Advertisement

ವಿದ್ಯಾರ್ಥಿಗಳು ಮೆಚ್ಚಿದ ಆದರ್ಶ ದೈಹಿಕ ಶಿಕ್ಷಕ ಪ್ರಭಾಕರ್ ಸಿ.ಡಿ

10:21 PM Sep 04, 2022 | Team Udayavani |

ಕೊರಟಗೆರೆ: ಪಟ್ಟಣದ ಹೆಸರಾಂತ ಕಾಳಿದಾಸ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಸಿ.ಡಿ ಪ್ರಭಾಕರ್ ಅವರು ಸೇವೆಯ ಪ್ರಾರಂಭದ ದಿನದಿಂದಲೂ ಮಕ್ಕಳ ಪಾಲಿಗೆ ಆದರ್ಶ ದೈಹಿಕ ಶಿಕ್ಷಕರಾಗಿ ವಿದ್ಯಾರ್ಥಿಗಳಿ ಗೋಸ್ಕರ ತಮ್ಮ ಸೇವೆಯನ್ನು ಮೀಸಲಾಗಿಸಿದ್ದಾರೆ.

Advertisement

ತಂದೆ -ತಾಯಿಯ ಮಾರ್ಗದರ್ಶನ

ಶೈಕ್ಷಣಿಕ ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಚನ್ನಪಟ್ಟಣ ಎಂಬ ಪುಟ್ಟ ಗ್ರಾಮದಲ್ಲಿ ರಾಮಕ್ಕ ಮತ್ತು ದೊಡ್ಡಕಾವಲ್ಲಯ್ಯ ಡಿ.ಕೆ ಅವರಿಗೆ ನಾಲ್ಕನೇ ಮಗನಾಗಿ ಜುಲೈ10.1986ರಲ್ಲಿ ಜನಿಸಿದರು. ಇವೆ ತಂದೆ ವೃತ್ತಿಯಲ್ಲಿ ಹಾರ್ಮೋನಿಯ ಮಾಸ್ತರ್ ಆಗಿ ರಂಗಭೂಮಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೆ ಬಾಲ್ಯದಲ್ಲಿಯೇ ಓದಿನಲ್ಲಿಯೇ ಆಸಕ್ತಿ ಇದ್ದು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವಗ್ರಾಮದಲ್ಲಿಯೇ ಮುಗಿಸಿ ಹಾಗೂ ಪ್ರೌಢ ಶಿಕ್ಷಣವನ್ನು ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮುಗಿಸಿದರು. ಪಿಯುಸಿಯನ್ನು ಶ್ರೀನಿವಾಸ ಪದವಿಪೂರ್ವ ಕಾಲೇಜಿನಲ್ಲಿ, ಪದವಿಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊರಟಗೆರೆ ಹಾಗೂ ಬಿಪಿಇಡಿ ತರಬೇತಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ‌ ಮುಗಿಸಿ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯ , ಬಿಇಡಿ ವ್ಯಾಸಂಗವನ್ನು ತುಮಕೂರು ವಿಶ್ವವಿದ್ಯಾಲಯದಲ್ಲಿ, ಎಂಪಿಇಡಿ ಪದವಿಯನ್ನು ಸಿಂಗಾನಿಯಾ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇವರು ಪ್ರಸ್ತುತ ಕಾಳಿದಾಸ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಆರು ವರ್ಷಗಳಿಂದ
ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸ್ವಾಮಿ ವಿವೇಕಾನಂದ, ಡಾ.ಬಿ.ಆರ್ ಅಂಬೇಡ್ಕರ್,ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶ ತತ್ವ ಸಿದ್ದಾಂತಗಳ ನ್ನು ಆದಾರವಾಗಿಟ್ಟುಕೊಂಡು ಯಶಸ್ವಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಕ್ಕಳಿಗೆ ಕ್ರೀಡಾ ಮನೋಭಾವನೆ ಬೆಳೆಸುವುದು

