Advertisement

ಸಂಪೂರ್ಣ ನೀಗಲಿದೆ ವಿದ್ಯುತ್‌ ಸಮಸ್ಯೆ

11:02 AM Oct 31, 2021 | Shwetha M |

ಮುದ್ದೇಬಿಹಾಳ: ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ವಿದ್ಯುದ್ದೀಕರಣ ಯೋಜನೆಗೆ 3 ಲಕ್ಷ ಕೋಟಿ ರೂ.ಗಳನ್ನು ವಿವಿಧ ರಾಜ್ಯಗಳಿಗೆ ನೀಡಿದ್ದಾರೆ. ಇದರಲ್ಲಿ ನಮ್ಮ ರೈತರ ಬದುಕು ಹಸನಾಗಿಸುವ ತ್ರೀ ಫೇಸ್‌ ವಿದ್ಯುತ್‌ ಸೌಲಭ್ಯವೂ ಸೇರಿದೆ. ಇದಕ್ಕಾಗಿ ವಿಜಯಪುರ ಜಿಲ್ಲೆಗೆ 3500 ಕೋಟಿ ರೂ ಮಂಜೂರಾಗಿದ್ದರೆ ಮುದ್ದೇಬಿಹಾಳ ತಾಲೂಕು ಒಂದಕ್ಕೇನೆ 280 ಕೋಟಿ ರೂ. ಮಂಜೂರಾತಿ ಕೊಡಿಸಿದ್ದೇನೆ ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ತಂಗಡಗಿ ಗ್ರಾಮದ ಚರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಶನಿವಾರ ಮುದ್ದೇಬಿಹಾಳ ತಾಲೂಕು ಕಬ್ಬು ಬೆಳೆಗಾರರ ಸಂಘವನ್ನು ವೇದಿಕೆಯ ಜ್ಯೋತಿ ಬೆಳಗಿಸುವ ಮೂಲಕ ಹಾಗೂ ಕಬ್ಬಿನ ಸೂಡು ಕಟ್ಟುವ ಮೂಲಕ ವಿನೂತನವಾಗಿ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನ ವಿವಿಧೆಡೆ ಪ್ರತ್ಯೇಕ ವಿದ್ಯುತ್‌ ಫೀಡರ್‌ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಕೃಷ್ಣಾ ನದಿ ತೀರದಲ್ಲಿ ಬರುವ ತಂಗಡಗಿ ಭಾಗಕ್ಕೆ 200 ಕೆವಿ ಸ್ಟೇಷನ್‌, ಎರಡು ಪ್ರತ್ಯೇಕ ಫೀಡರ್‌ ಸ್ಥಾಪಿಸಲಾಗುತ್ತಿದೆ. ಇದರಿಂದ ರೈತರಿಗೆ ನಿರಂತರ ಗುಣಮಟ್ಟದ ವಿದ್ಯುತ್‌ ದೊರಕಿ ಅನುಕೂಲ ಆಗುತ್ತದೆ. ಮುಂಬರುವ ದಿನಗಳಲ್ಲಿ ಈ ಮತಕ್ಷೇತ್ರದ ವಿದ್ಯುತ್‌ ಸಮಸ್ಯೆ ಸಂಪೂರ್ಣ ನೀಗಲಿದೆ ಎಂದರು.

ನಮ್ಮ ತಾಲೂಕಿನ ರೈತರು ಅದೃಷ್ಟವಂತರು. ತಾಲೂಕಿನಾದ್ಯಂತ ಕೆರೆಗಳನ್ನು ತುಂಬಿಸಲಾಗಿದೆ. ನೀರು ಹೆಚ್ಚಾದಂತೆ ಕಬ್ಬಿನ ಬೆಳೆಯ ಕ್ಷೇತ್ರವೂ ಹೆಚ್ಚಾಗುತ್ತಿದೆ. ರೈತರು ಒಂದೇ ಬೆಳೆಗೆ ಒತ್ತು ನೀಡದೇ ಮಿಶ್ರ ಬೆಳೆ ಪದ್ಧತಿಗೆ ಆದ್ಯತೆ ನೀಡಬೇಕು. ಲಕ್ಷಗಟ್ಟಲೆ ಸಂಬಳ ಪಡೆಯುವ ಸಾಫ್ಟವೇರ್‌ ಎಂಜಿನಿಯರುಗಳು ಅದನ್ನು ಬಿಟ್ಟು ಕೃಷಿಯಲ್ಲಿ ದುಡಿಮೆ ಮಾಡಿ ಲಕ್ಷಾಂತರ ಲಾಭ ಪಡೆಯುತ್ತಿದ್ದಾರೆ ಅಂದರೆ ಇದು ನಮ್ಮ ರೈತರಿಗೆ ಏಕೆ ಸಾಧ್ಯವಿಲ್ಲ ಅನ್ನೋ ಚಿಂತನೆ ನಡೆಸಬೇಕು ಎಂದರು.

ಇದನ್ನೂ ಓದಿ: ರಕ್ಕಸ ನಾಯಿಗಳ ಅಟ್ಟಹಾಸಕ್ಕೆ ಮುಗ್ಧ ಜೀವ ಬಲಿ

Advertisement

ಬಸರಕೋಡದ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ, ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ಅವರು ಕಬ್ಬು, ಮಿಶ್ರ ಬೆಳೆ ಪದ್ಧತಿ ಮುಂತಾದವುಗಳ ಕುರಿತು ಉಪನ್ಯಾಸ ನೀಡಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಹಡಪದ ಅಪ್ಪಣ್ಣ ಸಂಸ್ಥಾನ ಮಠದ ಅನ್ನದಾನ ಭಾರತಿ ಅಪ್ಪಣ್ಣ ಶ್ರೀಗಳು ಆಶೀರ್ವಚನ ನೀಡಿದರು.

