Advertisement

Powder; ದಿಗಂತ್‌ ನಟನೆಯ ಪೌಡರ್‌ ಇಂದು ತೆರೆಗೆ

01:27 PM Aug 23, 2024 | Team Udayavani |

“ನನ್ನ ಕೆರಿಯರ್‌ನಲ್ಲಿ ನಾನು ಇಂತಹ ಪಾತ್ರ ಮಾಡಿಲ್ಲ..’ – ಹೀಗೆ ಹೇಳಿ ನಕ್ಕರು ದಿಗಂತ್‌. ಅವರ ಪಕ್ಕ “ಪೌಡರ್‌’ ಚಿತ್ರದ ಪೋಸ್ಟರ್‌ ಇತ್ತು. ಇಷ್ಟು ಹೇಳಿದ ಮೇಲೆ ಅವರ ಪೌಡರ್‌ ಸುತ್ತವೇ ಎಂದು ಅರ್ಥಮಾಡಿಕೊಳ್ಳಬಹುದು. ಇತ್ತೀಚೆಗೆ ಕಾಮಿಡಿ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ದಿಗಂತ್‌ ಈಗ “ಪೌಡರ್‌’ ಮೇಲೆ ನಂಬಿಕೆ ಇಟ್ಟಿದ್ದಾರೆ.

Advertisement

ಇಂದು ತೆರೆಕಾಣುತ್ತಿರುವ ಈ ಚಿತ್ರ ಪಕ್ಕಾ ಯೂತ್‌ಫ‌ುಲ್‌ ಆಗಿರುವುದರಿಂದ ಹೊಸ “ಬಾಗಿಲು’ ತೆರೆಯುತ್ತದೆ ಎಂಬ ನಂಬಿಕೆ ಕೂಡಾ ಅವರಿಗಿದೆ. ಇದು ವಿಭಿನ್ನ ಚಿತ್ರ ಎನ್ನುವುದಕ್ಕಿಂತ ಇಂಥದ್ದೊಂದು ಪಾತ್ರವನ್ನು ಇದುವರೆಗೂ ಮಾಡಿರಲಿಲ್ಲ ಎನ್ನುತ್ತಾರೆ ದಿಗಂತ್‌.

“ಇದು ನನಗೆ ತೃಪ್ತಿ ಕೊಟ್ಟ ಪಾತ್ರ. ಇಲ್ಲಿ ಯಾವುದೇ ಹೀರೋಯಿಸಂ ಇಲ್ಲ. ಎಲ್ಲಾ ಸರಳವಾದ ಪಾತ್ರಗಳು. ಎಲ್ಲರಿಗೂ ಪ್ರಾಮುಖ್ಯತೆ ಇದೆ. ಅವರದ್ದೇ ಆದ ಕಥೆಗಳಿವೆ. ಈ ಸಿನಿಮಾ ಗೆದ್ದರೆ, ಮುಂದೆ ಇನ್ನಷ್ಟು ಚಿತ್ರಗಳನ್ನು ಮಾಡುವುದಕ್ಕೆ ಧೈರ್ಯ ಬರುತ್ತದೆ’ ಎನ್ನುವುದು ದಿಗಂತ್‌ ಮಾತು. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ’ ಎನ್ನಲು ಅವರು ಮರೆಯುವುದಿಲ್ಲ.

ಜನಾರ್ದನ್‌ ಚಿಕ್ಕಣ್ಣ ನಿರ್ದೇಶನವಿದೆ. ಕಾರ್ತಿಕ್‌ ಗೌಡ, ಯೋಗಿ ಜಿ ರಾಜ್‌ ಮತ್ತು ವಿಜಯ್‌ ಸುಬ್ರಹ್ಮಣ್ಯಂ ಸಿನಿಮಾವನ್ನು ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next