Advertisement
ನೂರಾರು ಬಗೆಯ ಗುಲಾಬಿ ತಳಿಗಳು ನಿಸರ್ಗದಲ್ಲಿ ನಳನಳಿಸುತ್ತಿದ್ದರೂ ಇದು ಗಮನ ಸೆಳೆದಿದ್ದು ಇತ್ತೀಚೆಗಷ್ಟೇ. ಪುರಾತನ ಪರ್ಷಿಯನ್ನರು ಗುಲಾಬಿಯಲ್ಲಿರುವ ತೈಲದ ಅಂಶ ಹಾಗೂ ಅದರ ಸುವಾಸನೆಯನ್ನು ಕಂಡುಹಿಡಿಯುವವರೆಗೆ ಇದೇನು ಹೆಚ್ಚು ಪ್ರಚಲಿತವಾಗಿರಲಿಲ್ಲ.
Related Articles
Advertisement
ಗುಲಾಬಿಯ ಜೊತೆಯಲ್ಲಿ ಸಾಂಸ್ಕೃತಿಕ ಇತಿಹಾಸ ಇರುವ ಸನ್ನಿವೇಶ ಈಗಿದೆ. ಇದಕ್ಕೆ ಹತ್ತಾರು ಕಾರಣಗಳು. ಪ್ರೇಮ, ಹುಟ್ಟು , ವಿವಿಧ ಹಬ್ಬಗಳ ಆಚರಣೆ, ಶುಭ ಸಮಾರಂಭ ಹೀಗೆ. ಅನೇಕ ಸಂದರ್ಭಗಳಿಗೆ ಈಗ ಗುಲಾಬಿ ಹೂಗಳ ಉಪಸ್ಥಿತಿ ತುಂಬಾ ಸಾಮಾನ್ಯ.
ಅಂದಚಂದಕ್ಕೆ ಪ್ರೇಮ ಸಲ್ಲಾಪಕ್ಕೆ ಬಗೆ ಬಗೆಯ ಸಂದೇಶ ರವಾನೆಗೂ ಈಗ ಗುಲಾಬಿಯೇ ಸಾಧನ! ಅರ್ಧ ಅಂಗುಲದ ಗುಲಾಬಿಯಿಂದ ಅಂಗೈ ಅಗಲದ ಗಾತ್ರದವರೆಗೂ ಇರುವ ಹೂಗಳು ಆಯಾ ವಾತಾವರಣಕ್ಕೆ ತಕ್ಕಂಥ ಬಗೆ ಬಗೆಯ ವಾಸನೆಗಳು ಸೂಸುತ್ತಿರುವ ಗುಲಾಬಿಗಳ ಸಂಖ್ಯೆಯೇ ಹದಿಮೂರು ಸಾವಿರದಷ್ಟಿದೆ ಎಂದರೆ ಅದರ ಜನಪ್ರಿಯತೆ ಹಾಗೂ ವ್ಯಾಪಕತೆಯನ್ನು ಊಹಿಸಬಹುದಾಗಿದೆ.
ಈ ಹೂವು ಅಂಚೆ ರವಾನೆಗೆಂದು ಆರಂಭಗೊಂಡ ವ್ಯವಸ್ಥೆಯಲ್ಲೂ ಪಡೆದಿರುವ ಸ್ಥಾನ ಅಪರಿಮಿತ.
