Advertisement

ಪೊವಾಯಿ ಮಹಾಶೇಷ ರುಂಡ ಮಾಲಿನಿ ಮಂದಿರ: ನಾಗರ ಪಂಚಮಿ 

03:12 PM Aug 16, 2018 | |

ಮುಂಬಯಿ: ಪೊವಾಯಿಯ ಶ್ರೀ ಮಹಾಶೇಷ ರುಂಡ ಮಾಲಿನಿ ಮಂದಿರದಲ್ಲಿ ನಾಗರ ಪಂಚಮಿ ಉತ್ಸವವು ಆ. 15 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಶ್ರೀ ಕ್ಷೇತ್ರದ ಶ್ರೀ ಸುವರ್ಣ ಬಾಬಾ ಅವರ ಮುಂದಾಳತ್ವದಲ್ಲಿ ಆ. 14 ರಂದು ಕುಕ್ಕೆ ಸುಬ್ರಹ್ಮಣ್ಯ ದೇವರ ಮುಂಭಾಗದಲ್ಲಿ 65 ಅಡಿ ಎತ್ತರದ ತಾಮ್ರ ಕವಚದ ಕೊಡಿಮರ ಧ್ವಜಸ್ತಂಭಕ್ಕೆ ಧ್ವಜಾರೋಹಣದೊಂದಿಗೆ ಉತ್ಸವವು ಆರಂಭಗೊಂಡಿತು. ಮುಂಜಾನೆ 5 ರಿಂದ ಮಧ್ಯಾಹ್ನ 1 ರವರೆಗೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ಗಣಪತಿ, ಪೂಜೆ, ನವಗ್ರಹ ಪೂಜೆ, ಶನಿಶಾಂತಿ, ತೆಂಗಿನಕಾಯಿ ಹೋಮ, ನವಗ್ರಹ ಪೂಜೆ, ಸರ್ಪಶಾಂತಿ, ನಾರಾಯಣ ನಾಗಬಲಿ, ಆಶ್ಲೇಷ ಬಲಿ, ಬ್ರಾಹ್ಮಣ ಪೂಜೆ, ಬ್ರಹ್ಮಚಾರಿ ಪೂಜೆ, ಅಶ್ವತ್ಥ ವಿವಾಹ, ಶ್ರೀ ನಾಗದೇವರಿಗೆ ಹಾಲಿನ ನೈವೇಧ್ಯ, ಅಭಿಷೇಕ ಹಾಗೂ ಮಧ್ಯರಾತ್ರಿ 12 ರಿಂದ ಶ್ರೀ ದೇವಿಗೆ ಕುಂಭಾಭಿಷೇಕ ಜರಗಿತು.

ಆ. 15 ರಂದು ಮುಂಜಾನೆ 5 ರಿಂದ ಸಂಜೆ 6 ರವರೆಗೆ ಶ್ರೀ ಕ್ಷೇತ್ರದಲ್ಲಿ ನಾಗರ ಪಂಚಮಿಯು ನಾಗ ದೇವರ ಸನ್ನಿಧಿಯಲ್ಲಿ ಹಾಗೂ ಮಹಾಪೂಜೆಯು ಮಹಾಶೇಷ ರುಂಡಮಾಲಿನಿ ದೇವರ ಸನ್ನಿಧಾನದಲ್ಲಿ ನೆರವೇರಿತು. ಧಾರ್ಮಿಕ ಕಾರ್ಯಕ್ರಮಗಳಾಗಿ ಶ್ರೀ ಮಹಾಗಣಪತಿ ಪೂಜೆ, ನವಗ್ರಹ ಹೋಮ, ದಿಕಾ³ಲ ಹೋಮ, ಅಷ್ಟ ದಿಕಾ³ಲ ಬಲಿ, ಶಿಖರ ಕುಂಭಾಭಿಷೇಕ, ಶ್ರೀ ನಾಗದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಸಹಸ್ರ ನಾರಿಕೇಳಾಭಿಷೇಕ, ನವಕಲಶ ಮಹಾಭಿಷೇಕ, ಮಧ್ಯಾಹ್ನ 1 ರಿಂದ ಅಪರಾಹ್ನ 2 ರವರೆಗೆ ನಾಗದೇವರ ಮೂರ್ತಿ ಬಲಿ, ನಾಗದರ್ಶನ, ಶ್ರೀ ಮಹಾಶೇಷ ರುಂಡಮಾಲಿನಿ ದೇವರ ತೀರ್ಥ ಪ್ರಸಾದ ವಿತರಣೆ ಜರಗಿತು.

ವೈಧಿಕ ವಿಧಿ-ವಿಧಾನಗಳು ವೇ|ಮೂ| ಸಂತೋಷ್‌ ಭಟ್‌ ಮತ್ತು ಬಳಗದವರಿಂದ ನೆರವೇರಿತು. ಬೆಳಗ್ಗೆ 10 ರಿಂದ ಎರ್ಮಾಳ್‌ ಗಣೇಶ್‌ ಮತ್ತು ಬಳಗದವರಿಂದ ಭಕ್ತಿಪ್ರದಾನ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು. ಉತ್ಸವದಲ್ಲಿ ವಿವಿಧ ರಾಜಕೀಯ ಧುರೀಣರು. ಸಚಿವರು, ಶಾಸಕರು, ನಗರ ಸೇವಕರು, ಬಾಲಿವುಡ್‌ ನಟ-ನಟಿಯರು, ವಿವಿಧ ಕ್ಷೇತ್ರಗಳ ಸಾಧಕ ಅಧಿಕಾರಿಗಳು, ನಗರದ ವಿವಿಧ ಜಾತೀಯ, ತುಳು-ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಉದ್ಯಮಿಗಳು, ಸಮಾಜ ಸೇವಕರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಜಾತಿ, ಮತ, ಧರ್ಮವನ್ನು ಮರೆತು ಆಗಮಿಸಿ ಪ್ರಸಾದ ಸ್ವೀಕರಿಸಿದರು.

Advertisement

ಶ್ರೀ ಕ್ಷೇತ್ರದ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಮತ್ತು 9 ತಾಯಿಯ ಮಕ್ಕಳು ಹಾಗೂ ಕೇಶವ ಅಂಚನ್‌, ಜಗದೀಶ್‌ ಸುವರ್ಣ, ನ್ಯಾಯವಾದಿ ರವಿ ಕೋಟ್ಯಾನ್‌, ಸುಧಾಕರ ಜಿ. ಪೂಜಾರಿ, ರಾಹುಲ್‌ ಸುವರ್ಣ, ಸಂತೋಷ್‌ ಸುವರ್ಣ, ಕರುಣಾಕರ ಜಿ. ಶೆಟ್ಟಿ, ಅಶೋಕ್‌ ಕುಟ್ಟಿ, ಲಕ್ಷ¾ಣ್‌ ಪೂಜಾರಿ ಇವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.     

ಚಿತ್ರ-ವರದಿ: ಸುಭಾಷ್‌ ಶಿರಿಯಾ 

Advertisement

Udayavani is now on Telegram. Click here to join our channel and stay updated with the latest news.

Next