Advertisement
ತಾಲೂಕಿನ ಬನ್ನೂರು ಹೋಬಳಿ ದೊಡ್ಡಮುಲಗೂಡು ಗ್ರಾಮದ ಡಿ.ಗೋವಿಂದ ಅವರು ತಮ್ಮ ಅದ್ಭುತ ಕರ ಕುಶಲ ಕಲೆಯನ್ನು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೆಹಲಿ, ಗೋವಾ, ಚೆನ್ನೈ ಸೇರಿದಂತೆ ವಿವಿಧೆಡೆ ತಮ್ಮ ಕಲೆಯ ಪ್ರಾತ್ಯಕ್ಷಿಕೆ, ಪ್ರದರ್ಶನ ನೀಡಿದ್ದಾರೆ.
Related Articles
Advertisement
ಬದುಕಿಗೆ ತಿರುವು ಕೊಟ್ಟ ತರಬೇತಿ: ಸ್ವಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಓದಿನ ನಂತರ ರಾಮನಗರದ ಭಾವನ ಮನೆಗೆ ಉದ್ಯೋಗ ಹುಡುಕಲೆಂದು ಹೊರಟ ಗೋವಿಂದ ಅವರು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಡೆಸುತ್ತಿದ್ದ 9 ತಿಂಗಳ ಕರಕುಶಲ ತರಬೇತಿಗೆ ಸೇರಿದರು. ತರಬೇತಿ ಪಡೆಯುತ್ತಿದ್ದ ವೇಳೆ ಅವರಲ್ಲಿ ಮೂಡಿದ ಆಸಕ್ತಿ ಅದೇ ಬದುಕಿನ ವೃತ್ತಿಯಾಗುವಂತೆ ಮಾಡಿತು. ಅಲ್ಲಿಯೇ ಕಲಾಕೃತಿಗಳ ತಯಾರಿಕೆಗೆ ಅವಕಾಶ ದೊರಕಿದ್ದರಿಂದ ಸಾಕಷ್ಟು ಕೆಲಸ ಕಲಿತಿದ್ದಾರೆ.
ರಾಮನಗರದ ಮಣ್ಣು: ರಾಮನಗರ ಮೂಲದಿಂದ ಮಣ್ಣು ತಂದು ಅದನ್ನು ಹದ ಮಾಡಿ ಆಕೃತಿಗಳನ್ನು ತಯಾರಿಸುತ್ತಾರೆ. ಇವರ ಪ್ರದರ್ಶನಕ್ಕೆ ಹಲವಾರು ಪ್ರಮಾಣ ಪತ್ರ ಲಭ್ಯವಾಗಿದ್ದರೂ ಕಲೆಯನ್ನು ನಂಬಿರುವ ಇವರಿಗೆ ಅಗತ್ಯ ಪೋ›ತ್ಸಾಹ ದೊರಕುತ್ತಿಲ್ಲ.
ಸುಮಾರು 25 ವರ್ಷಗಳ ಸೇವೆ ಇದ್ದರೂ ಯಾರು ನಮ್ಮ ಕಲೆ ಗುರುತಿಸಿ ಗೌರವಿಸುತ್ತಿಲ್ಲ ಎಂಬ ನೋವಿದೆ ಆದರೂ ಕಲೆಯು ತಮಗೆ ಆತ್ಮ ತೃಪ್ತಿ ನೀಡುತ್ತಿದೆ. ಒಂದಷ್ಟು ಮಂದಿಯಾದರೂ ನಮ್ಮ ಪ್ರತಿಭೆಯನ್ನು ಪೋ›ತ್ಸಾಸಿ ಕಲಾಕೃತಿಗಳನ್ನು ಖರೀದಿಸುತ್ತಿದ್ದಾರೆ. ನಾವು ಕಲಿತ ಹಾಗೆ ಹಲವರಿಗೆ ತರಬೇತಿ ನೀಡಿ ಇಂತಹ ವೃತ್ತಿಗಳು ಸಮಾಜದಿಂದ ಅಳಿಸಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ ಎನ್ನುತ್ತಾರೆ ಗೋವಿಂದ್.
* ಎಸ್.ಬಿ. ಪ್ರಕಾಶ್