ಬಲ್ಲಿರಾ ಬಲ್ಗೇರಿಯಾವ ?ಕೆಂಪು, ಹಳದಿ, ಬಿಳಿ, ನೇರಳೆ ಮೊದಲಾದ ಹಲವು ಹತ್ತು ರೀತಿಯ ಬಣ್ಣಗಳಿಂದ, ಸುವಾಸನೆಗಳಿಂದ ವಿಶ್ವದಾದ್ಯಂತ ವ್ಯಾಪಿಸಿರುವ ಗುಲಾಬಿಗಳಿಗೆ ಹೆಚ್ಚಿನ ಮಾನ್ಯತೆ ತಂದುಕೊಟ್ಟ ಬಲ್ಗೇರಿಯಾ ಇಂದು ಗುಲಾಬಿ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರ . ಆ ದೇಶ ಕಳೆದ ಐದು ವರ್ಷಗಳಿಂದ ಹೊರತರುತ್ತಿರುವ ವೈವಿಧ್ಯಮಯ ಅಂಚೆಚೀಟಿಗಳು ಪ್ರಪಂಚದ ಅಂಚೆಚೀಟಿ ಸಂಗ್ರಾಹಕರ ಗಮನ ಸೆಳೆಯುತ್ತಲೇ ಇವೆ. ಬಲ್ಗೇರಿಯಾ ಗುಲಾಬಿ ಕಣಿವೆಯ ಎಂಟು ಗುಲಾಬಿ ಚಿತ್ರಗಳುಳ್ಳ ಅಂಚೆಚೀಟಿಗಳ ಗೊಂಚಲು ಬಿಡುಗಡೆ ಮಾಡಿದ್ದು 1970ರಲ್ಲಿ. ಇದು ಗುಲಾಬಿ ಉದ್ಯಮದಲ್ಲಿ ಅತಿ ಹೆಚ್ಚು ಉಪಯೋಗವಾಗುವ ಐದು ಪ್ರಬೇಧಗಳಿಗೆ ಸೇರಿದ ಹೂಗಳಿದ್ದವು. ಇಲ್ಲಿಂದಾಚೆಗೆ ಅಂಚೆಚೀಟಿಗಳಲ್ಲಿ ಗುಲಾಬಿ ಹೂಗಳ ವರ್ಣ ಚೆಲುವು ವಿಸ್ತರಿಸುತ್ತಲೇಇದ್ದು ಇಂಗ್ಲೆಂಡ್, ಅಮೆರಿಕ, ಕೆನಡ, ಜರ್ಮನಿ, ಇಟೆಲಿ ದೇಶಗಳಲ್ಲಿ ರೋಸ್‌ಸ್ಟಾಂಪ್ ಬಿಡುಗಡೆಗೊಳ್ಳದ ವರ್ಷಗಳೇ ಇಲ್ಲ. ಯುರೋಪ್‌ನ ಬಹುತೇಕ ಎಲ್ಲಾ ದೇಶಗಳಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ಪ್ರಕಟವಾಗುವ ಗುಲಾಬಿ ಚಿತ್ರಗಳುಳ್ಳ ಅಂಚೆಚೀಟಿಗಳು ಹತ್ತಾರು.
ವಿಕ್ಟೋರಿಯನ್ ತಳಿಯ ಗುಲಾಬಿಗಳು ಸಾಮಾನ್ಯವಾಗಿ ಮದುವೆಗಳಲ್ಲಿ ಬಳಕೆಯಾಗುತ್ತವೆ. ಅಮೆರಿಕ ದೇಶ 1998ರಲ್ಲಿ ಲಗ್ನಕ್ಕೆ ಗುಲಾಬಿ ಎಂಬ ಶೀರ್ಷಿಕೆಯಲ್ಲಿ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿ ಗಮನ ಸೆಳೆಯಿತು. ಇಂಗ್ಲೆಂಡ್ 1991ರಲ್ಲಿ ಜರುಗಿದ ಜಾಗತಿಕ ಗುಲಾಬಿ ಬೆಳೆಗಾರರ ಸಮಾವೇಶದ ಸ್ಮರಣೆಯಲ್ಲಿ ಗುಲಾಬಿ ಗೊಂಚಲು ಅಂಚೆಚೀಟಿ ಸೆಟ್ ಹೊರತಂದಿತು. ವಿವಿಧ ಬಣ್ಣ , ಬಗೆಬಗೆಯ ಗುಲಾಬಿ, ನಾನಾ ರೀತಿಯ ಆಕಾರ, ಗಾತ್ರ, ವಿನ್ಯಾಸಗಳಲ್ಲಿ ಗುಲಾಬಿ ಅಂಚೆಚೀಟಿಗಳು ನಿರಂತರವಾಗಿ ಹೊರಬರುತ್ತಲೇ ಇದ್ದು ಒಂದೊಂದು ಅಂಚೆಚೀಟಿ ವಿಶ್ವದ ಗಮನ ಸೆಳೆಯುತ್ತವೆ. ಅಂತಹ ಅಂಚೆಚೀಟಿಗಳಲ್ಲಿ “ಕಾಂಪಾಸ್ ರೋಸ್’ ಕೂಡ ಒಂದು. ಲಂಡನ್‌ನ ಗ್ರೀನ್‌ವಿಚ್ ಖಗೋಳ ಕೇಂದ್ರದ ಶತಮಾನೋತ್ಸವಕ್ಕೆ (1984) ಬಂದ ಅಂಚೆಚೀಟಿ ಅದು. ಗುಲಾಬಿ ಲೋಕ !
