Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಚೆ ಕಾರ್ಡ್‌ ಚಳುವಳಿ

06:09 PM Oct 03, 2020 | Suhan S |

ಶೃಂಗೇರಿ: ತಾಲೂಕಿನಲ್ಲಿ ಹಕ್ಕುಪತ್ರ, ಕೃಷಿ ಸಾಗುವಳಿ ಮಂಜೂರಾತಿ ಹಾಗೂ ಮೆಣಸೆಯಲ್ಲಿ ಹೆಚ್ಚುವರಿ ವಿದ್ಯುತ್‌ ಪರಿವರ್ತಕಕ್ಕಾಗಿ ಆಗ್ರಹಿಸಿ ಗಾಂಧಿ  ಜಯಂತಿ ದಿನದಂದು ಜಿಲ್ಲಾ ಧಿಕಾರಿಗಳು ಹಾಗೂ ಮೆಸ್ಕಾಂಗೆ ಅಂಚೆ ಕಾರ್ಡ್‌ ಚಳುವಳಿ ಆರಂಭಿಸಲಾಯಿತು.

Advertisement

ಮೆಣಸೆ ಅಂಚೆ ಕಚೇರಿ ಎದುರು ಶುಕ್ರವಾರ ಏರ್ಪಡಿಸಿದ್ದ ಅಂಚೆ ಕಾರ್ಡ್‌ ಚಳುವಳಿ ಸಂದರ್ಭದಲ್ಲಿ ಮಾತನಾಡಿದ ಹೊಸ್ತೋಟ ತ್ರಿಮೂರ್ತಿ, 2002 ರಿಂದಮನೆದಳ ಮಂಜೂರಾಗಿಲ್ಲ. 2014 ರಲ್ಲಿ 94ಸಿ ಯೋಜನೆಯಡಿ ಸಾವಿರಾರು ಜನರುಮನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಮಂಜೂರಾತಿಗೆ ಸೊಪ್ಪಿನ ಬೆಟ್ಟ ಎಂಬ ಕಾರಣ ಒಡ್ಡಿ ಇಲ್ಲಿ ಮಂಜೂರಾತಿ ಆಗುತ್ತಿಲ್ಲ. ಕೊಪ್ಪ, ಎನ್‌.ಆರ್‌. ಪುರ ತಾಲೂಕಿನಲ್ಲಿ ಹಕ್ಕುಪತ್ರ ನೀಡಲಾಗುತ್ತಿದೆ. ತಾಲೂಕಿನಲ್ಲಿ ಹಲವಾರು ಪರಿಸರದ ಯೋಜನೆಗಳನ್ನು ಸರಕಾರ ಅಳವಡಿಸುತ್ತಿದ್ದು, ಮೀಸಲು ಅರಣ್ಯ ಘೋಷಣೆ, ಕಸ್ತೂರಿ ರಂಗನ್‌ ವರದಿ, ಹುಲಿ ಯೋಜನೆ ಮುಂತಾದ ಯೋಜನೆ ಜಾರಿಯಾಗುತ್ತಿದೆ. ಈಗಾಗಲೇ ಹಕ್ಕು ಪತ್ರ ಹೊಂದಿರುವವರು ಇ- ಸ್ವತ್ತು ಪಡೆಯಲು ಸರಕಾರದ ಕಾನೂನು ಅಡ್ಡಿಯಾಗುತ್ತಿದ್ದು, ಸೊಪ್ಪಿನ ಬೆಟ್ಟ ಎಂಬ ಯೋಜನೆ ಬಗ್ಗೆ ಕಂದಾಯ ಇಲಾಖೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಗಾಂಧಿ ಜಯಂತಿ ಸಂದರ್ಭದಲ್ಲಿ ನಮಗೆ ಅನಿವಾರ್ಯವಾಗಿರುವ ವಿಷಯದ ಬಗ್ಗೆ ಜಿಲ್ಲಾ ಧಿಕಾರಿಗಳ ಗಮನ ಸೆಳೆಯಲು ಅಂಚೆ ಕಾರ್ಡ್‌ ಚಳುವಳಿ ಆರಂಭಿಸಲಾಗುತ್ತಿದೆ ಎಂದರು.

ಪಿ.ಬಿ. ಶ್ರೀನಿವಾಸ್‌ ಮಾತನಾಡಿ, ನೂರಾರು ಮನೆಗಳಿರುವ ಮೆಣಸೆಯಲ್ಲಿ ವಿದ್ಯುತ್‌ ವೋಲ್ಟೆàಜ್‌ ಸಮಸ್ಯೆ ತೀವ್ರವಾಗಿದೆ. ವಿದ್ಯುತ್‌ ಪರಿವರ್ತಕದ ಬೇಡಿಕೆಗಾಗಿ ಕಳೆದ ವರ್ಷವೇ ಇಲಾಖೆ ಅಂದಾಜು ಪಟ್ಟಿ ಆಗಿದೆ. ವೋಲ್ಟೆàಜ್‌ ಸಮಸ್ಯೆಯಿಂದ ಸಣ್ಣ ಕೈಗಾರಿಕೆ, ಗೃಹೋಪಯೋಗಕ್ಕೆ ತೀವ್ರ ಸಮಸ್ಯೆಯಾಗಿದೆ. ಕೆಲ ದಿನದಲ್ಲಿ ಅಡಕೆ ಕೊಯ್ಲು ಆರಂಭಗೊಳ್ಳುತ್ತಿದ್ದು, ಅಡಕೆ ಸುಲಿಯುವ ಯಂತ್ರದ ಚಾಲನೆಗೆ ವೋಲ್ಟೆàಜ್‌ ಅಗತ್ಯವಿದೆ. ಮೆಸ್ಕಾಂ ತುರ್ತಾಗಿ ವಿದ್ಯುತ್‌ ಪರಿವರ್ತಕ ಅಳವಡಿಸುವಂತೆ ಮೆಸ್ಕಾಂಗೆ ಅಂಚೆ ಕಾರ್ಡ್‌ ಚಳುವಳಿ ಆರಂಭಿಸಲಾಗುತ್ತಿದೆ ಎಂದರು. ರೈತ ಸಂಘದ ಮುಂಡಗೋಡು ಶ್ರೀನಿವಾಸಮೂರ್ತಿ, ಕಣದಮನೆ ಜಗದೀಶ್‌, ಬಸವಣ್ಣ, ಮರಿಯಪ್ಪ ನಾಯ್ಕ, ಚಂದ್ರಶೇಖರ್‌,ಮಹಾಬಲ ಶೆಟ್ಟಿ, ಎಂ.ಎಲ್‌. ಶಿವಶಂಕರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next