Advertisement
ಈ ಸಾಂಕ್ರಾಮಿಕ ಕಾಯಿಲೆಯಿಂದಾಗಿ ತೀವ್ರ ಬಡತನಕ್ಕೆ 39 ಕೋಟಿ ಮಂದಿ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದ್ದಾರೆ. ಇವರಲ್ಲಿ ಬಹುತೇಕರು ದಕ್ಷಿಣ ಏಷ್ಯಾದವರೇ ಆಗಿರಲಿದ್ದಾರೆ. ಇಲ್ಲಿ ಕೋವಿಡ್ ದೊಡ್ಡ ಪ್ರಮಾಣದಲ್ಲಿ ಹಾನಿ ಸೃಷ್ಟಿಸಿದೆ ಎಂದು ಹೊಸ ವರದಿಯೊಂದು ಹೇಳಿದೆ.
Related Articles
Advertisement
ಒಂದು ವೇಳೆ ಮೇಲ್ಮಟ್ಟದ ಮಧ್ಯ ಆದಾಯ ಹೊಂದಿದ ರಾಷ್ಟ್ರಗಳಲ್ಲಿ ದಿನಕ್ಕೆ 400 ರೂ.ಗಿಂತ ಕಡಿಮೆ ಸಂಪಾದನೆ ಹೊಂದಿದವರನ್ನು ಬಡತನ ರೇಖೆಗಿಂತ ಕಳೆಗಿನವರು ಎಂದು ಪರಿಗಣಿಸಿದರೆ ಪೂರ್ವ ಏಷ್ಯಾ, ಚೀನಾದ ಭಾಗ, ದಕ್ಷಿಣ ಏಷ್ಯಾದಲ್ಲಿ ಬಡತನ ಪ್ರಮಾಣ ಜಗತ್ತಿನ ಶೇ.20ರಷ್ಟು ಆಗಬಹುದು. ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾದಲ್ಲಿ ಇವರ ಪ್ರಮಾಣ ಶೇ.18ರಷ್ಟು ಆಗಬಹುದು.
ಅತ್ಯಂತ ಕಡಿಮೆ ಆದಾಯ ಹೊಂದಿದ ದೇಶಗಳಾದ ನೈಜೀರಿಯಾ, ಇಥಿಯೋಪಿಯಾ, ಬಾಂಗ್ಲಾದೇಶ, ಇಂಡೋನೇಷ್ಯಾಗಳ ತೀವ್ರ ಬಡತನ ಹೊಂದಿದವರ ಪ್ರಮಾಣ ಶೇ.18ರಿಂದ 19ರಷ್ಟಾಗಬಹುದು ಎಂದು ಹೇಳಿದೆ. ಇದರೊಂದಿಗೆ ತಾಂಜೇನಿಯಾ, ಕೀನ್ಯಾ, ಉಗಾಂಡಾ, ಫಿಲಿಫೈನ್ಸ್‌ಗಳಲ್ಲೂ ಶೇ.12ರಷ್ಟು ಬಡವರು ಈ ಸಾಲಿಗೆ ಸೇರಬಹುದು ಎನ್ನಲಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ತೀವ್ರ ಬಡತನ ರೇಖೆಗಿಂತ ಕೆಲವೇ ಅಂಶಗಳಷ್ಟು ಮೇಲೆ ಕೋಟ್ಯಂತರ ಜನರು ವಾಸಿಸುತ್ತಿದ್ದು ಈ ಸಾಂಕ್ರಾಮಿಕ ಕಾಯಿಲೆ ಮತ್ತೆ ಅವರನ್ನು ಕಡು ಬಡತನಕ್ಕೆ ದೂಡುತ್ತದೆ. ಜಿ.7, ಜಿ.20 ಒಕ್ಕೂಟಗಳು ಇದಕ್ಕಾಗಿ ಮೂರು ಅಂಶಗಳ ಯೋಜನೆಗಳನ್ನು ರೂಪಿಸಬೇಕು ಮತ್ತು ಸರಕಾರಗಳು ಸುಸ್ಥಿರ ಅಭಿವೃದ್ಧಿ ಕುರಿತ ಯೋಜನೆಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯ ಹೆಚ್ಚಿದೆ ಎಂದು ವರದಿ ಹೇಳಿದೆ.