ಹೊಸದಿಲ್ಲಿ: ಕೇಂದ್ರ ಸರಕಾರ ಫೆ.1ರಂದು ಮಂಡನೆ ಮಾಡಲು ಉದ್ದೇಶಿಸಿರುವ ಹಣಕಾಸು ಬಜೆಟ್ ಅನ್ನು ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ವಕೀಲ ಎಂ.ಎಲ್. ಶರ್ಮಾ ಎಂಬವರು ಈ ಅರ್ಜಿ ಸಲ್ಲಿಸಿ ದ್ದರು. ಇದನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕಾದ ಅಗತ್ಯ ವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರಿದ್ದ ಪೀಠ ಹೇಳಿತು.
ಫೆ.4ರಿಂದ ಪಂಚರಾಜ್ಯ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದೆ. ಆದರೆ ಅದಕ್ಕೆ ಮೂರು ದಿನ ಮೊದಲು ಬಜೆಟ್ ಮಂಡಿಸಲು ಕೇಂದ್ರ ಸರಕಾರ ಸಿದ್ಧತೆ ಮಾಡಿಕೊಂಡಿದೆ. ಇದರ ವಿರುದ್ಧ ಈಗಾಗಲೇ ರಾಜಕೀಯ ಪಕ್ಷ ಗಳು ಚುನಾವಣಾ ಆಯೋಗದ ಕದ ಬಡಿದಿವೆ. ಈ ಸಂದರ್ಭ ದಲ್ಲಿಯೇ ಸುಪ್ರೀಂ ಕೋರ್ಟ್‌ನಲ್ಲೂ ಅರ್ಜಿ ಸಲ್ಲಿಸಲಾಗಿದೆ.
ನೇಪಾಳಕ್ಕೆ 100 ಕೋಟಿ ರೂ. ಮೌಲ್ಯದ 100ರ ನೋಟು!
ಕಾಠ್ಮಂಡು: ಭಾರತದಲ್ಲಿ ಅಪನಗದೀಕರಣದ ಬಳಿಕ, ನೇಪಾಳದಲ್ಲಿ ಉಂಟಾಗಿರುವ 100 ರೂ. ಮೌಲ್ಯದ ಭಾರತೀಯ ಕರೆನ್ಸಿ ಅಭಾವ ನೀಗಿಸುವ ನಿಟ್ಟಿನಲ್ಲಿ, ಆದೇಶಕ್ಕೆ 100 ರೂ. ಮೌಲ್ಯದ 100 ಕೋಟಿ ರೂ. ಹಣ ನೀಡಲು
ಆರ್‌ಬಿಐ ಸಮ್ಮತಿಸಿದೆ.