Advertisement

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

11:47 PM May 17, 2024 | Team Udayavani |

ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆ -2 ಅನ್ನು ಜೂನ್‌ 14ಕ್ಕೆ ಮುಂದೂಡಲಾಗಿದೆ. ಜತೆಗೆ ವಿಶೇಷ ಪರಿಹಾರ ಬೋಧನ ತರಗತಿಗಳು ಮೇ 29ರಿಂದ ಆರಂಭಗೊಳ್ಳಲಿದೆ ಎಂದು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

Advertisement

ವಾರ್ಷಿಕ ಪರೀಕ್ಷೆ-2ನ್ನು ಜೂನ್‌ 7ರಿಂದ 14ರ ವರೆಗೆ ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಈ ಹಿಂದೆ ತಿಳಿಸಿ ವೇಳಾಪಟ್ಟಿ ಪ್ರಕಟಿಸಿತ್ತು. ಈಗ ಒಂದು ವಾರದ ಮಟ್ಟಿಗೆ ಮುಂದೂಡಿದೆ. ಹೊಸ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೊರಡಿಸಲಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.

ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಮತ್ತು ಫ‌ಲಿತಾಂಶ ಸುಧಾರಣೆಯನ್ನು ಬಯಸುವವರಿಗೆ ಮೇ 15ರಿಂದ ಜೂ. 5ರ ವರೆಗೆ ಪರಿಹಾರ ಬೋ«ನ ತರಗತಿಗಳನ್ನು ನಡೆಸಲು ತೀರ್ಮಾನಿಸಿತ್ತು.

ಆದರೆ ರಜೆ ಅವಧಿಯಾದ ಮೇ ತಿಂಗಳಿನಲ್ಲಿ ಬಂದು ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರು ಮತ್ತು ಶಿಕ್ಷಕರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈಗ ವಿಶೇಷ ಪರಿಹಾರ ಬೋಧನ ತರಗತಿಗಳನ್ನು ಮೇ 29ರಿಂದ ಜೂನ್‌ 13ರ ವರೆಗೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next