Advertisement

ವಿದ್ಯುತ್‌ ಅದಾಲತ್‌ ಜನರಿಗೆ ಸಹಕಾರಿ: ಭಾರತಿ

11:23 AM Jun 24, 2022 | Team Udayavani |

ಲೋಕಾಪುರ: ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆ ಜಾರಿಗೆ ತಂದಿರುವ ವಿದ್ಯುತ್‌ ಅದಾಲತ್‌ ಸಹಕಾರಿಯಾಗಲಿದೆ ಎಂದು ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಡಿ. ಭಾರತಿ ಹೇಳಿದರು.

Advertisement

ಭಂಟನೂರಲ್ಲಿ ವಿದ್ಯುತ್‌ ಅದಾಲತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಯೋಜನೆಗಳು ಜನರಿಗೆ ತ್ವರಿತವಾಗಿ ತಲುಪಬೇಕು. ಹಾಗೂ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕೆಂಬ ಉದ್ದೇಶದಿಂದ ಇಂಧನ ಇಲಾಖೆ ಅಡಿಯಲ್ಲಿ ಪ್ರತಿ ತಿಂಗಳು ಮೂರನೇ ಶನಿವಾರ ಎಲ್ಲ ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಅದಾಲತ್‌ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿದ್ಯುತ್‌ ಅದಾಲತ್‌ ಮೂಲಕ ಗ್ರಾಮೀಣ ವಿದ್ಯುತ್‌ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಭಂಟನೂರ ಗ್ರಾಪಂ ವ್ಯಾಪ್ತಿಯ ಭಂಟನೂರ, ಬದ್ನೂರ, ಜುನ್ನೂರ ಹಾಗೂ ಚಿಕ್ಕೂರ ಗ್ರಾಮಗಳ ವಿದ್ಯುತ್‌ ಸಮಸ್ಯೆ ಕುರಿತು ಮನವಿ ಸಲ್ಲಿಸಲಾಯಿತು.

ಭಂಟನೂರ ಗ್ರಾಪಂ ಅಧ್ಯಕ್ಷ ಪ್ರಕಾಶ ಚಿತ್ತರಗಿ, ಉಪಾಧ್ಯಕ್ಷೆ ಕಲ್ಲವ್ವ ತಳವಾರ, ಸದಸ್ಯರಾದ ಲಕ್ಷ್ಮಣ ರಗನ್ನವರ, ಭರಮಪ್ಪ ಹಿರಕನ್ನವರ, ಪ್ರಕಾಶ ಸಿಂಗರಡ್ಡಿ, ಪಾಂಡು ಬಿದರಿ, ಸುನಂದಾ ಪಚ್ಚನ್ನವರ, ವಿಠuಲ ಜೀರಗಾಳ ಗ್ರಾಮಸ್ಥರಾದ ರಾಜುಗೌಡ ಪಾಟೀಲ, ಕೆ.ಆರ್‌. ಸಿಂಗರಡ್ಡಿ, ವಿಠuಲ ತುಮ್ಮರಮಟ್ಟಿ, ಲಕ್ಷ್ಮಣ ಮಾಲಗಿ, ಭಂಟನೂರ, ಬದ್ನೂರ, ಜುನ್ನೂರ ಹಾಗೂ ಚಿಕ್ಕೂರ ಗ್ರಾಮಗಳು ರೈತರು, ಸಾರ್ವಜನಿಕರು ಭಾಗವಹಿಸಿದ್ದರು.

ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್‌ ಸಮಸ್ಯೆಗಳ ಬಗ್ಗೆ ಅರಿತು, ತಕ್ಷಣ ಪರಿಹಾರ ಮಾಡುವ ನಿಟ್ಟಿನಲ್ಲಿ ಹೆಸ್ಕಾಂ ಅ ಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ವಿದ್ಯುತ್‌ ಅದಾಲತ್‌ ಮಾಡಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. –ಡಿ. ಭಾರತಿ, ವ್ಯವಸ್ಥಾಪಕ ನಿರ್ದೇಶಕರು, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ

Advertisement

ಭಂಟನೂರ ಗ್ರಾಮದ ವ್ಯಾಪ್ತಿಯಲ್ಲಿ ಸ್ಟೇಷನ್‌ಗೆ ಹೆಚ್ಚಿನ ಲೋಡ ಇದ್ದು, ಫೀಡರ್‌ ಹಾಗೂ ಹೊಸ ಟಿಸಿ ಅವಶ್ಯಕತೆಯಿದೆ. ನವಗ್ರಾಮದಲ್ಲಿ ಉಳಿದ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ, ತೋಟದ ಮನೆಗಳಿಗೆ ನಿರಂತರ ಜ್ಯೋತಿ ಕಲ್ಪಿಸಬೇಕು. ರೈತರಿಗೆ, ಸಾರ್ವಜನಿಕರಿಗೆ ವಿದ್ಯುತ್‌ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. –ಪ್ರಕಾಶ ಚಿತ್ತರಗಿ, ಅಧ್ಯಕ್ಷರು, ಗ್ರಾಪಂ ಭಂಟನೂರ

Advertisement

Udayavani is now on Telegram. Click here to join our channel and stay updated with the latest news.

Next