ಬೆಂಗಳೂರು: ಕೇಂದ್ರ ಸರ್ಕಾರವು ಪಿಜಿ-ನೀಟ್ ಪರೀಕ್ಷೆಯನ್ನು 6ರಿಂದ 8 ವಾರಗಳ ಕಾಲ ಮುಂದೂಡಲು ನಿರ್ದೇಶನ ನೀಡಿದೆ.
ರಾಜ್ಯದಲ್ಲಿಯೂ ಅಂತಿಮ ವರ್ಷದ ವೈದ್ಯಕೀಯ ಪರೀಕ್ಷೆಯನ್ನು ಮುಂದೂಡುವಂತೆ ಎಐಡಿಎಸ್‌ಒ ಸಂಘಟನೆಯು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು (ಆರ್‌ಜಿಯುಎಚ್‌ಎಸ್) ಒತ್ತಾಯಿಸಿದೆ.
ಪಿಜಿ-ನೀಟ್ ಪರೀಕ್ಷೆಯನ್ನು ಮುಂದಿಟ್ಟುಕೊಂಡು ಆರ್‌ಜಿಯುಎಚ್‌ಎಸ್ ಪರೀಕ್ಷೆಯನ್ನು ನಿಗದಿತ ಸಮಯದಲ್ಲಿಯೇ ಮಾಡುವುದಾಗಿ ತಿಳಿಸಿತ್ತು. ವೈದ್ಯಕೀಯ ಶಿಕ್ಷಣದ ಹಲವು ಏರುಪೇರುಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಇಲಾಖೆಯು ಮಾ.12ರಂದು ನಡೆಯಬೇಕಿದ್ದ ಪರೀಕ್ಷೆಯನ್ನು 6ರಿಂದ 8 ವಾರಗಳ ಕಾಲ ಮುಂದೂಡಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಒಂದಂಕಿಗೆ ಇಳಿದ ಕೋವಿಡ್ ಪಾಸಿಟಿವಿಟಿ ರೇಟ್: ಇಂದು 53 ಮಂದಿ ಬಲಿ
ಇದೇ ರೀತಿ ರಾಜ್ಯದಲ್ಲಿಯೂ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡಬೇಕು. ಈ ಮೂಲಕ ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘಟನೆ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಒತ್ತಾಯಿಸಿದ್ದಾರೆ.