Advertisement
ಮೊದಲ ಪಟ್ಟಿಯಲ್ಲಿ 34 ಶಾಸಕರಿಗೆ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗಳನ್ನು ನೀಡಲಾಗಿತ್ತು. ಆದರೆ ಈ ಪೈಕಿ ಹಂಪನಪಗೌಡ ಬಾದರ್ಲಿ, ಬಸವನಗೌಡ ದದ್ದಲ್ ಮತ್ತಿತರ ಕೆಲ ವರು ಎರಡು ವರ್ಷಗಳ ಅಧಿಕಾರಾವಧಿ ಬೇಡ ಎನ್ನುವ ಮೂಲಕ ಸಚಿವ ಸ್ಥಾನಕ್ಕೆ ಪಟ್ಟು ಹಿಡಿಯುವ ಮುನ್ಸೂಚನೆ ನೀಡಿದ್ದಾರೆ. ಅಲ್ಲದೆ ಕ್ರೀಡಾ ಪ್ರಾಧಿ ಕಾರ, ಮಾಲಿನ್ಯ ನಿಯಂತ್ರಣ ಮಂಡಳಿಗಳ ನೇಮ ಕಾತಿಯಲ್ಲೂ ಎಡವಟ್ಟಾಗಿದ್ದು, ಕೆಲವು ಶಾಸಕರಿಗೆ ಸ್ಥಾನ ಕೊಟ್ಟು ಕಿತ್ತುಕೊಂಡಂತಾಗಿದೆ. ಇನ್ನು ಕೆಲವರಿಗೆ ಪರ್ಯಾಯ ವ್ಯವಸ್ಥೆಯನ್ನೂ ಸರಕಾರ ಕಲ್ಪಿಸಿದೆ.ನಿಗಮ, ಮಂಡಳಿ, ಪ್ರಾಧಿಕಾರ, ವಿವಿಧ ಸಮಿತಿ ಗಳು ಸೇರಿ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಥಾನಮಾನ ನೀಡುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ಕೊಟ್ಟಿದ್ದರು. ಅದರಂತೆ ಒಂದೊಂದೇ ನಿಗಮ-ಮಂಡಳಿಗಳಿಗೆ ನೇಮಕಾತಿಯನ್ನೂ ಮಾಡುವ ಪ್ರಕ್ರಿಯೆ ಚಾಲನೆ ನೀಡಲಾಗಿದೆ.
ಮಾನಗಳನ್ನು ನೀಡಲಾಗಿದೆ. ಈ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಬೆಂಬಲಿಗರಿಗೆ ಸಮಾನ ಹಂಚಿಕೆ ಮಾಡುವ ಪ್ರಯತ್ನ ನಡೆದಿದೆ. ಅಳೆದು-ತೂಗಿ ನೇಮಕ ಮಾಡಿದ್ದು, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರವಾಗಿ ಹುಮ್ಮಸ್ಸಿನಿಂದ ಕೆಲಸ ಮಾಡಲು ಸಹಾಯ ಆಗಲಿದೆ ಎಂಬ ಆಶಯ ಕಾಂಗ್ರೆಸ್ ವಲಯದಲ್ಲಿದೆ. ಕರಾವಳಿಯಿಂದ ಗೇರು ಅಭಿವೃದ್ಧಿ ನಿಗಮಕ್ಕೆ ಮಮತಾ ಗಟ್ಟಿ, ಮಂಗಳೂರು ನ. ಪ್ರಾಧಿಕಾರಕ್ಕೆ ಸದಾಶಿವ ಉಳ್ಳಾಲ್ ನೇಮಕಗೊಂಡಿದ್ದಾರೆ.