ಗ್ರಾಪಂ ಅಧ್ಯಕ್ಷ ಚರಲಿಂಗಪ್ಪ ತಾಳಿಕೋಟಿ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಬಿಜೆಪಿ ಹಿಂದುಳಿದ ಮೋರ್ಚಾ ಮುಖಂಡ ಲಕ್ಷ,ಣ ಬಿಜ್ಜೂರ, ಬಿಜೆಪಿ ಧುರೀಣರಾದ ಬಸವರಾಜ ಗುಳಬಾಳ, ಅಪ್ಪು ಧನ್ನೂರ, ಬಾಲಾಜಿ ಶುಗರ್ ಪ್ರತಿನಿ ಧಿ ಎಚ್‌. ಎನ್‌. ಯಲ್ಲಡಗಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಮಾಳಿಂಗರಾಯ ಗುಬಚಿ, ಉಪಾಧ್ಯಕ್ಷ ವಿರೂಪಾಕ್ಷಿ ಸಾಲಗುಂದಿ, ಕಾರ್ಯದರ್ಶಿ ಭೀಮಪ್ಪ ಕಂಬಳಿ, ಖಜಾಂಚಿ ರವಿ ಓಲೇಕಾರ, ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಒಡೆಯರ್‌, ಸದಸ್ಯ ಬಸವರಾಜ ನಿಡಗುಂದಿ ವೇದಿಕೆಯಲ್ಲಿದ್ದರು. ಸಂಘದ ಸದಸ್ಯರಾದ ಗುರುಸ್ವಾಮಿ ಪೂಜಾರಿ, ಬಸವರಾಜ ದೇಸಣಗಿ, ಅಯ್ಯಪ್ಪ ಗೋನಾಳ, ಶರಣಬಸಪ್ಪ ಕಮಲಾಪುರ, ಲಚಮಗೌಡ ಪಾಟೀಲ, ಪರಶುರಾಮ ಮಾಳಗೊಂಡ, ಕೆಂಚಪ್ಪ ಲಕ್ಕಣ್ಣವರ, ಅಶೋಕ ಸುರಪುರ, ಸಂಗನಗೌಡ ಬಿರಾದಾರ, ಹನುಮಪ್ಪ ಅಮರವಾಡಗಿ, ಹುಲಗಪ್ಪ ಚಲವಾದಿ, ಬಸವರಾಜ ಹರನಾಳ, ರಮೇಶ ಮಲಗೌಡರ, ಬಸಪ್ಪ ಬಟಕುರ್ಕಿ, ಸಿದ್ದಪ್ಪ ಕಂಬಳಿ, ತಂಗಡಗಿ, ಕಮಲದಿನ್ನಿ, ಗಂಗೂರ, ಅಮರಗೋಳ ಗ್ರಾಮಗಳ ಗಣ್ಯರು, ಕಬ್ಬು ಬೆಳೆಗಾರರು ಸೇರಿ ಹಲವರು ಪಾಲ್ಗೊಂಡಿದ್ದರು. ಸಿದ್ದಣ್ಣ ಹೊಳಿ ಸ್ವಾಗತಿಸಿದರು. ರಮೇಶ ಲಿಂಗದಳ್ಳಿ ನಿರೂಪಿಸಿದರು. ಶಿವಮಲ್ಲಯ್ಯ ಹಿರೇಮಠ ವಂದಿಸಿದರು.

ಅಜಯ್‌ ನಿಲುಗಲ್ಲ, ಅನಿಲ ತಾಳಿಕೋಟಿ, ಸುಭಾನುಲ್ಲಾ ನದಾಫ, ಭೀಮು ಭಜಂತ್ರಿ, ಜಗದೀಶ ಗೋನಾಳ, ಶಿವಯ್ಯ ಪಾರ್ವತಿಮಠ ಕಾರ್ಯಕ್ರಮ ನಿರ್ವಹಿಸಿದರು. ಕಬ್ಬು ಬೆಳೆಗಾರರ ಸಂಘ ಕಬ್ಬಿಗೆ ಬೆಲೆ ಕೊಡಿಸಲು, ಇದಕ್ಕಾಗಿ ಹೋರಾಟ ನಡೆಸಲು ಸೀಮಿತ ಆಗಬಾರದು. ಕಬ್ಬು ಬೆಳೆಯುವ ಪದ್ಧತಿ ಬಗ್ಗೆ, ಮಣ್ಣಿನ ಫಲವತ್ತತೆ, ನೀರಿನ ಬಳಕೆ, ಎಕರೆಗೆ ಎಷ್ಟು ಟನ್‌ ಕಬ್ಬು ಬೆಳೆಯಬಹುದು ಎನ್ನುವ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. -ಎ.ಎಸ್‌. ಪಾಟೀಲ ನಡಹಳ್ಳಿ, ಶಾಸಕರು, ಮುದ್ದೇಬಿಹಾಳ

Advertisement

Udayavani is now on Telegram. Click here to join our channel and stay updated with the latest news.

Next