಪಾಸಿನ ರ್‍ಯಾಂಕಿಂಗ್‌ ಕಾಯ್ದುಕೊಂಡಿದ್ದೇನೆ. ಆದರೆ ನನ್ನ ಮುಂದಿನ ಗುರಿಯೇನಿದ್ದರೂ ರ್‍ಯಾಂಕಿಂಗ್‌ನಲ್ಲಿ 50ರ ಅಸುಪಾಸಿನಲ್ಲಿರುವುದು’ ಎಂಬುದಾಗಿ ಪ್ರಜ್ಞೆàಶ್‌ ಗುಣೇಶ್ವರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next