Advertisement

“ಎಲ್ಲೊ ಬೋರ್ಡ್‌’ಹಿಡಿದ ಪ್ರದೀಪ್‌

11:34 AM Dec 17, 2018 | |

ಕಳೆದ ಬಾರಿ “ಟೈಗರ್‌’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ಪ್ರದೀಪ್‌ ಇದೀಗ “ಎಲ್ಲೊ ಬೋರ್ಡ್‌’ ಎನ್ನುವ ಹೆಸರಿನ ಮತ್ತೂಂದು ಹೊಸಚಿತ್ರವನ್ನು ತೆರೆಗೆ ತರಲು ತೆರೆಮರೆಯಲ್ಲಿ ಕೆಲಸ ಆರಂಭಿಸಿದ್ದಾರೆ. ಕಳೆದ ಐದಾರು ತಿಂಗಳಿನಿಂದ ಚಿತ್ರದ ಸ್ಕ್ರಿಪ್ಟ್ ಮತ್ತಿತರ ಪ್ರೀ-ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದ್ದ “ಎಲ್ಲೊ ಬೋರ್ಡ್‌’ ಚಿತ್ರ ಇತ್ತೀಚೆಗೆ ಸರಳವಾಗಿ ಸೆಟ್ಟೇರಿದೆ. 

Advertisement

“ಜಾಲಿಡೇಸ್‌’, “ರಂಗನ್‌ ಸ್ಟೈಲ್‌’, “ಟೈಗರ್‌’ ಸೇರಿದಂತೆ ಹಲವು ಚಿತ್ರಗಳಲ್ಲಿ ಚಿತ್ರಗಳಲ್ಲಿ ಪ್ರದೀಪ್‌ ನಟಿಸಿದ್ದರೂ  ಹೇಳಿಕೊಳ್ಳುವ ಯಶಸ್ಸು ಪ್ರದೀಪ್‌ ಅವರಿಗೆ ಸಿಕ್ಕಿರಲಿಲ್ಲ. ಈ ಬಾರಿ “ಎಲ್ಲೊ ಬೋರ್ಡ್‌’ ಮೂಲಕ ಅದೃಷ್ಠ ಪರೀಕ್ಷೆಗೆ ಇಳಿದಿರುವ ಪ್ರದೀಪ್‌ ಗೆಲುವಿನ ನಗೆ ಬೀರುತ್ತಾರಾ ಎಂಬುದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next