Advertisement

ಬಡತನ ಮುಕ್ತ ಡಿಸಿಸಿ ಬ್ಯಾಂಕ್‌ ಗುರಿ

03:22 PM Mar 31, 2021 | Team Udayavani |

ಶಿಡ್ಲಘಟ್ಟ: ಕೋಲಾರ ಮತ್ತು ಚಿಕ್ಕಬಳ್ಳಾಪುರಜಿಲ್ಲೆಯಲ್ಲಿ ಮಹಿಳೆಯರು, ರೈತರ ಆರ್ಥಿಕಅಭಿವೃದ್ಧಿಗಾಗಿ ಡಿಸಿಸಿ ಬ್ಯಾಂಕ್‌ ಶ್ರಮಿಸುತ್ತಿದೆ.ಮುಂದಿನ ದಿನಗಳಲ್ಲಿ ಶಿಡ್ಲಘಟ್ಟ ವಿಧಾನಸಭಾಕ್ಷೇತ್ರವನ್ನು ಬಡತನದಿಂದ ಮುಕ್ತ ಮಾಡಲುಸಂಕಲ್ಪ ಮಾಡಿದ್ದೇವೆ ಎಂದು ಡಿಸಿಸಿ ಬ್ಯಾಂಕ್‌ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡತಿಳಿಸಿದರು.

Advertisement

ನಗರದ ಜಿಲ್ಲಾ ಸಹಕಾರ ಬ್ಯಾಂಕ್‌ಆವರಣದಲ್ಲಿ ತಾಲೂಕಿನ ಎಸ್‌ಎಫ್‌ಸಿಎಸ್‌ಶಾಖೆಗಳು ಹಾಗೂ ವಿ.ಎಸ್‌.ಎಸ್‌.ಎನ್‌ಗಳಿಂದ ಸಂಗ್ರಹವಾಗಿರುವ 2 ಕೋಟಿ ರೂ.ಗಳಠೇವಣಿ ಹಣ ಸ್ವೀಕರಿಸಿ ಮಾತನಾಡಿ, ಅವಳಿಜಿಲ್ಲೆಯಲ್ಲಿ ರೈತರು ಮತ್ತು ಮಹಿಳಾಸ್ವಸಹಾಯ ಸಂಘಗಳಿಗೆ ಸಾಲ ಕಲ್ಪಿಸಲು ವಿವಿಧಪಕ್ಷಗಳು ಕಾಳಜಿ ತೋರಿಸಿವೆ.

ರಾಜಕೀಯಉದ್ದೇಶಕ್ಕಾಗಿ ಬ್ಯಾಂಕಿನ ಹೆಸರು ಬಳಕೆ ಮಾಡಬಾರದು. ನಾವು ಯಾವುದೇ ಪಕ್ಷದೊಂದಿಗೆಗುರುತಿಸಿಕೊಂಡರು ಪಕ್ಷತೀತವಾಗಿ ಸಾಲಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಬ್ಯಾಂಕ್‌ ಸಾರ್ವಜನಿಕ ಆಸ್ತಿ. ಅದನ್ನು ಉಳಿಸಿ ಬೆಳೆಸುವ ಸಲುವಾಗಿ ಎಲ್ಲರೂ ಸಹಕರಿಸಬೇಕು ಎಂದರು.ಮಹಿಳಾ ಸಂಘ, ರೈತರಿಗೆ ಸಾಲ ಸೌಲಭ್ಯ:ಡಿಸಿಸಿ ಬ್ಯಾಂಕ್‌ ಮೂಲಕ ಈಗಾಗಲೇಸ್ವಸಹಾಯ ಮಹಿಳಾ ಸಂಘಗಳಿಗೆ ಮತ್ತುರೈತರಿಗೆ ಸಾಲ ಸೌಲಭ್ಯ ಕಲ್ಪಿಸಿದ್ದೇವೆ.

ಅದರಜೊತೆಗೆ ಉಭಯ ಜಿಲ್ಲೆಯಲ್ಲಿರುವ ಎಸ್‌.ಎಫ್‌.ಸಿ.ಎಸ್‌ ಹಾಗೂ ವಿ.ಎಸ್‌.ಎಸ್‌.ಎನ್‌ಗಳ ವ್ಯಾಪ್ತಿಯಲ್ಲಿ ಔಷಧಿ ಕೇಂದ್ರಗಳನ್ನುತೆರೆದು, ಬಡವರು, ಸಾಮಾನ್ಯರಿಗೆ ಕಡಿಮೆಬೆಲೆಯಲ್ಲಿ ಔಷಧಿ ವಿತರಿಸುವ ಯೋಜನೆಜಾರಿಗೊಳಿಸಲಾಗಿದೆ. ಶಿಡ್ಲಘಟ್ಟ ತಾಲೂಕುಸೇರಿದಂತೆ ಅವಳಿ ಜಿಲ್ಲೆಗಳಲ್ಲಿ ಜನರನ್ನುಆರ್ಥಿಕವಾಗಿ ಅಭಿವೃದ್ಧಿಗೊಳಿಸಲು ನೆರವುನೀಡುವ ಜೊತೆಗೆ ಆರೋಗ್ಯವನ್ನುಕಾಪಾಡುವ ನಿಟ್ಟಿನಲ್ಲಿ ಬ್ಯಾಂಕ್‌ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.400 ಕೋಟಿ ಠೇವಣಿ ಸಂಗ್ರಹ ಗುರಿ:ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರಾಷ್ಟ್ರೀಯಕೃತ ಬ್ಯಾಂಕ್‌ಗಳಲ್ಲಿ ದೊರೆಯುವಸೌಲಭ್ಯಗಳನ್ನು ಡಿಸಿಸಿ ಬ್ಯಾಂಕಿನ ಮೂಲಕನೀಡುತ್ತಿದ್ದೇವೆ. ಜನರ ಮನೆ ಬಾಗಿಲಿಗೆಬ್ಯಾಂಕ್‌ ಸೌಲಭ್ಯ ಕಲ್ಪಿಸಿದ್ದೇವೆ.

