Advertisement
ಇಲ್ಲಿಯೇ ರಸ್ತೆಯ ತಿರುವು ಇದ್ದು, ರಸ್ತೆ ಅಗೆದು, ಅನಂತರದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಸರಿಪಡಿಸದೇ ಇದ್ದುದ್ದರಿಂದ ಸಾಕಷ್ಟು ಅಪಘಾತ ನಡೆಯುತ್ತಿವೆ. ಇತ್ತೀಚೆಗೆ ಸರಿ ಇದ್ದ ರಸ್ತೆಯನ್ನು ನೀರಿನ ಪೈಪ್ ಅಳವಡಿಕೆಗೋಸ್ಕರ ಅಗೆದಿದ್ದು, ಬೇಕಾಬಿಟ್ಟಿಯಾಗಿ ಮಣ್ಣಿನಿಂದ ಮುಚ್ಚಲಾಗಿದೆ. ಇದರಿಂದ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಿದ್ದು, ಮಳೆ ಸುರಿಯುತ್ತಿರುವುದ ರಿಂದ ಗುಂಡಿಗಳಲ್ಲಿ ನೀರು ತುಂಬಿಕೊಂಡಿವೆ. ಶಾಲೆಯು ಪಕ್ಕದಲ್ಲೇ ಇರುವುದರಿಂದ ಈ ರಸ್ತೆಯಲ್ಲಿ ಸಾಕಷ್ಟು ವಾಹನಗಳು, ಶಾಲಾ ಮಕ್ಕಳು ವಾಹನ, ದ್ವಿಚಕ್ರ ವಾಹನ, ಪಾದಚಾರಿಗಳು ಸಂಚರಿಸುತ್ತಿರುತ್ತಾರೆ. ವಾಹನ ಸವಾರರು ಜೀವ ಭಯದಲ್ಲಿ ಓಡಾಡಬೇಕಿದೆ. ಪಾದಚಾರಿಗಳು ಕೆಸರು, ಗುಂಡಿಗಳಿಂದ ನಿತ್ಯ ತೊಂದರೆ ಪಡುವಂತಾಗಿದೆ. ಈ ಬಗ್ಗೆ ನಗರಸಭೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Related Articles
Advertisement
ರಾತ್ರಿ ವೇಳೆ ಹಲವು ಮಂದಿ ಇಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಈ ರಸ್ತೆ ಟೈಗರ್‌ಸರ್ಕಲ್‌ನಿಂದ ಅಲೆವೂರು ಸಾಗುವ ಮುಖ್ಯ ರಸ್ತೆಗೆ ಸಂಪರ್ಕ ಕೊಡುತ್ತದೆ. ನಿತ್ಯ ಸಾವಿರಾರು ಮಂದಿ ಪ್ರಯಾಣಿಸುವ ಈ ರಸ್ತೆ ದುಃಸ್ಥಿತಿ ವ್ಯವಸ್ಥೆಯನ್ನು ಅಣಕಿಸುವಂತಿದೆ. ನಗರಸಭೆ ಆಡಳಿತ ಕೂಡಲೆ ಈ ಬಗ್ಗೆ ಈ ಮಾರ್ಗವನ್ನು ವ್ಯವಸ್ಥಿತ ವಾಗಿಸುವಂತೆ ಸ್ಥಳೀಯ ನಾಗರಿಕರು ಕೋರಿದ್ದಾರೆ.
ಶೀಘ್ರ ದುರಸ್ತಿಗೆ ಕ್ರಮ ನಗರದ 35 ವಾರ್ಡ್‌ಗಳಲ್ಲಿಯೂ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಯೋಜನೆ ರೂಪಿಸಲಾಗಿದ್ದು, ಮಳೆ ಸಂಪೂರ್ಣ ನಿಂತ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ. ದುಃಸ್ಥಿ ತಿಯಲ್ಲಿರುವ, ಗುಂಡಿಗಳು ಬಿದ್ದಿರುವ ಎಲ್ಲ ರಸ್ತೆಗಳ ಮಾಹಿತಿಗಳನ್ನು ಪಡೆದುಕೊಂಡಿದ್ದು, ಇದನ್ನು ಸರಿಪಡಿಸುವ ಕೆಲಸ ಶೀಘ್ರದಲ್ಲೆ ನಡೆಯಲಿದೆ. ಸಾರ್ವಜನಿಕ ದೂರಿನ ಮೇರೆಗೆ ಚರಂಡಿ ಅವ್ಯವಸ್ಥೆಯನ್ನು ಪರಿಶೀಲಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.