Advertisement

ಏಕದಿನ, ಅಂಡರ್‌-19 ವಿಶ್ವಕಪ್‌ ಅರ್ಹತಾ ಕೂಟಗಳು ಮುಂದಕ್ಕೆ

10:13 AM May 13, 2020 | mahesh |

ದುಬಾೖ: ಮುಂದಿನ ವರ್ಷದ ವನಿತಾ ವಿಶ್ವಕಪ್‌ ಪಂದ್ಯಾವಳಿಯ ಹಾಗೂ 2022ರ ಪುರುಷರ ಅಂಡರ್‌-19 ವಿಶ್ವಕಪ್‌ ಕೂಟದ ಅರ್ಹತಾ ಸುತ್ತಿನ ಸ್ಪರ್ಧೆಗಳನ್ನು ಕೋವಿಡ್ ಕಾರಣದಿಂದ ಐಸಿಸಿ ಮಂಗಳವಾರ ಮುಂದೂಡಿತು. ವನಿತಾ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿವೆ. 7 ತಂಡಗಳು ನೇರ ಅರ್ಹತೆ ಪಡೆದಿವೆ. ಅರ್ಹತಾ ಸುತ್ತಿನಲ್ಲಿ ಮೊದಲ 3 ಸ್ಥಾನ ಪಡೆದ ತಂಡಗಳು ಪ್ರಧಾನ ಸುತ್ತು ಪ್ರವೇಶಿಸಲಿವೆ.

Advertisement

ಶ್ರೀಲಂಕಾ, ಬಾಂಗ್ಲಾದೇಶ, ಅಯರ್‌ಲ್ಯಾಂಡ್‌, ನೆದರ್ಲೆಂಡ್ಸ್‌, ಪಾಕಿಸ್ಥಾನ, ಪಪುವಾ ನ್ಯೂ ಗಿನಿ, ಥಾಯ್ಲೆಂಡ್‌, ಯುನೈಟೆಡ್‌ ಸ್ಟೇಟ್ಸ್‌, ವೆಸ್ಟ್‌ ಇಂಡೀಸ್‌ ಮತ್ತು ಜಿಂಬಾಬ್ವೆ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸುವ ತಂಡಗಳಾಗಿವೆ. ಈ ಪಂದ್ಯಗಳು 2021ರ ಜುಲೈ 3ರಿಂದ 19ರ ತನಕ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ನ್ಯೂಜಿಲ್ಯಾಂಡ್‌ ವನಿತಾ ವಿಶ್ವಕಪ್‌ ಪಂದ್ಯಾವಳಿಯ ಆತಿಥ್ಯ ವಹಿಸಲಿದೆ.

“ಎಲ್ಲ ದೇಶಗಳ ಕ್ರಿಕೆಟ್‌ ಮಂಡಳಿಗಳ ಜತೆಗೆ, ಸ್ಥಳೀಯ ಆರೋಗ್ಯ ಸಂಸ್ಥೆಗಳೊಂದಿಗೆ ಚರ್ಚಿಸಿ ಅರ್ಹತಾ ಪಂದ್ಯಾವಳಿಯನ್ನು ಮುಂದೂಡಲು ನಿರ್ಧರಿಸಲಾಯಿತು. ನೂತನ ದಿನಾಂಕವನ್ನು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಅಂಡರ್‌-19 ವಿಶ್ವಕಪ್‌
ಪುರುಷರ 2022ರ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ 2022ರಂದು ನಡೆಯಲಿದೆ. ಇದಕ್ಕಾಗಿ ಯುರೋಪ್‌ ವಲಯದ ಅರ್ಹತಾ ಸುತ್ತಿನ ಸ್ಪರ್ಧೆ ಇದೇ ಜುಲೈ 24ರಿಂದ 30ರ ತನಕ ಡೆನ್ಮಾರ್ಕ್‌ನಲ್ಲಿ ನಡೆಯಬೇಕಿತ್ತು. ಇದನ್ನೂ ಈಗ ಮುಂದೂಡಲಾಗಿದೆ. ನೂತನ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಐಸಿಸಿ ಸಂಘಟನಾ ಮುಖ್ಯಸ್ಥ ಕ್ರಿಸ್‌ ಟೆಟಿÉ  ಹೇಳಿದ್ದಾರೆ. ಹಾಗೆಯೇ ಟಾಂಜಾನಿಯಾದಲ್ಲಿ ನಡೆಯಬೇಕಿದ್ದ ಆಫ್ರಿಕಾ ವಲಯದ (ಆ. 7-14) ಹಾಗೂ ಥಾಯ್ಲೆಂಡ್‌ನ‌ಲ್ಲಿ ಆಡಬೇಕಿದ್ದ ಏಶ್ಯ ವಲಯದ (ಡಿ. 1-19) ಡಿವಿಷನ್‌-2 ಅರ್ಹತಾ ಸುತ್ತಿನ ಪಂದ್ಯಗಳಿಗೂ ನೂತನ ದಿನಾಂಕವನ್ನು ಪ್ರಕಟಿಸಲಾಗುವುದು. ಡಿವಿಷನ್‌-1ರ ಎಲ್ಲ 5 ವಿಭಾಗಗಳ ಅರ್ಹತಾ ಪಂದ್ಯಗಳು 2021ರಲ್ಲಿ ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next