Advertisement

ತರಬೇತಿ 30 ಲಕ್ಷ ಮಂದಿಗೆ, ಉದ್ಯೋಗ 3 ಲಕ್ಷ ಮಂದಿಗೆ

11:35 AM Sep 22, 2017 | Team Udayavani |

ಹೊಸದಿಲ್ಲಿ: ದೇಶದ ಯುವಕರಿಗೆ ಕೌಶಲ್ಯ ತರಬೇತಿ ನೀಡಬೇಕೆಂದು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ (ಪಿಎಂಕೆವಿವೈ) ಜಾರಿ ಮಾಡಲಾಗಿದೆ. ಆದರೆ ತರಬೇತಿ ಪಡೆದಿರುವ 30 ಲಕ್ಷ  ಪೈಕಿ ಉದ್ಯೋಗ ಸಿಕ್ಕಿದ್ದು ಕೇವಲ 3 ಲಕ್ಷ ಮಂದಿಗೆ. 2016ರ ಅ.2ರಂದು ಜಾರಿಯಾದ ಈ ಯೋಜನೆಗೆ ಒಟ್ಟು 12 ಸಾವಿರ ಕೋಟಿ ರೂ. ವಿನಿಯೋಗ ಮಾಡಿ 2016-2020ರ ಒಳಗಾಗಿ ಒಂದು ಕೋಟಿ ಮಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಸದ್ಯ ನಿಗದಿತ ಗುರಿ ತಲುಪಲು ವಿಫ‌ಲವಾದ್ದರಿಂದ ಉದ್ಯೋಗ ಸಂಸ್ಥೆಗಳ ಮೇಲೆ ನಿಗಾ ಇರಿಸುವ ಸ್ಥಿತಿಗೆ ಬಂದಿದೆ. ಮಾತ್ರವಲ್ಲ ಜಿಲ್ಲಾ ಮಟ್ಟದಲ್ಲಿ ಉತ್ತಮ ರೀತಿಯಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ಅಲ್ಪಾವಧಿಯ ತರಬೇತಿ ಜಾರಿಗೊಳಿಸಲೂ ಉದ್ದೇಶಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next