Advertisement

Pradhan mantri ಮಾತೃವಂದನ ಯೋಜನೆ: ನೋಂದಣಿಗೆ ಸೂಚನೆ

11:48 PM Oct 20, 2023 | Team Udayavani |

ಉಡುಪಿ/ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಾರಿಗೊಳಿಸಲಾದ ಪ್ರಧಾನ ಮಂತ್ರಿ ಮಾತೃವಂದನ ಯೋಜನೆಯ ಸೌಲಭ್ಯ ಪಡೆಯಲು ಅರ್ಹ ಗರ್ಭಿಣಿ ಹಾಗೂ ಬಾಣಂತಿಯರು ನೋಂದಾಯಿಸಿಕೊಳ್ಳಬಹುದಾಗಿದೆ.

Advertisement

ಮೊದಲ ಪ್ರಸವದ ಗರ್ಭಿಣಿ ಹಾಗೂ ಬಾಣಂತಿಯರಿಗೆ 5 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಲಾಗುವುದು. ಎರಡನೇ ಪ್ರಸವದಲ್ಲಿ ಜನಿಸುವ ಹೆಣ್ಣು ಮಗುವಿಗೆ 6 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಲಾಗುವುದು. ಈ ಪ್ರೋತ್ಸಾಹಧನವು ಗರ್ಭಿಣಿ / ಬಾಣಂತಿಯರು ಪೂರಕ ಆಹಾರ ಪಡೆಯಲು ಹಾಗೂ ಆರೋಗ್ಯವಂತ ಮಗುವಿನ ಜನನಕ್ಕೆ ಮತ್ತು ಪಾಲನೆಗೆ ಸಹಕಾರಿಯಾಗಲಿದೆ.

ಮೊದಲನೇ ಪ್ರಸವದ ಗರ್ಭಿಣಿ/ ಬಾಣಂತಿಗೆ ಮೊದಲನೇ ಕಂತಿನಲ್ಲಿ 3 ಸಾವಿರ ರೂ.ಗಳನ್ನು ಗರ್ಭಧಾರಣೆ ಖಾತರಿ ಅನಂತರ ಎರಡನೇ ಕಂತಿನಲ್ಲಿ 2 ಸಾವಿರ ರೂ.ಗಳನ್ನು ಮಗು ಜನಿಸಿದ ಅನಂತರ ಹಾಗೂ ಎರಡನೇ ಪ್ರಸವದ ಹೆಣ್ಣು ಮಗು ಜನಿಸಿದ 3 ತಿಂಗಳ ಅನಂತರದಲ್ಲಿ 6 ಸಾವಿರ ರೂ.ಗಳನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಯ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗುವುದು.

ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ, ತಾಯಿ ಮತ್ತು ಶಿಶು ರಕ್ಷಣಾ ಕಾರ್ಡ್‌ ಪ್ರತಿ, ಫಲಾನುಭವಿಯ ಆಧಾರ್‌ ಕಾರ್ಡ್‌ ಪ್ರತಿ, ಪಡಿತರ ಚೀಟಿ / ಜಾತಿ ಮತ್ತು ಆದಾಯ ಪ್ರಮಾಣ ಪತ್ರ/ ನರೇಗಾ ಕಾರ್ಡ್‌/ ಆಯುಷ್ಮಾನ್‌ ಕಾರ್ಡ್‌ ಇವುಗಳಲ್ಲಿ ಯಾವುದಾದರೂ ಒಂದರ ಜೆರಾಕ್ಸ್‌ ಪ್ರತಿಯನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next