ಹುಬ್ಬಳ್ಳಿ: ನಾನು ಒಂದು ವೇಳೆ ಹಿಟ್ಲರ್ ಆಗಿದ್ದರೆ ಈ ಸಮಯದಲ್ಲಿ ಧಾರವಾಡದಲ್ಲಿ ಲೋಕ ಸಭಾ ಚುನಾವಣೆಯೇ ನಡೆಯುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ವಿನಯ ಕುಲಕರ್ಣಿ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನವೇ ಸರ್ವಸ್ವ, ಭಗವದ್ಗೀತೆ, ರಾಮಾಯಣ ಆಗಿದೆ. 370ಕಲಂ ರದ್ದು, ತ್ರಿಬಲ್ ತಲಾಖ್ ರದ್ದು ಇನ್ನಿತರ ಕ್ರಮಗಳನ್ನು ಸಂವಿಧಾನದ ಅಡಿಯಲ್ಲಿಯೇ ಪ್ರಧಾನಿಯವರು ಕೈಗೊಂಡಿದ್ದಾರೆ ಎಂದು ಹೇಳಿದರು.
ಶಾಸಕ ವಿನಯ ಕುಲಕರ್ಣಿ ನನ್ನನ್ನು ಹಿಟ್ಲರ್ ಎಂದಿದ್ದಾರೆ ಒಂದು ವೇಳೆ ನಾನು ಹಿಟ್ಲರ್ ಆಗಿದ್ದರೆ ಧಾರವಾಡ ಲೋಕಸಭಾ ಚುನಾವಣೆಯೇ ನಡೆಯುತ್ತಿರಲಿಲ್ಲ. ವಿನಯ ಕುಲಕರ್ಣಿ ಹತಾಶರಾಗಿ ಹೇಳುತ್ತಿದ್ದಾರೆ ಎಂದರು.
ಇನ್ನು ದಿಂಗಾಲೇಶ್ವರ ಸ್ವಾಮೀಜಿ ವಿಚಾರವಾಗಿ ಏನೂ ಪ್ರತಿಕ್ರಿಯಿಸಲಾರೆ ಎಂದು ಹೇಳಿದ ಅವರು ಮನೆಯಲ್ಲಿ ಮಗು ಹುಟ್ಟೋದು ಸಹಜ, ಆದರೆ ಆ ಮಗು ನಮ್ಮ 2000 ರೂಪಾಯಿಂದಲೇ ಹುಟ್ಟಿದೆ ಅನ್ನೋ ಮಾನಸಿಕತೆಗೆ ಕಾಂಗ್ರೆಸ್ ತಲುಪಿದೆ ಎಂದು ಕೇಂದ್ರ ಸಚಿವರು ವಿವಾದಾತ್ಮಕ ಹೇಳಿಕೆ ನೀಡಿದರು. ಶ್ರೀ ರಾಮ ಮಂದಿರ ಲೋಕಾರ್ಪಣೆ ಸಮಾರಂಭ ಬಹಿಷ್ಕರಿಸಿದವರಿಗೆ ದೇಶವೇ ಬಹಿಷ್ಕರಿಸಬೇಕು. ತುಕಡೆ, ತುಕಡೆ ಗ್ಯಾಂಗ್ ಜತೆ ರಾಹುಲ್‌ಗಾಂಧಿ ನಿಂತಿದ್ದು , ಇಂತಹವರು ಅಧಿಕಾರಕ್ಕೆ ಬಂದರೆ ದೇಶದ ಗತಿ ಏನಾಗಬೇಕು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Tanashahi…:ನನಗೆ ತಾಯಿಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲೂ ಪೆರೋಲ್ ನೀಡಿರಲಿಲ್ಲ…