Advertisement

ರೊಚ್ಚಿಗೆದ್ದ “ಪವರ್ ಸ್ಟಾರ್”ಅಭಿಮಾನಿಗಳು; ರಾಮ್ ಗೋಪಾಲ್ ವರ್ಮಾ ಕಚೇರಿ ಧ್ವಂಸ

08:45 PM Jul 24, 2020 | Nagendra Trasi |

ಹೈದರಾಬಾದ್:ಟಾಲಿವುಡ್ ನಟ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸ್ವಯಂಘೋಷಿತ ಅಭಿಮಾನಿಗಳು ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರ ಕಚೇರಿ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ರಾಮ್ ಗೋಪಾಲ್ ವರ್ಮಾ ಅವರ ಕಚೇರಿ ಕಲ್ಲು ತೂರಾಟ ನಡೆಸಿ, ಕಿಟಕಿ ಗಾಜು ಪುಡಿಗೈದಿದ್ದಲ್ಲದೇ, ಪೀಠೋಪಕರಣ ಧ್ವಂಸಗೊಳಿಸಿರುವುದಾಗಿ ವರದಿ ವಿವರಿಸಿದೆ. ರಾಮ್ ಗೋಪಾಲ್ ವರ್ಮಾ ಅವರು “ಪವರ್ ಸ್ಟಾರ್ ” ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿರುವುದರ ವಿರುದ್ಧ ಪವನ್ ಕಲ್ಯಾಣ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.

“ಪವರ್ ಸ್ಟಾರ್” ಸಿನಿಮಾ ಪವನ್ ಕಲ್ಯಾಣ್ ಅವರ 2019ರ ರಾಜಕೀಯದ ಸೋಲಿನ ಕಥಾ ಹಂದರವನ್ನು ಹೊಂದಿದೆ ಎಂದು ಹೇಳಲಾಗಿದೆ. ಪವರ್ ಸ್ಟಾರ್ ಸಿನಿಮಾ ಘೋಷಿಸಿದ ದಿನದಿಂದಲೇ ಪವನ್ ಕಲ್ಯಾಣ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಾಮ್ ಗೋಪಾಲ್ ವರ್ಮಾ ಅವರನ್ನು ಕಟುವಾಗಿ ಟೀಕಿಸಲು ಆರಂಭಿಸಿರುವುದಾಗಿ ವರದಿ ತಿಳಿಸಿದೆ.

ಪವರ್ ಸ್ಟಾರ್ ಸಿನಿಮಾವನ್ನು ತಮ್ಮ ಅಧಿಕೃತ ವೆಬ್ ಸೈಟ್ ಆರ್ ಜಿವಿ ವರ್ಲ್ಡ್ ನಲ್ಲಿ ಬಿಡುಗಡೆ ಮಾಡುವುದಾಗಿ ವರ್ಮಾ ಘೋಷಿಸಿದ್ದಾರೆ. ಪವರ್ ಸ್ಟಾರ್ ಸಿನಿಮಾ ಟ್ರೈಲರ್ ಈಗಾಗಲೇ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದ್ದು, 35 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next