Advertisement
ಭಾರತೀಯ ಸಂಸ್ಕೃತಿಯಲ್ಲಿ ಓಂಕಾರಕ್ಕೆ ಅತಿಯಾದ ಮಹಣ್ತೀವಿದೆ. ಪ್ರತಿಯೊಂದು ವೇದಮಂತ್ರವೂ ಓಂಕಾರದಿಂದಲೇ ಆರಂಭವಾಗುತ್ತದೆ. ದೇವರ ನಾಮಸ್ಮರಣೆ ಮಾಡುವಾಗಲೂ ಓಂ ಶಬ್ದದಿಂದಲೇ ಆರಂಭ ಮಾಡಲಾಗುತ್ತದೆ. ಓಂ ಕಾರದ ಮೂಲಕ ಆರಂಭವಾದ ದೇವನಾಮಾರ್ಚನೆಯು ಹೆಚ್ಚು ಪರಿಣಾಮಕಾರಿ ಎಂದು ವೇದದಲ್ಲಿ ಹೇಳಲಾಗಿದೆ. ಓಂ ಎಂಬ ಪದಕ್ಕೆ ವಿಶೇಷವಾದ ಶಕ್ತಿಯಿದೆ. ಓಂಕಾರವು ಧ್ಯಾನದ ಸಾಧನವೂ ಹೌದು. ತಪಸ್ಸನ್ನು ಮಾಡುತ್ತಿರುವವರು ಓಂಕಾರವನ್ನು ಪಠಿಸುತ್ತಾರೆ. ಆ ಮೂಲಕ ಸಿದ್ಧಿಯನ್ನು ಪಡೆಯುತ್ತಾರೆ. ಯೋಗಸಿದ್ಧಿಯಲ್ಲೂ ಓಂಕಾರದ ಬಳಕೆಯಿದೆ. ಓಂ ಎಂಬುದು ಕೇವಲ ಒಂದು ಅಕ್ಷರವಲ್ಲ. ಅದು ಅ ಉ ಮ ಎಂಬ ಮೂರು ಅಕ್ಷರಗಳ ಸಂಗಮ. ಓಂ ಎಂಬುದು ಪ್ರಣವ ಸ್ವರೂಪ.
Related Articles
Advertisement
ಇದರಿಂದ ಸ್ವರ್ಗಲೋಕವಾಸಿಯಾಗುವ ಭಾಗ್ಯ ದೊರೆಯುತ್ತದೆ. ಇನ್ನು ಕೊನೆಯ ಮಾತ್ರೆಯಾದ ಮಕಾರವನ್ನು ಸೇರಿಸಿ ಓಂಕಾರವನ್ನು ಧ್ಯಾನಿಸುವುದರಿಂದ ಪರಮಪುರುಷನು ಒಲಿಯುತ್ತಾನೆ. ಮಕಾರವು ಸಾಮಶಕ್ತಿ ಮತ್ತು ಸುವಃ ಎಂಬ ದ್ಯುಲೋಕದೊಡನೆ ಸಂಬಂಧ ಹೊಂದಿರುವುದರಿಂದ ಸಾಮಶಕ್ತಿಗಳಿಂದ ಮೇಲಕ್ಕೆ ಒಯ್ಯಲ್ಪಡುವನು. ಹೀಗೆ ಮಾನವನು ಏಕಾಗ್ರಬುದ್ಧಿಯಿಂದ ನಿರಂತರವಾಗಿ ಓಂಕಾರವನ್ನು ಪಠಿಸುವುದರಿಂದ ಪಾಪಗಳೆಲ್ಲ ಕಳೆದು ಪುಣ್ಯಬಲವನ್ನು ಪಡೆಯುತ್ತಾನೆ. ಬ್ರಹ್ಮಲೋಕವನ್ನು ಸುಲಭವಾಗಿ ತಲುಪಿ, ಪಿಂಡಬ್ರಹ್ಮಾಂಡಗಳೆಂಬ ಬ್ರಹ್ಮಪುರದಲ್ಲಿ ಪರಮಪುರುಷನನ್ನು ಸಾಕ್ಷಾತ್ಕರಿಸುವನು. ಪಾಪರಹಿತನಾಗುತಾನೆ. ಮತ್ತೆ ಭೂಮಿಯಲ್ಲಿ ಹುಟ್ಟದೆ, ತೇಜೋಭೂತನಾಗಿ ಜೀವನದ ಹಿಂದಿನ ಮೂಲಸ್ಥಾನಕ್ಕೆ ತಲುಪಿಬಿಡುತ್ತಾನೆ. ಹೀಗೆ ಓಂಕಾರ ಅಥವಾ ಪ್ರಣವೋಪಾಸನೆಯಿಂದ ಮೋಕ್ಷ ವನ್ನು ಪಡೆಯುವಂಥವನಾಗುತ್ತಾನೆ. ಹೀಗೆ ಪ್ರಶ್ನೋಪನಿಷತ್ತಿನಲ್ಲಿ ಓಂಕಾರದ ಸ್ವರೂಪ ಮತ್ತು ಮಹಣ್ತೀವನ್ನು ವಿವರಿಸಲಾಗಿದೆ.
ಓಂ ಎಂಬ ಪದವು ಜೀವನೋತ್ಸಾಹವನ್ನು ನೀಡುವಂಥದ್ದಾಗಿದೆ. ಇದನ್ನು ನಾವು ಸರಳವಾಗಿ ಅರ್ಥೈಸಿಕೊಂಡು ಧ್ಯಾನಿಸಬೇಕು. ಮನಸ್ಸನ್ನು ವಿಚಲಿತವಾಗದಂತೆ, ದೃಢವಾಗಿರುವಂತೆ ಮಾಡುವಲ್ಲಿ ಈ ಓಂಕಾರದ ಪಠಣ ಸಹಾಯಕ ಸಾಧನ. ಅಉಮಕಾರಗಳನ್ನು ಸರಳವಾಗಿ ಅ ಎಂದರೆ ಅಗತ್ಯ, ಉ ಎಂದರೆ ಉದ್ದೇಶ ಮತ್ತು ಮ ಎಂದರೆ ಮಹಣ್ತೀ ಎಂದು ಅರ್ಥೈಸಿಕೊಂಡು ಜೀವನದಲ್ಲಿ ಅಗತ್ಯವಾಗಿರುವುದನ್ನು ಪಡೆಯುವಾಗ ಅದು ಉತ್ತಮ ಉದ್ದೇಶವನ್ನೂ ಹೊಂದಿದ್ದು ಮತ್ತು ಅದರಿಂದ ಮಹತ್ತಾಗಿದ್ದನ್ನು ಸಾಧಿಸುವಂತೆ ಬದುಕನ್ನು ರೂಪಿಸಿಕೊಳ್ಳಬೇಕು. ಇದಕ್ಕೆ ಮನೋನಿಗ್ರಹ ಬೇಕು; ಮನೋ ನಿಗ್ರಹಕ್ಕೆ ಶಕ್ತಿಯೇ ಈ ಓಂಕಾರ.
ವಿಷ್ಣು ಭಟ್ ಹೊಸ್ಮನೆ