Advertisement

ರಸ್ತೆಯಲ್ಲೇ ಹರಡಿದ ಪಿಪಿಇ ಕಿಟ್‌: ಜನರಲ್ಲಿ ಆತಂಕ

12:40 PM Oct 03, 2020 | Team Udayavani |

ನೆಲಮಂಗಲ: ಇತ್ತೀಚೆಗೆ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಭೀತಿ ಒಂದೆಡೆಯಾದರೆ ನಗರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಜನರಲ್ಲಿ ಕೋವಿಡ್ ಜತೆಗೆ ಹೆಸರಿಲ್ಲದ ರೋಗಗಳಿಗೆ ತುತ್ತಾಗುವ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ.

Advertisement

ಗುರುವಾರ ರಾತ್ರಿ ಕಾರಿನಲ್ಲಿ ಕಿಡಿಗೇಡಿಗಳು ದೊಡ್ಡಗಾತ್ರದ ಪ್ಲಾಸ್ಟಿಕ್‌ ಕವರ್‌ ತುಂಬಾ ಯಾವುದೋ ಆಸ್ಪತ್ರೆಯವರು ಉಪಯೋಗಿಸಿ ಬಿಸಾಡಿದ8-10 ಪಿಪಿಇ ಕಿಟ್‌, ಸೂಜಿ, ಸಿರಿಂಜ್‌, ರೋಗಿಗಳು ಅಥವಾ ವೈದ್ಯಕೀಯ ಸಿಬ್ಬಂದಿ ತಿಂದು ಬಿಸಾಡಿದ್ದ ಊಟದ ಪೊಟ್ಟಣ, ಮತ್ತಿತರೆ ಅಪಾಯಕಾರಿ ವಸ್ತುಗಳನ್ನು ನಗರದ ಹೃದಯ ಭಾಗದಪರಮಣ್ಣ ಲೇಔಟ್‌ಪಾರ್ಕ್‌ಮುಂದಿನ ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದಾರೆ.