ಗುಲಾಬಿ ಹೂಗಳಲ್ಲಿ ಆಯಸ್ಕಾಂತೀಯ ಶಕ್ತಿ ಇದೆ ಎಂಬ ಅಂಶವನ್ನು ಪುರಾತನ ಚೀನಾದವರು ಪತ್ತೆ ಹಚ್ಚಿದ್ದರು. ಹಡಗು ಪ್ರಯಾಣದ ವೇಳೆ ಗುಲಾಬಿಗಳನ್ನು ದಿಕ್ಸೂಚಿಗಳಂತೆ ಉಪಯೋಗ ಮಾಡಲಾಗುತ್ತಿತ್ತು. ನಾವಿಕರು, ಬೇಟೆಗಾರರೂ ಗುಲಾಬಿಯನ್ನು ಮಾರ್ಗದರ್ಶಿಯಂತೆ ಬಳಸುತ್ತಿದ್ದರೆಂಬುದು ಸೋಜಿಗದ ಸಂಗತಿಯಾದರೂ ಇದು ನಿಜವೆಂದು ಸಾಬೀತಾಯಿತು. ಅದಕ್ಕೆಂದೇ ಅಂಗೋಲ “ಕಾಂಪಾಸ್ ರೋಸ್’ ಅಂಚೆಚೀಟಿ (1969)ಯನ್ನು ಹೊರತಂದಿತು. ಬೆನ್ನಲ್ಲೇ ಲಂಡನ್‌ನ ಗ್ರೀನ್‌ವಿಚ್ ಕಾಲಮಾನ ಸಂಸ್ಥೆಯೂ ಇನ್ನೊಂದು ಇದರ ಸ್ಮರಣಾರ್ಥ ಅಂಚೆಚೀಟಿ ಪ್ರಕಟಿಸಿತು. ಜಗತøಸಿದ್ಧ ನಾವಿಕ, ಅನ್ವೇಷಕ ವಾಸ್ಕೋಡಗಾಮ ಕೂಡ “ಗುಲಾಬಿ’ಗಳನ್ನೇ ಹಡಗುಯಾನಕ್ಕೆ ದಿಕ್ಸೂಚಿಯಂತೆ ಬಳಸುತ್ತಿದ್ದ. ಆತ ಅಕ್ಷಾಂಶ-ರೇಖಾಂಶಗಳನ್ನು ರೋಸ್ ಹೂಗಳಿಂದಲೇ ಪತ್ತೆಹಚ್ಚುತ್ತಿದ್ದನಂತೆ. ವಾಸ್ಕೋಡಗಾಮನ 500 ವರ್ಷಾಚರಣೆ ಸಂದರ್ಭದಲ್ಲಿ “ರೋಸ್‌ಲೈನ್’ ಅಂಚೆಚೀಟಿಯನ್ನು ಹೊರತರಲಾಯಿತು. ಕಸಿ ಮಾಡಿದ ಗುಲಾಬಿ ತಳಿಗಳು ಜಗತ್ತಿನಾದ್ಯಂತ ಪ್ರಚಲಿತವಾಗುತ್ತಿದ್ದು ಒಂದೊಂದು ತಳಿಗೂ ಆಯಾ ದೇಶಗಳ ಗಣ್ಯರು, ಸ್ಮಾರಕಗಳು, ರಾಜರಾಣಿಯರ ಹೆಸರುಗಳನ್ನಿಟ್ಟು ಗುರ್ತಿಸಲಾಗುತ್ತಿದ್ದು ಅದಕ್ಕನುಗುಣವಾಗಿ ರಾಯಲ್ ಹೈನೆಸ್, ಕ್ವೀನ್ ಎಲಿಜಬೆತ್, ಅಲೆಗಾÕಂಡರ್, ಬ್ಲೂಮೂನ್, ಡಬ್ಬಲ್ ಡಿಲೈಟ್, ಐಸ್‌ಬರ್ಗ್ ಎಂಬ ಹೆಸರುಗಳ ಅಂಚೆಚೀಟಿಗಳು ಪ್ರಕಟಗೊಂಡಿವೆ. ಕೆನಡಾ, ಹಂಗರಿ, ನ್ಯೂಜಿಲೆಂಡ್, ಫ್ರಾನ್ಸ್ ದೇಶಗಳಂತೂ ಗುಲಾಬಿ ಚಿತ್ರಗಳ ಮಿನಿಯೇಚರ್ ಹಾಳೆಗಳನ್ನು ಆಗಿಂದಾಗ್ಗೆ ಮುದ್ರಿಸಿ ಹೊರತರುತ್ತವೆ. ವಿವಿಧ ಬಗೆಯ ತಳಿಗಳನ್ನು ಬೆಳೆಯುವಲ್ಲಿ ನಿಪುಣ ದೇಶವಾದ ಬಲ್ಗೇರಿಯಾ ಚಿತ್ರ-ವಿಚಿತ್ರ ಗುಲಾಬಿ ಅಂಚೆಚೀಟಿಗಳನ್ನು ತರುವಲ್ಲೂ ಮುಂದು. 1978ರಲ್ಲಿ ಬಲ್ಗೇರಿಯಾ ಸಹಜ ಸುವಾಸನೆಯನ್ನು ಒಳಗೊಂಡ ಗುಲಾಬಿ ಚಿತ್ರಗಳಿರುವ ಅಂಚೆಚೀಟಿಗಳನ್ನು ಸಿದ್ಧಗೊಳಿಸಿ ಬಿಡುಗಡೆ ಮಾಡಿತು. ಇಡೀ ವಿಶ್ವವೇ ಈಗ ವಾಸನೆಭರಿತ ಅಂಚೆಚೀಟಿಗಳನ್ನು (ಗುಲಾಬಿ) ಹೊರತರುವಂತಾಯಿತು. ಸಾಮ್ರಾಟ ಅಲೆಗಾÕಂಡರ್ ಭಾರತಕ್ಕೆ ಬಂದಾಗ ತನ್ನೊಡನೆ ಗುಲಾಬಿಗಳನ್ನು ತಂದಿದ್ದ. ಅಲ್ಲಿನಿಂದಲೇ ಭಾರತದಲ್ಲೂ ಗುಲಾಬಿ ಪುಷ್ಪಗಳ ಇತಿಹಾಸ ಆರಂಭ. ಮೊಗಲ್ ದೊರೆಗಳು ಗುಲಾಬಿ ಮೋಹಿಗಳಾದರು. ದೆಹಲಿ ಬಳಿಯ ಸಮ್ಮರ್ ಕುಂಡ ಹಾಗೂ ಆಗ್ರಾದಲ್ಲಿ ಗುಲಾಬಿ ತೋಟಗಳನ್ನು ಅಭಿವೃದ್ಧಿಗೊಳಿಸಿದ ಅವರು ಗುಲಾಬಿ ಅತ್ತರ್ ತಯಾರಿಕೆಯಲ್ಲೂ ಪರಿಣಿತಿ ಸಾಧಿಸಿದರು. ಗುಲಾಬಿ ಅತ್ತರ್ ಜಗತ್ತಿಗೆ ಭಾರತದ ಕೊಡುಗೆ. ನಂತರದ ಕಾಲದಲ್ಲಿ ಭಾರತದಲ್ಲೂ ಹಲವು ಬಗೆಯ ಗುಲಾಬಿ ತಳಿಗಳನ್ನು ಅಭಿವೃದ್ಧಿಪಡಿಸಲಾಯಿತು. ಭಾರತೀಯ ರೋಸ್ ಸೊಸೈಟಿ ಗುಲಾಬಿ ಹೂಗಳ ಅಭಿವೃದ್ಧಿಗಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು