Advertisement

Salaar ಭರ್ಜರಿ ಆರಂಭ; ಪ್ರಭಾಸ್-ಪೃಥ್ವಿರಾಜ್ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು?

06:07 PM Dec 23, 2023 | Team Udayavani |

ಮುಂಬಯಿ: “ಕೆಜಿಎಫ್” ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಹೊಂಬಾಳೆ ಫಿಲಂಸ್ ನ ಶುಕ್ರವಾರ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಸಲಾರ್’ ಚಿತ್ರ ಭರ್ಜರಿ ಆರಂಭ ಕಂಡಿದ್ದು, ಪ್ರೇಕ್ಷಕರು ಉತ್ತಮ ಸ್ಪಂದನೆ ತೋರುತ್ತಿದ್ದಾರೆ.

Advertisement

ಪ್ರಭಾಸ್ ಅಭಿನಯದ “ಸಲಾರ್: ಪಾರ್ಟ್ 1 – ಸೀಸ್ ಫೈರ್ ” ಮೊದಲ ದಿನ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 178.7 ಕೋಟಿ ರೂ. ಗಳಿಸಿದೆ, 2023 ರ ಭಾರತೀಯ ಚಿತ್ರದ ಆರಂಭಿಕ ದಿನದ ದಾಖಲೆಯನ್ನು ಬರೆದಿದೆ ಎಂದು ನಿರ್ಮಾಣ ಸಂಸ್ಥೆ ಶನಿವಾರ ತಿಳಿಸಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗಿದೆ.

ಕಾಲ್ಪನಿಕ ನಗರವಾದ ಖಾನ್‌ಸಾರ್‌ನಲ್ಲಿ ”ಸಲಾರ್” ಚಿತ್ರದ ಕಥೆ ಇಬ್ಬರು ಸ್ನೇಹಿತರಾದ ದೇವ ಮತ್ತು ವರ್ಧ ಅವರ ಸುತ್ತ ಸುತ್ತುತ್ತದೆ, ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ, ಕೊನೆಗೆ ಪ್ರತಿಸ್ಪರ್ಧಿಗಳಾಗುವುದು ಕಥೆಯ ಎಳೆ ಯಾಗಿದೆ. ಶ್ರುತಿ ಹಾಸನ್, ಈಶ್ವರಿ ರಾವ್, ಜಗಪತಿ ಬಾಬು, ಶ್ರೀಯಾ ರೆಡ್ಡಿ ಅವರು ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next