ಮೊವೈಲ್‌ಬ್ಯಾಂಕ್‌ ಸೇವೆ, ಮಹಿಳಾ ಸ್ವಸಹಾಯಸಂಘಗಳು, ರೈತರಿಗೆ ಎಟಿಎಂ ಕಾರ್ಡ್‌ಸೌಲಭ್ಯ ನೀಡಿದ್ದೇವೆ. ಪ್ರತಿಯೊಬ್ಬರು ಡಿಸಿಸಿಬ್ಯಾಂಕಿನ ಮೂಲಕ ದೊರೆಯುವ ಸೌಲಭ್ಯಬಳಸಿಕೊಂಡು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿಇಟ್ಟು, ಅವಳಿ ಜಿಲ್ಲೆಯ ರೈತರು,ಮಹಿಳೆಯರು ಮತ್ತು ಬಡವರ ಅಭಿವೃದ್ಧಿಗೆಕೈಜೋಡಿಸಬೇಕು. ಉಭಯ ಜಿಲ್ಲೆಯಲ್ಲಿಈಗಾಗಲೇ 350 ಕೋಟಿ ರೂ. ಠೇವಣಿಸಂಗ್ರಹಿಸಿದ್ದು, ಮುಂದಿನ ದಿನಗಳಲ್ಲಿ 400ಕೋಟಿ ರೂ. ಠೇವಣಿ ಸಂಗ್ರಹ ಮಾಡುವಗುರಿ ಹೊಂದಿದ್ದೇವೆ ಎಂದರು.

Advertisement

80 ಸಾವಿರ ಮಹಿಳೆಯರಿಗೆ ಸಾಲ: ಶಿಡ್ಲಘಟ್ಟವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ವಿ.ಮುನಿಯಪ್ಪ ನೇತೃತ್ವದಲ್ಲಿ 80 ಸಾವಿರಮಹಿಳೆಯರಿಗೆ ಸಾಲ ನೀಡುವ ಯೋಜನೆರೂಪಿಸಿದ್ದೇವೆ. ಈಗಾಗಲೇ 20 ಸಾವಿರಮಹಿಳೆಯರು ಮತ್ತು 5 ಸಾವಿರ ರೈತರಿಗೆಸಾಲ ಸೌಲಭ್ಯ ಕಲ್ಪಿಸಿದ್ದೇವೆ. ಪ್ರಸಕ್ತ ಸಾಲಿನಲ್ಲಿ30 ಸಾವಿರ ಮಹಿಳೆಯರಿಗೆ ಸಾಲ ಸೌಲಭ್ಯಒದಗಿಸಿ, ಮುಂದಿನ ವರ್ಷ ಇನ್ನೂಳಿದಮಹಿಳಾ ಸದಸ್ಯರಿಗೆ ಸಾಲ ನೀಡುತ್ತೇವೆ.

ಕೊರೊನಾ ಸೋಂಕಿನ ಸಂಕಷ್ಟದ ಅವಧಿಯಲ್ಲಿ ಸಾಲವನ್ನು ನೀಡಿದ್ದೇವೆ. ಶಿಡ್ಲಘಟ್ಟಕ್ಷೇತ್ರವನ್ನು ಬಡತನದಿಂದ ಮುಕ್ತ ಮಾಡಲುಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಘೋಷಿಸಿದರು.ಬ್ಯಾಂಕಿನ ವ್ಯವಸ್ಥಾಪಕ ಆನಂದ್‌,ಮೇಲ್ವಿಚಾರಕ ಶ್ರೀನಾಥ್‌, ಟೌನ್‌ ಎಸ್‌.ಎಫ್‌.ಸಿ.ಎಸ್‌ ಸಿ.ಇ.ಒ ದೇವಿಕಾ, ಮಳಮಾಚನಹಳ್ಳಿಉಷಾರಾಣಿ, ಮಳ್ಳೂರು ಮಂಜುನಾಥ್‌,ಆನೆಮಡುಗು ಸದಾಶಿವ, ಸಾದಲಿ ಭೀಮಪ್ಪ,ದಿಬ್ಬೂರಹಳ್ಳಿ ರಾಮಾಂಜಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next