Advertisement

‘ಸಲಾರ್’ಗೆ ʼಎʼ ಸರ್ಟಿಫಿಕೇಟ್‌ ಕೊಟ್ಟ CBFC: ಭರ್ಜರಿ ಆ್ಯಕ್ಷನ್ ಗೆ ಸಿದ್ದರಾಗಿ ಎಂದ ಹೊಂಬಾಳೆ

02:54 PM Dec 11, 2023 | Team Udayavani |

ಹೈದರಾಬಾದ್: ಡಾರ್ಲಿಂಗ್‌ ಸ್ಟಾರ್‌ ಪ್ರಭಾಸ್‌ ಅಭಿನಯದ ಪ್ಯಾನ್‌ ಇಂಡಿಯಾ ʼಸಲಾರ್‌ʼ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳಿರುವುದು ಗೊತ್ತೇ ಇದೆ. ಟ್ರೇಲರ್‌ ನಲ್ಲಿ ಅದರ ಝಲಕ್‌ ನ್ನು ತೋರಿಸಲಾಗಿತ್ತು.

Advertisement

ಬಹುಕೋಟಿ ನಿರ್ಮಾಣದ( 400 ಕೋಟಿ) ʼಸಲಾರ್‌ʼ ರಿಲೀಸ್‌ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಇತ್ತೀಚೆಗೆ ಟ್ರೇಲರ್‌ ರಿಲೀಸ್‌ ಆಗಿದ್ದು, ಇಬ್ಬರು ಸ್ನೇಹಿತರ ನಡುವಿನ ಕಥೆಯನ್ನು ಆ್ಯಕ್ಷನ್ ಅಂಶಗಳೊಂದಿಗೆ ತೋರಿಸಲಾಗಿದೆ. ಟ್ರೇಲರ್‌ ಯೂಟ್ಯೂಬ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ಇದೀಗ ಸಿನಿಮಾದ ಸೆನ್ಸಾರ್‌ ಪೂರ್ಣಗೊಂಡಿದ್ದು, ಸೆನ್ಸಾರ್‌ ಬೋರ್ಡ್‌ ಸಿನಿಮಾಕ್ಕೆ ʼಎʼಸರ್ಟಿಫಿಕೇಟ್‌ ನೀಡಿದೆ.

ಆ್ಯಕ್ಷನ್ ಡ್ರಾಮಕ್ಕಾಗಿ ಸಿದ್ದರಾಗಿ ಎಂದು ಹೊಂಬಾಳೆ ಫಿಲ್ಮ್ಸ್‌ ʼಎʼ ಸರ್ಟಿಫಿಕೇಟ್‌ ಕೊಟ್ಟಿರುವ ಬಗ್ಗೆ ಹೇಳಿದೆ.

ಇದನ್ನೂ ಓದಿ: “Salaar ಸಿನಿಮಾದಲ್ಲಿ ಯಶ್‌ ಅಂಕಲ್‌ ಇದ್ದಾರೆ..” ಸೀಕ್ರೆಟ್‌ ಬಿಟ್ಟು ಕೊಟ್ರಾ ಯುವ ಗಾಯಕಿ?

ಚಿತ್ರದಲ್ಲಿರುವ ಅತಿಯಾದ ಹಿಂಸೆಯ (ಆ್ಯಕ್ಷನ್) ದೃಶ್ಯಗಳಿಂದಾಗಿ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

Advertisement

ಪ್ರಭಾಸ್ ಸಿನಿಮಾದಲ್ಲಿ ʼದೇವʼ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೃಥ್ವಿರಾಜ್ ವರದ ರಾಜಮನ್ನಾರ್  ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಶ್ರುತಿ ಹಾಸನ್, ಜಗಪತಿ ಬಾಬು, ಶ್ರೀಯಾ ರೆಡ್ಡಿ, ಬಾಬಿ ಸಿಂಹ ಮತ್ತು ಟಿನ್ನು ಆನಂದ್ ಮುಂತಾದವರು ನಟಿಸಿದ್ದಾರೆ.

ಪ್ರಭಾಸ್‌ ವೃತ್ತಿ ಜೀವನದಲ್ಲಿ ʼಎʼ ಸರ್ಟಿಫಿಕೇಟ್‌ ಸಿಕ್ಕಿರುವ ಎರಡನೇ ಸಿನಿಮಾ ʼಸಲಾರ್‌ʼ ಆಗಿದೆ. ಈ ಹಿಂದೆ 2013ರಲ್ಲಿ ಬಂದ ಕೊರಟಾಲ ಶಿವ ನಿರ್ದೇಶನದ ‘ಮಿರ್ಚಿ’ ಸಿನಿಮಾಕ್ಕೆ ʼಎʼ ಸರ್ಟಿಫಿಕೇಟ್‌ ನೀಡಲಾಗಿತ್ತು.

ಇದೇ ಡಿ.22 ರಂದು ಸಿನಿಮಾ ತೆರೆ ಕಾಣಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next