Advertisement

World Cup: ಶಾಲಾ ಮಕ್ಕಳ ಜತೆ ಆಟಗಾರರ ಅಭ್ಯಾಸ

12:53 AM Oct 28, 2023 | Team Udayavani |

ಕೋಲ್ಕತಾ: ಮುಂಬರುವ ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯಕ್ಕಾಗಿ ಶಕಿಬ್‌ ಅಲ್‌ ಹಸನ್‌ ನೇತೃತ್ವದ ಬಾಂಗ್ಲಾ ದೇಶ ತಂಡದ ಸದಸ್ಯರು ಈಡನ್‌ ಗಾರ್ಡನ್ಸ್‌ನಲ್ಲಿ ಶುಕ್ರವಾರ ವಿವಿಧ ನಗರ ಶಾಲೆಗಳ 20 ಬಾಲಕರು ಮತ್ತು ಬಾಲಕಿಯರ ಜತೆ ಅಭ್ಯಾಸ ನಡೆಸಿದರು. ಇವರಲ್ಲಿ ಇಬ್ಬರು ಬುದ್ದಿಮಾಂದ್ಯ ಮಕ್ಕಳಿದ್ದರು.

Advertisement

ಐಸಿಸಿ ಮತ್ತು ಯುನಿಸೆಫ್‌ನ ಕಾರ್ಯ ಕ್ರಮದಡಿ ಬಾಂಗ್ಲಾದೇಶದ ಕ್ರಿಕೆಟಿಗರು ವಿದ್ಯಾರ್ಥಿಗಳೊಂದಿಗೆ ಆಡಿದರಲ್ಲದೇ ಸಂವಹನ ನಡೆಸಿದರು. ಕ್ರಿಕೆಟ್‌ ಆಡುವ ಈ ಮಕ್ಕಳು ಶಕಿಬ್‌, ಲಿಟನ್‌ ದಾಸ್‌, ಮಹಮದುಲ್ಲ ರಿಯಾದ್‌ ಮತ್ತು ಮುಸ್ತಫಿಜುರ್‌ ರೆಹಮಾನ್‌ ಅವರಂತಹ ಕ್ರಿಕೆಟಿಗರನ್ನು ಒಳಗೊಂಡ ಬಾಂಗ್ಲಾದೇಶ ತಂಡದ ಅಭಿಮಾನಿಗಳಾಗಿರುವುದು ವಿಶೇಷ ಎಂದು ಯುನಿಸೆಫ್ನ ಪ್ರಕಟನೆ ತಿಳಿಸಿದೆ.

ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ ಪರ ಆಡುತ್ತಿರುವ ಲಿಟನ್‌ ದಾಸ್‌ ಅವರನ್ನು ನೋಡಿ ಬಹಳ ಖುಷಿ ಯಾಯಿತು. ಅವರ ಕೈ ಕುಲು ಕಿದೆವು ಮಾತ್ರವಲ್ಲದೇ ಫೋಟೋ ತೆಗೆಸಿ ಕೊಂಡೆವು. ಇಂತಹ ಅಂತಾರಾಷ್ಟ್ರೀಯ ಕ್ರಿಕೆಟಿಗರ ಜತೆ ಆಡುವ ಅವಕಾಶ ಸಿಕ್ಕಿರುವುದರಿಂದ ನಮ್ಮ ಕನಸು ನನಸಾಯಿತು ಎಂದು ಕೃಷ್‌ ಮಾನಿಕ್‌ ಎಂಬ ವಿದ್ಯಾರ್ಥಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next