ಶ್ರೀ ಯುತ ಸಿ.ಡಿ ಪ್ರಭಾಕರ್ ರವರು ವಿದ್ಯಾರ್ಥಿಗಳಿಗೆ ಕ್ರೀಡಾ ಮನೋಭಾವನೆ ಬೆಳೆಸುವುದರ ಜೊತೆಗೆ ಕ್ರೀಡೆಯಲ್ಲಿ ಮಕ್ಕಳನ್ನು ಭಾಗವಹಿಸುತೆ ಪ್ರೋತ್ಸಾಹ ಮತ್ತು ಉತ್ತೇಜನ ‌ನೀಡುವಲ್ಲಿ ಇವರ ಪಾತ್ರ ಬಹಳಷ್ಟು ಪ್ರಾಮುಖ್ಯತೆ ವಹಿಸಿದ್ದಾರೆ. ಕಬ್ಬಡ್ಡಿ, ಖೋ ಖೋ, ವಾಲಿಬಾಲ್ ಥ್ರೋಬಾಲ್ ಗುಂಪು ಆಟದಲ್ಲಿ ಮಕ್ಕಳನ್ನು ತಾಲೂಕು, ಜಿಲ್ಲೆ ಮತ್ತು ವಿಭಾಗ ಮಟ್ಟದಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಿದ್ದಾರೆ.

Advertisement

2018-19 ಸಾಲಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣ ದಾವಣಗೆರೆಯಲ್ಲಿ‌ ನಡೆದ
ವಿಭಾಗ ಮಟ್ಟದ ಶಟಲ್ ಬಾಲ್ ಬ್ಯಾಟ್ ಮಿಂಟನ್ ಪಂದ್ಯಾವಳಿಯಲ್ಲಿ ನಮ್ಮ ಶಾಲೆಯ ತಂಡದ ವಿದ್ಯಾರ್ಥಿನಿಯರಿಗೆ ಉತ್ತಮ‌ ತರಭೇತಿ ನೀಡಿ ಭಾಗವಹಿಸಿಜಯಶೀಲರನ್ನಾಗಿಸಲು ಶಿಕ್ಷಕರ ಪಾತ್ರ ಸಕ್ರಿಯವಾಗಿದೆ.

ಬಡ ವಿದ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿ ವಿತರಣೆ

ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಟ್ಟೆ, ನೋಟ್ ಪುಸ್ತಕ,ಬ್ಯಾಗ್ ,ಲೇಖನ ಸಾಮಗ್ರಿಗಳನ್ನು ಪ್ರತಿ ವರ್ಷವೂ ಸಹ ದಾನಿಗಳಿಂದ ಪಡೆದು ವಿತರಣೆ ಮಾಡುತ್ತಾ ಬಂದಿರುವುದು ಇವರ ವಿಶೇಷವಾಗಿದೆ. ಮಕ್ಕಳಿಗೆ ಯೋಗಾಭ್ಯಾಸ, ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಮಕ್ಕಳಿಗೆ ಕವಾಯತು ಕೌಶಲ್ಯವನ್ನು ಹೇಳಿ ಕೊಡುವುದು. ಶಾಲೆಯಲ್ಲಿ ಮಕ್ಕಳಿಗೆ ಶಿಸ್ತು ಮೂಡಿಸುವುದು ಮತ್ತು ಕ್ರೀಡಾ ವಿಭಾಗದಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಇವರ ಮೂಲ ಗುರಿಯಾಗಿದೆ.

ನನಗೆ ಶಟಲ್ ಬ್ಯಾಡ್ಮಿಂಟನ್ ಆಟದಲ್ಲಿ ಹೆಚ್ಚು ಆಸಕ್ತಿ ಇತ್ತು. ಆಟಕ್ಕೆ ಪೂರಕವಾದ ತರಭೇತಿ ನೀಡಿದ್ದಾರೆ. ಯೋಗಾಭ್ಯಾಸ,ಧ್ಯಾನ ಮತ್ತು ಕವಾಯತು ದಿನ ನಿತ್ಯ ಅಭ್ಯಾಸ ಮಾಡಿಸುತ್ತಾ ಬಂದಿರುವುದು ವಿಶೇಷವಾಗಿದೆ. ರಾಷ್ಟ್ರೀಯ ಹಬ್ಬಗಳ ಸಂಧರ್ಭದಲ್ಲಿ ಎಲ್ಲರಿಗೂ ದೇಶ ಪ್ರೇಮ, ದೇಶಾಭಿಮಾನ ಮೂಡುವಂತೆ ಪ್ರೇರಣೆಯಾಗಿದ್ದಾರೆ.

