Advertisement

ರಗಡ್ ಲುಕ್ ನ ಪ್ರಭಾಸ್ ಇದೀಗ “ರಾಧೆಶ್ಯಾಮ್”! ಪೋಸ್ಟರ್ ಬಿಡುಗಡೆ, ಟ್ವಿಟರ್ ಟ್ರೆಂಡ್

06:54 PM Jul 10, 2020 | Nagendra Trasi |

ನವದೆಹಲಿ: ದಕ್ಷಿಣ ಭಾರತದ ಸ್ಟಾರ್ ನಟ ಪ್ರಭಾಸ್ ನಟನೆಯ 20ನೇ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಅನ್ನು ಶುಕ್ರವಾರ ಚಿತ್ರತಂಡ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ ಪ್ರಭಾಸ್ ರಾಧೆಶ್ಯಾಮ್ ಚಿತ್ರದ ಫಸ್ಟ್ ಲುಕ್ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ.

Advertisement

ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ಈ ಸಿನಿಮಾದ ಹೆಸರಾಗಲಿ, ಚಿತ್ರಕಥೆಯಾಗಲಿ ಯಾವುದರ ಬಗ್ಗೆಯೂ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿರಲಿಲ್ಲವಾಗಿತ್ತು. ಇಂದು ಪ್ರಭಾಸ್ ನಟನೆಯ 20ನೇ ಸಿನಿಮಾ ಟೈಟಲ್ “ರಾಧೆಶ್ಯಾಮ್” ಎಂದು ಘೋಷಿಸುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ರಾಧೆ ಶ್ಯಾಮ್ ಸಿನಿಮಾದ ಫಸ್ಟ್ ಲುಕ್ ನಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜತೆಗಿರುವ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಈ ಸಿನಿಮಾವನ್ನು ನಿರ್ದೇಶಿಸಿದ್ದು ರಾಧಾಕೃಷ್ಣ ಕುಮಾರ್, ಇದು ಬಿಗ್ ಬಜೆಟ್ ಸಿನಿಮಾವಾಗಿದೆ. ರಾಧೆಶ್ಯಾಮ್ ಸಿನಿಮಾದ ಪ್ರಮುಖ ಚಿತ್ರೀಕರಣ ವಿದೇಶಗಳಲ್ಲಿ ನಡೆದಿತ್ತು ಎಂದು ವರದಿ ತಿಳಿಸಿದೆ.

ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ಸೇರಿದಂತೆ ಮೂವರು ಪ್ರಭಾಸ್ 20ನೇ ಸಿನಿಮಾದ ನಿರ್ಮಾಪಕರಾಗಿದ್ದಾರೆ. ರಾಧೆ ಶ್ಯಾಮ್ ಸಿನಿಮಾ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆ ಕಾಣಲಿದೆ. ಈ ಸಿನಿಮಾದ ಪೋಸ್ಟರ್ ಅನ್ನು ಇನ್ಸ್ ಸ್ಟಾದಲ್ಲಿ ಶೇರ್ ಮಾಡಿರುವ ಪ್ರಭಾಸ್, ಇದು ನಿಮಗಾಗಿ, ನೀವೆಲ್ಲರೂ ಇಷ್ಟಪಡುತ್ತೀರ ಎಂದು ಭಾವಿಸುತ್ತೇನೆ” ಎಂದು ಉಲ್ಲೇಖಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next