Advertisement

“ಆವಾಸ್‌’ಯೋಜನೆಯಿಂದ ಲಕ್ಷಾಧೀಶರಾದ ಬಡವರು!

01:45 AM Oct 06, 2021 | Team Udayavani |

ಹೊಸದಿಲ್ಲಿ: ದೇಶದ ನಾನಾ ನಗರಗಳ ಸುಮಾರು 3 ಕೋಟಿ ಕೊಳೆಗೇರಿ ನಿವಾಸಿಗಳನ್ನು ಏಕಾಏಕಿ ಲಕ್ಷಾಧಿಪತಿಗಳನ್ನಾಗಿಸಿದ ಕೀರ್ತಿ ಪ್ರಧಾನಮಂತ್ರಿ ಆವಾಸ್‌ ಯೋಜ ನೆಯದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

Advertisement

ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷ ಸಂದ ಹಿನ್ನೆಲೆಯಲ್ಲಿ “ಆಜಾದಿ ಅಟ್‌ 75 – ನ್ಯೂ ಅರ್ಬನ್‌ ಇಂಡಿಯಾ: ಟ್ರಾನ್ಸ್‌ಫಾರ್ಮಿಂಗ್‌ ಅರ್ಬನ್‌ ಲ್ಯಾಂಡ್‌ಸ್ಕೇಪ್‌’ಗೆ ಮಂಗಳವಾರ ಉತ್ತರ ಪ್ರದೇಶದ ಲಕ್ನೋದಲ್ಲಿ ಚಾಲನೆ ನೀಡಿದ ಪ್ರಧಾನಿ, ಮೇಲಿನಂತೆ ನುಡಿದರು.

ಕಾರ್ಯಕ್ರಮದಲ್ಲಿ  ಪ್ರಧಾನ ಮಂತ್ರಿ ಆವಾಸ್‌ ಯೋಜನೆ – ಅರ್ಬನ್‌ (ಪಿಎಂಎವೈ-ಯು) ಯೋಜನೆಯಡಿ, ಸ್ವಂತ ಮನೆಗಳನ್ನು ಕಟ್ಟಿಕೊಂಡ ಉತ್ತರ ಪ್ರದೇಶದ 75 ಜಿಲ್ಲೆಗಳ 75,000 ಫ‌ಲಾನುಭವಿಗಳಿಗೆ ಡಿಜಿಟಲ್‌ ಕೀಲಿಕೈಗಳನ್ನು ಹಸ್ತಾಂತರಿಸಿದರು. ಅನಂತರ ಫ‌ಲಾನುಭವಿ ಗಳೊಂದಿಗೆ ಮಾತುಕತೆ ನಡೆಸಿದರು.

ಬಳಿಕ ಸಭಿಕರನ್ನುದ್ದೇಶಿ ಮಾತನಾಡಿದ ಅವರು, “2014ರಿಂದೀಚೆಗೆ ನಮ್ಮ ಸರಕಾರ, ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ, ದೇಶದ ವಿವಿಧ ನಗರಗಳಲ್ಲಿರುವ ಬಡವರಿ ಗಾಗಿ 1.13 ಕೋಟಿ ಮನೆಗಳನ್ನು ಕಟ್ಟುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಯಿತು. ಅದ ರಲ್ಲಿ ಈಗಾಗಲೇ 50 ಲಕ್ಷ ಮನೆಗಳನ್ನು ಬಡವರಿಗೆ ಕಟ್ಟಿಕೊಡಲಾಗಿದೆ. ಈ 50 ಲಕ್ಷ ಮನೆಗಳಲ್ಲಿ ಶೇ. 80ರಷ್ಟು ಮನೆಗಳು ಮಹಿಳೆ ಯರ ಹೆಸರಿನಲ್ಲಿವೆ ಅಥವಾ  ಮಹಿಳೆಯರು ಗಂಡನ ಜತೆಗೆ ಜಂಟಿ ಮಾಲಕತ್ವ ಹೊಂದಿ ದ್ದಾರೆ. ಇದು ನಿಜಕ್ಕೂ ವಿಶೇಷವಾದದ್ದು” ಎಂದು ತಿಳಿಸಿದರು.

ಇದನ್ನೂ ಓದಿ:ಬಾಹ್ಯಾಕಾಶದಲ್ಲಿ ಮೊದಲ ಸಿನಿಮಾ ಶೂಟಿಂಗ್‌!

Advertisement

ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಕೇಂದ್ರ ನಗರಾಭಿವೃದ್ಧಿ ಸಚಿವ ಹದೀìಪ್‌ ಸಿಂಗ್‌ ಪುರಿ, ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಮುಂತಾದವರು ಸಭೆಯಲ್ಲಿ ಹಾಜರಿದ್ದರು.

ಮನೆಯಲ್ಲಿ ಎರಡು ದೀಪ ಹಚ್ಚಿ: ಮೋದಿ
ಉತ್ತರಪ್ರದೇಶದ ಅವಾಸ್‌ ಯೋಜ ನೆಯ ಫ‌ಲಾನುಭವಿಗಳು ದೀಪಾವಳಿ ದಿನ ಮನೆಗೆ ಎರಡು ದೀಪ ಹಚ್ಚಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. “ಇದು ನಿಮಗೊಂದು ಟಾಸ್ಕ್. ರಾಜ್ಯದಲ್ಲಿ 9 ಲಕ್ಷ ಫ‌ಲಾನುಭವಿಗಳಿದ್ದೀರಿ. ಪ್ರತೀ ಮನೆಯಲ್ಲಿ ಎರಡು ದೀಪ ಬೆಳಗಿದರೆ 18 ಲಕ್ಷ ದೀಪ ಬೆಳಗಿದಂತಾಗುತ್ತದೆ. ಅಯೋಧ್ಯೆಯಲ್ಲಿ ಈ ವರ್ಷ 7.5 ಲಕ್ಷ ದೀಪ ಬೆಳಗಲಿದೆ. ಇದು ರಾಮನನ್ನು ಸಂತೋಷ ಪಡಿಸಲಿದೆ’ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ಅಯೋಧ್ಯೆಯಲ್ಲಿ ದೀಪಾವಳಿ ದಿನದಂದು 6,06,569 ದೀಪ ಬೆಳಗಿಸಿ, ಗಿನ್ನೆಸ್‌ ದಾಖಲೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next