ಮಂಗಳೂರು: ಕೇಂದ್ರ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್‌ಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಣೆಯಾಗಿದ್ದು, ಆ ಮೂಲಕ ದ. ಕ.ಜಿಲ್ಲೆಯ ಜನತೆ ಫೆರ್ನಾಂಡಿಸ್ ಅವರ ದೇಶ ಸೇವೆಯನ್ನು ಮತ್ತೆ ಸ್ಮರಿಸುವಂತಾಗಿದೆ. ಈ ನಾಡಿನ ಅಪ್ರತಿಮ ಹೋರಾಟಗಾರರಾಗಿದ್ದ ಫೆರ್ನಾಂಡಿಸ್, ಕೊಂಕಣ ರೈಲ್ವೆಯ ರೂವಾರಿ.
ಕೊಂಕಣ ರೈಲ್ವೇ ಎಂಬ ಅಪೂರ್ವ ಯೋಜನೆಯನ್ನು ಕರ್ನಾಟಕದ ಕರಾವಳಿಗೆ ನೀಡಿ ಹುಟ್ಟೂರಿನ ಅಪ್ರತಿಮ ಪ್ರೀತಿ ದಾಖಲಿಸಿದವರು. ಕೇಂದ್ರದಲ್ಲಿ ರೈಲ್ವೆ ಇಲಾಖೆಯ ಸಚಿವರಾಗಿದ್ದಾಗ, ಅವರ ಛಲದಿಂದಾಗಿ ಈ ಯೋಜನೆ ಸಾಕ್ಷಾತ್ಕಾರಗೊಂಡಿತ್ತು. ಪ್ರತ್ಯೇಕ ನಿಗಮ ಸ್ಥಾಪಿಸಿ, ಅನುದಾನ ಒದಗಿಸಿ, ಉದ್ಘಾಟಿಸಿದ್ದರಿಂದ ಅವರ ಹೆಸರು ಅಜರಾಮರ.
ಮುಂಬೈಗೆ ಪಯಣ: ಮಂಗಳೂರಿನಲ್ಲಿ ತುಂಬು ಕುಟುಂಬದಲ್ಲಿ ಜಾನ್ ಜೋಸೆಫ್ ಫೆರ್ನಾಂಡಿಸ್- ಎಲೀಸ್ ಮಾರ್ಥಾ ದಂಪತಿಯ ಪುತ್ರನಾಗಿ 1930ರ ಜೂನ್ 3ರಂದು ಜನನ. ಸೈಂಟ್ ಅಲೋಶಿಯಸ್‌ನಲ್ಲಿ ಶಿಕ್ಷಣ. ಮುಂದೆ ಮುಂಬೈಗೆ ಪಯಣ. ಅಲ್ಲಿ ಟ್ರೇಡ್ ಯೂನಿಯನ್ ನಾಯಕನಾಗಿ ರೂಪುಗೊಂಡ ಜಾರ್ಜ್ ಫೆರ್ನಾಂಡಿಸ್, ಒಂದು ಕರೆ ನೀಡಿದರೆ ಮುಂಬೈಗೆ ಮುಂಬೈಯೇ ಸ್ತಬ್ಧ ಎಂಬಷ್ಟರ ಮಟ್ಟಿನ ವರ್ಚಸ್ಸು. ಕಾರ್ಮಿಕ ನಾಯಕ, ಪತ್ರಕರ್ತ, ಕೃಷಿಕ, ರಾಜಕಾರಣಿ, ಸಚಿವ, ಆಡಳಿತಗಾರ.. ಹೀಗೆ ಬಹುಮುಖೀ ವ್ಯಕ್ತಿತ್ವ ಅವರದಾಗಿತ್ತು.
ಜಾರ್ಜ್ ಅವರು ಕರಾವಳಿಯ ಈ ಭಾಗದಲ್ಲಿ ಜನಪ್ರಿಯರಾಗಲು ಇಂದಿರಾಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯೂ ಒಂದು ಕಾರಣವಾಗಿತ್ತು. 1977ರಲ್ಲಿ ಚುನಾವಣೆ ಘೋಷಣೆಯಾದಾಗ ಜಾರ್ಜ್ ಬಿಹಾರದ ಜೈಲಿನಲ್ಲಿ ಇದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿ ಜನತಾ ಪಕ್ಷದಿಂದ ಗೆದ್ದರು. ಬಂಧ ಮುಕ್ತರಾದ ಜಾರ್ಜ್ ಬಳಿಕ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಸಚಿವರಾದರು. ರೈಲ್ವೆ, ರಕ್ಷಣಾ ಮುಂತಾದ ಮಹತ್ವದ ಖಾತೆಗಳನ್ನು ನಿರ್ವಹಿಸಿ ಪ್ರಸಿದ್ಧಿ ಪಡೆದರು.
ಸ್ವಾತಂತ್ರ ಹೋರಾಟಗಾರರೂ ಆಗಿದ್ದ ಅವರು ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದಾಗ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ದ್ದರು. 9-9-1942ರಂದು ಬ್ರಿಟಿಷರ ವಿರುದ್ಧ ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಮಾಜವಾದಿ ಚಿಂತನೆಯನ್ನೇ ಉಸಿರಾಗಿಸಿಕೊಂಡಿದ್ದ ಅವರು, ಜನಸಾಮಾನ್ಯರ, ವಿಶೇಷವಾಗಿ ಕಾರ್ಮಿಕರ ಸಂಘಟನೆಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡವರು.
ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀಗೆ ಗುರುತಿಸಿರುವುದು ನನಗೆ ಮತ್ತಷ್ಟು ಸ್ಫೂರ್ತಿ ಸಿಕ್ಕಂತಾಗಿದೆ. ನನ್ನ ಯಶಸ್ಸಿಗೆ ನಿಮ್ಹಾನ್ ಸಂಸ್ಥೆಯೇ ಕಾರಣವಾಗಿದ್ದು, ಉತ್ತಮ ಕಾರ್ಯಗಳಿಗೆ ಇಲ್ಲಿನ ವೈದ್ಯರು, ಸಿಬ್ಬಂದಿ ಎಲ್ಲರೂ ಸಹಕಾರ ನೀಡಿದ್ದಾರೆ. ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು.
-ಡಾ.ಬಿ.ಎನ್.ಗಂಗಾಧರ್, ಮ್ಹಾನ್ಸ್ ನಿರ್ದೇಶಕರು