Advertisement
ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಅನುಷ್ಠಾನಗೊಳಿಸಿರುವ ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಿ ಕಾಯ್ದೆಯ ಅಧ್ಯಯನ ನಡೆಸಲಾಗಿದೆ ಮತ್ತು ಅಲ್ಲಿನ ಕಾಯ್ದೆಯ ರೂಪುರೇಷೆ, ಕಾಯ್ದೆ ಅನುಷ್ಠಾನದಲ್ಲಿ ಅಲ್ಲಿನ ಸರಕಾರಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.
Related Articles
Advertisement
2010ರಲ್ಲಿ ಅಂದಿನ ನಮ್ಮ ಮುಖ್ಯ ಮಂತ್ರಿಗಳು ಉಭಯ ಸದನಗಳಲ್ಲಿ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆದ ನಂತರ ಮಸೂದೆಯನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಗಿತ್ತು. ಕೆಲವೊಂದು ತಿದ್ದುಪಡಿಗಳನ್ನು ಸೂಚಿಸಿ ಮಸೂದೆ ವಾಪಸ್ಸಾಯಿತಾದರೂ ಕಾಂಗ್ರೆಸ್ ಸರಕಾರವು ಮಸೂದೆಯನ್ನು ಹಿಂಪಡೆದು ಹಳೆಯ ಕಾಯ್ದೆಯನ್ನೇ ಮುಂದುವರೆಸಿತ್ತು ಆದರೆ ಈ ಬಾರಿ ಹಾಗಾಗದು ಎಂದು ಹೇಳಿದ್ದಾರೆ.