ಹೆದರಿದರು: ನಾಯಿಗಳು ಪ್ಲಾಸ್ಟಿಕ್‌ ಕವರ್‌ ಎಳೆದಾಡಿದ ಪರಿಣಾಮ ರಸ್ತೆ ತುಂಬಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿತ್ತು. ಪರಿಣಾಮ ವಾಯು ವಿಹಾರಕ್ಕೆ ಬಂದವರು, ಅಕ್ಕಪಕ್ಕದ ಮನೆಯವರು ಹೆದರಿ ಓಡಿದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಗರದಲ್ಲಿ ಅವ್ಯವಸ್ಥೆ ಬಗ್ಗೆ ಭೀತಿ ಎದುರಾಗಿದೆ. ನಮ್ಮ ಮನೆಯಲ್ಲೂ ಚಿಕ್ಕ ಚಿಕ್ಕ ಮಕ್ಕಳು ಮತ್ತು ವಯೋವೃದ್ಧರಿದ್ದು ಅನಾರೋಗ್ಯದ ಭಯ ಹೆಚ್ಚಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿ ಕಾರಿಗಳು ಸೂಕ್ತ ಕ್ರಮ ಕೈಗೊಂಡು ಉದ್ಯಾನ ವನದ ಅಂದವನ್ನು ಹೆಚ್ಚಿಸಿ ಸಾರ್ವಜನಿಕರ ಉಪ ಯೋಗಕ್ಕೆ ನೀಡಬೇಕೆಂದು ನಾಗರೀಕರ ಪರವಾಗಿ ಸ್ಥಳೀಯ ನಿವಾಸಿ ಎಸ್‌.ಕುಮಾರ್‌ ಮನವಿ ಮಾಡಿದರು. ನಗರದ ಪ್ರಮುಖ ಬಡಾವಣೆ ಯಾದ ಪರ ಮಣ್ಣ ಲೇ ಔಟ್‌ನ20ನೇ ವಾರ್ಡ್‌ ನಲ್ಲಿರುವ ಸಾರ್ವಜನಿಕ ಉದ್ಯಾನವನದ ತುಂಬಾ ಅನಾಗರಿಕರು ಹಲವು ದಿನಗಳಿಂದ ರಾತ್ರಿ ಸಮಯದಲ್ಲಿ ಅನುಪಯುಕ್ತ ಮತ್ತು ಅಪಾಯಕಾರಿ ಕಸ ತಂದು ಸುರಿಯುತ್ತಿದ್ದಾರೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಸ ಕೊಳೆತು ನಾರುತ್ತಿರುವ ಜೊತೆಗೆ ಸೊಳ್ಳೆ, ನೊಣ, ರೋಗಾಣುಗಳ ಉಗಮ ಸ್ಥಾನವಾಗಿ ಮಾರ್ಪಟ್ಟು ಸುತ್ತಮುತ್ತಲಿನ ಮನೆಯವರಿಗೆ ರೋಗದ ಭೀತಿ ಎದುರಾಗಿದೆ ಎಂದು ಹಿರಿಯ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ವಿದ್ಯಾವಂತರೂ ಆಸ್ಪತ್ರೆಯಲ್ಲಿ ಸಂಗ್ರಹವಾಗುವ ಅಪಾಯಕಾರಿ ತ್ಯಾಜ್ಯ ಸೇರಿದಂತೆ ಅನು ಪಯುಕ್ತ ಕಸ ತಂದು ಎಲ್ಲೆಂದರಲ್ಲೇ ಎಸೆದು ಹೋಗುತ್ತಿರುವುದರಿಂದ ಇದು ಪಾರ್ಕ್‌ ಎನಿಸದೆ ತಿಪ್ಪೆಗುಂಡಿ ಅಥವಾ ತ್ಯಾಜ್ಯ ಸಂಗ್ರಹಣಾ ಘಟಕವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಪ್ರತಿಷ್ಠಿತ ಬಡಾವಣೆ: ಪರಮಣ್ಣ ಲೇಔಟ್‌ ವಾರ್ಡ್‌ನಲ್ಲಿ ಪ್ರತಿಷ್ಠಿತ ಬ್ಯಾಂಕ್‌, ದೊಡ್ಡ ದೊಡ್ಡ ವ್ಯಾಪಾರ ಕೇಂದ್ರ, ಹಾಸ್ಟೆಲ್‌, ಹಲವು ಆಸ್ಪತ್ರೆ, ನರ್ಸಿಂಗ್‌ಹೋಮ್‌, ಡಯೋಗ್ನೊàಸ್ಟಿಕ್‌ ಕೇಂದ್ರ ಗಳಿವೆ. ಅಲ್ಲದೇ, ಉನ್ನತ ಮಟ್ಟದ ಅಧಿಕಾರಿಗಳು ವಿವಿಧ ಸಂಸ್ಥೆಗಳ ಮುಖ್ಯಸ್ಥರು ನೆಲೆಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ಅವ್ಯವಸ್ಥೆ ಸರಿಪಡಿಸದಿರುವುದು ವಿಪರ್ಯಾಸ. ಕೂಡಲೇ ಸಂಬಂಧಪಟ್ಟಅಧಿಕಾರಿಗಳು ನಗರದ ಸ್ವಚ್ಛತೆ ಹಾಳುಮಾಡುವ ಅನಾಗರಿಕರಿಗೆ ತಕ್ಕ ಪಾಠ ಕಲಿಸಿ ನಗರದ ಸೌಂದರ್ಯದ ಜತೆಗೆ ನಾಗರಿಕರ ಆರೋಗ್ಯ ಸಂರಕ್ಷಣೆಗೆ ಮುಂದಾಗ ಬೇಕೆಂಬುದು “ಉದಯವಾಣಿ’ಯ ಆಶಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next