ಹೈದರಾಬಾದ್ : ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಅವರು ನಟಿ ಪೂಜಾ ಹೆಗಡೆ ಅವರ ಮೇಲೆ ಕೋಪಗೊಂಡಿದ್ದಾರೆ. ಈ ನಟಿಯ ಮೇಲಿದ್ದ ಗೌರವ ಕಡಿಮೆಯಾಗಿದೆಯಂತೆ ಪ್ರಭಾಸ್ ಅವರಿಗೆ.
ಹೌದು, ಪ್ರಭಾಸ್ ಹಾಗೂ ಪೂಜಾ ಹೆಗಡೆ ರಾಧೆ ಶ್ಯಾಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪೂಜಾ ಜೊತೆ ತೆರೆ ಹಂಚಿಕೊಂಡಿದ್ದಾರೆ ಪ್ರಭಾಸ್. ಈ ಚಿತ್ರದ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಈ ನಡುವೆ ಪ್ರಭಾಸ್ ಅವರಿಗೆ ತಮ್ಮ ಚಿತ್ರದ ನಾಯಕಿ ವಿರುದ್ಧ ಕೋಪಗೊಂಡಿದ್ದಾರಂತೆ. ಇದಕ್ಕೆ ಕಾರಣ ಪೂಜಾ ಹೆಗಡೆ ಅವರು ವರ್ತನೆಯಂತೆ. ಸಮಯಕ್ಕೆ ಸರಿಯಾಗಿ ಚಿತ್ರೀಕರಣದ ಸ್ಥಳಕ್ಕೆ ಬಾರದೆ ಇರುವುದು ಹಾಗೂ ನಿರ್ದೇಶಕರ ಎದುರು ಸ್ಟಾರ್ ಡಂ ತೋರಿಸಿರುವುದು ಪ್ರಭಾಸ್ ಅವರಿಗೆ ಸರಿ ಕಾಣಿಸಿಲ್ಲವಂತೆ. ಹೀಗಾಗಿ ಈ ನಟಿಯ ಜೊತೆ ಮಾತಾಡೋದನ್ನು ಬಿಟ್ಟಿದ್ದಾರಂತೆ.
ರಾಧೆ ಶ್ಯಾಮ ಚಿತ್ರವನ್ನು ರಾಧ ಕೃಷ್ಣ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. 70ರ ದಶಕದ ಪ್ರೇಮ ಕಥೆಯ ಹೂರಣ ಈ ಚಿತ್ರದ ಕಥಾ ವಸ್ತು. 2022 ರ ಜನವರಿ 14 ರಂದು ತೆರೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆಯಂತೆ. ಈ ಸಿನಿಮಾದಲ್ಲಿ ಪ್ರಭಾಸ್ ನಾಯಕ ನಟರಾಗಿ ಕಾಣಿಸಿಕೊಂಡಿದ್ದು, ಇವರಿಗೆ ನಾಯಕಿಯಾಗಿ ಪೂಜಾ ಹೆಗಡೆ ಬಣ್ಣ ಹಚ್ಚಿದ್ದಾರೆ.
ಇನ್ನು ಪ್ರಭಾಸ್ ಅವರು ರಾಧೆ ಶ್ಯಾಮ ಜೊತೆ ಆಧಿಪುರುಷ ಹಾಗೂ ಸಲಾರ್ ಚಿತ್ರದಲ್ಲಿಯೂ ಬ್ಯುಝಿಯಾಗಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಪ್ರಭಾಸ್ ಅವರ ಸಲಾರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ವಿಶೇಷ.