ಪದ್ಮಾವತಿ. ಎಸ್ .ಕೆ 9 ನೇ ತರಗತಿ

ಇವರು ಸರಳವಾದ ವ್ಯಕ್ತಿ. ವೃತ್ತಿ ಜೀವನದಲ್ಲಿ ಎಲ್ಲರಲ್ಲೂ ಹೊಂದಾಣಿಕೆ, ಸಹಕಾರ ಮತ್ತು ಜವಾಬ್ದಾರಿಯುತ ದೈಹಿಕ ಶಿಕ್ಷಕರು. ಇವರು ಸಂಘಟನಾ ಮನೋಭಾವನೆ ಹೊಂದಿದ್ದು,ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳಿಗೆ ಭಾಗವಹಿಸುವಂತೆ ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಮಕ್ಕಳು ಪಂದ್ಯಾವಳಿಯಲ್ಲಿ ಭಾಗವಹಿಸಲು ಪ್ರೇರಣೆ, ಧೈರ್ಯ,ತರಭೇತಿ ನೀಡುವಲ್ಲಿ ಯಶಸ್ವಿ ಶಿಕ್ಷಕರಾಗಿದ್ದಾರೆ.

ಚಂದ್ರಕಲಾ.ಎಸ್.ಕೆ ಸಹ ಶಿಕ್ಷಕರು ಕಾಳಿದಾಸ ಪ್ರೌಢಶಾಲೆ.

ನಮ್ಮ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಬೇಕಾದ ವಿದ್ಯಾರ್ಥಿಗಳಲ್ಲಿ ಶಿಸ್ತು ,ಕ್ರೀಡಾ ಮನೋಭಾವನೆ, ಜ್ಞಾನ ಕೌಶಲಗಳನ್ನು ಬೆಳೆಸುವಲ್ಲಿ ಇವರ ಪಾತ್ರ ಬಹು ಮುಖ್ಯವಾಗಿದೆ. ಮಕ್ಕಳನ್ನು ಕ್ರೀಡೆಯಲ್ಲಿ ತಾಲೂಕು, ಜಿಲ್ಲೆ, ವಿಭಾಗಮಟ್ಟಕ್ಕೂ ಕೊಂಡೊಯ್ಯಲು ಮಕ್ಕಳಿಗೆ ಅತ್ಯುತ್ತಮವಾದ ಕ್ರೀಡಾ ತರಭೇತಿ ನೀಡಿ ತನ್ನ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆ ಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ.

ನಾಗಭೂಷಣ್ ಜಿ.ಡಿ. ನಿರ್ದೇಶಕ ಶ್ರೀ ಕಾಳಿದಾಸ ವಿದ್ಯಾವರ್ಧಕ ಸಂಘ ತುಮಕೂರು.

ಪ್ರಭಾಕರ್ ಸಿ.ಡಿ ರವರು ದೈಹಿಕ ಶಿಕ್ಷಕರಾಗಿ ಕಾಳಿದಾಸ ಪ್ರೌಡಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯಲ್ಲಿ ಆಚರಿಸುವ ರಾಷ್ಟ್ರೀಯ ಹಬ್ಬ ಕ್ರೀಡಾ ದಿನಾಚರಣೆಯಲ್ಲಿ ಅತ್ಯಂತ ದಕ್ಷತೆ ಮತ್ತು ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಹುದ್ದೆ ಇನ್ನೂ ಅನುದಾನಕ್ಕೆ ಒಳಪಟ್ಟಿಲ್ಲ. ಇವರ ಸೇವೆಯನ್ನು ಗುರುತಿಸಿ, ಮುಂದಿನ ದಿನಗಳಲ್ಲಿ ಜಿಲ್ಲಾ ಉತ್ತಮ ದೈಹಿಕ ಶಿಕ್ಷಕ ಪ್ರಶಸ್ತಿಗೆ ಶಿಪಾರಸ್ಸು ಮಾಡಲು ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸತ್ತಿರುವ ಶಿಕ್ಷಕರಿಗೂ ಶಿಕ್ಷಣ ಇಲಾಖೆಯ ನಿಯಾಮವಳಿಯಲ್ಲಿ ಅವಕಾಶವಿದೆಯೇ ಎಂದು ಪರಿಗಣಿಸಿ, ಜಿಲ್ಲಾ ಹಂತದಲ್ಲಿ ಅಯ್ಕೆ ಮಾಡಲಾಗುತ್ತದೆ.

ಸುಧಾಕರ್ .ಎನ್.ಎಸ್. ಬ್ಲಾಕ್ ಶಿಕ್ಷಣಾಧಿಕಾರಿ ಕೊರಟಗೆರೆ.

ಸಿದ್ದರಾಜು. ಕೆ.ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next