ಅದರ ಫಲವಾಗಿ ಹೊರಹೊಮ್ಮಿದ ಗುಲಾಬಿ ತಳಿಗಳಿಗೆ ಮೃಣಾಲಿನಿ, ಸುಗಂಧ ಎಂದು ಹೆಸರಿಡಲಾಯಿತು. ಸಹಜ ಚೆಲುವಿನ ಜೊತೆಗೆ ಸುವಾಸನೆಯನ್ನು ಬೀರುತ್ತಿದ್ದ ಭಾರತೀಯ ಗುಲಾಬಿಗಳ ಚಿತ್ರಗಳನ್ನು ಒಳಗೊಂಡ ಹತ್ತಾರು ಅಂಚೆಚೀಟಿಗಳನ್ನು ಭಾರತೀಯ ಅಂಚೆ ಇಲಾಖೆ ಬಿಡುಗಡೆ ಮಾಡಿದೆ. ಇದರಲ್ಲಿ ಸುವಾಸನೆಯುಳ್ಳ ಅಂಚೆಚೀಟಿಗಳೂ ಸೇರಿವೆ ! ವೈವಿಧ್ಯಮಯ ಹಾಗೂ ವರ್ಣರಂಜಿತ ಅಂಚೆಚೀಟಿಗಳಲ್ಲಿ ಗುಲಾಬಿ ಪುಷ್ಪ ವೈಭವ ಕಾಣಿಸಿಕೊಂಡು ಬರುತ್ತಿರುವುದು ವಿಶೇಷ. “ಪ್ರೇಮಿಗಳ ದಿನ’ದ ಜ್ವರ ವಿಶ್ವದಾದ್ಯಂತ ಹರಡಿಕೊಂಡ ನಂತರವಂತೂ ಹೊರಬಂದಿರುವ ಅಂಚೆಚೀಟಿಗಳು, ಮಿನಿಯೇಚರ್‌ಗಳು ಚಿತ್ರವಿಚಿತ್ರ. ಜರ್ಮನಿಯ ಗುಲಾಬಿ ಉದ್ಯಾನ “ಲವ್‌ಸ್ವಿಜ್’ ಶತಮಾನೋತ್ಸವಕ್ಕೆ ಉದ್ಯಾನದ ದೊಡ್ಡ ಚಿತ್ರವುಳ್ಳ ಅಂಚೆಚೀಟಿಯನ್ನು ಬಿಡುಗಡೆ ಮಾಡಿ ಅಂಚೆ ಸಂಗ್ರಾಹಕರ ಮನಗೆದ್ದಿತು. ನಂತರ ಹಲವು ಆಧಾರಗಳಲ್ಲಿ ಥೇಟ್ ಗುಲಾಬಿ ಗೊಂಚಲಿನಂತೆಯೇ ಇರುವ ಅಂಚೆಚೀಟಿ ಬಂತು. ಪ್ರೇಮಿಗಳ ದಿನಕ್ಕೆ ಹೃದಯಾಕಾರದ ಅಂಚೆಚೀಟಿಗಳು, ಮಿನಿಯೇಚರ್ ಹಾಳೆಗಳೂ ಬರತೊಡಗಿವೆ. ಇವುಗಳ ಬೇಡಿಕೆಯೂ ಹೆಚ್ಚಿದೆ. ಲಂಡನ್‌ನಲ್ಲಿ ರೋಸ್ ಫಿಲಾಟಲಿ ಫ್ರೆಂಡ್ಸ್ ಸಂಘವೊಂದು ಅಸ್ತಿತ್ವಕ್ಕೆ ಬಂದಿದ್ದು ಗುಲಾಬಿ ಅಂಚೆಚೀಟಿಗಳನ್ನು ಒಂದೆಡೆ ಸಂಗ್ರಹಿಸಿ ಮ್ಯೂಸಿಯಂ ಮಾಡುವ ಯೋಜನೆ ಹಾಕಿಕೊಂಡಿದೆ. – ಎನ್. ಜಗನ್ನಾಥ ಪ್ರಕಾಶ್