ನವದೆಹಲಿ: ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಿನ್‌ಟೆಕ್ ಕಂಪನಿಗಳಲ್ಲಿ ಒಂದಾದ ಭಾರತ್ ಪೇ, ತನ್ನ ಹೊಸ ಉತ್ಪನ್ನ ‘ಪೋಸ್ಟ್‌ಪೇ’ ಪರಿಚಯಿಸುವ ಮೂಲಕ ‘ಈಗ ಖರೀದಿಸಿ ನಂತರ ಪಾವತಿಸಿ ಬಿಎನ್‍ಪಿಎಲ್ (ಬೈ ನೌ ಪೇ ಲೇಟರ್) ವಿಭಾಗಕ್ಕೆ ಪ್ರವೇಶ ಪಡೆದಿದೆ.
ಪೋಸ್ಟ್ ಪೇ, ಗ್ರಾಹಕರಿಗೆ ಈಗ ಖರೀದಿಸಲು ಮತ್ತು ನಂತರ, ಪಾವತಿಸಲು ಸಾಲ ನೀಡುತ್ತದೆ. ಗ್ರಾಹಕರು ಪೋಸ್ಟ್‌ಪೇ ಆಪ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು ಮತ್ತು ಬಡ್ಡಿ ರಹಿತ ಕ್ರೆಡಿಟ್ ಮಿತಿಯನ್ನು ರೂ. 10 ಲಕ್ಷದವರೆಗೂ ನೀಡಿದೆ.
ಈ ಡಿಜಿಟಲ್ ಉತ್ಪನ್ನವು ಗ್ರಾಹಕರಿಗೆ ಆಫ್‌ಲೈನ್ ಮತ್ತು ಆನ್‌ಲೈನ್ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡಲು ಮತ್ತು ಇಎಂಐ ಗಳ ಮೂಲಕ ಸುಲಭವಾಗಿ ಮರುಪಾವತಿ ಮಾಡಲು ಅವಕಾಶ ಒದಗಿಸುತ್ತದೆ. ಗ್ರಾಹಕರು ಪೋಸ್ಟ್‌ಪೇ ಆಪ್ ಅನ್ನು ತೆರೆದು, ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ವ್ಯಾಪಾರ ಮಳಿಗೆಗಳಲ್ಲಿ ಪೋಸ್ಟ್‌ಪೇ ಕ್ರೆಡಿಟ್ ಬಳಸಿ ಪಾವತಿಸಬಹುದು. ಲಕ್ಷಾಂತರ ಆಫ್‌ಲೈನ್ ವ್ಯಾಪಾರಿಗಳು ಮತ್ತು ಇ-ಕಾಮರ್ಸ್ ಪ್ಲಾಟ್ ಫಾರ್ಮ್‌ಗಳಲ್ಲಿ ಸ್ವೀಕರಿಸಲ್ಪಡುವ ಪೋಸ್ಟ್‌ಪೇ ಕಾರ್ಡ್ ಮೂಲಕ ಪಾವತಿಸಲು ಅವರಿಗೆ ಅವಕಾಶವಿದೆ. ಗ್ರಾಹಕರು ತಮ್ಮ ಮೊದಲ ಮತ್ತು ನಿರ್ದಿಷ್ಟ ಮೈಲಿಗಲ್ಲು ವಹಿವಾಟುಗಳಲ್ಲಿ ಕ್ಯಾಶ್ ಬ್ಯಾಕ್‌ಗಳನ್ನು ಪಡೆಯಬಹುದು.
ಇದನ್ನೂ ಓದಿ:ಡ್ರೀಮ್ 11 ಆ್ಯಪ್ ವಿರುದ್ಧ ಎಫ್ಐಆರ್
ಡಿಜಿಟಲ್ ಪಾವತಿ ವಿಧಾನಗಳನ್ನು ಚೆನ್ನಾಗಿ ತಿಳಿದಿರುವ ಹೊಸ ಪೀಳಿಗೆಯ ಗ್ರಾಹಕರಿಗಾಗಿ ಪೋಸ್ಟ್‌ಪೇಯನ್ನು ವಿನ್ಯಾಸಗೊಳಿಸಲಾಗಿದೆ. ಪೋಸ್ಟ್‌ಪೇ ಗ್ರಾಹಕರು ಮಾಡಿದ ಎಲ್ಲಾ ವಹಿವಾಟುಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಮರುಪಾವತಿಗಾಗಿ ಒಂದು ಬಿಲ್ ಅನ್ನು ತಯಾರಿಸುತ್ತದೆ. ಅಲ್ಲದೆ, ಪೋಸ್ಟ್‌ಪೇ ಆ್ಯಪ್ ಅಥವಾ ಪೋಸ್ಟ್‌ಪೇ ಕಾರ್ಡ್ ಮೂಲಕ ಪಾವತಿಗಳ ಮೇಲೆ ಯಾವುದೇ ವಾರ್ಷಿಕ ಶುಲ್ಕ ಅಥವಾ ವಹಿವಾಟು ಶುಲ್ಕಗಳಿರುವುದಿಲ್ಲ.
ಪೋಸ್ಟ್‌ಪೇ ಈ ವರ್ಷ ದುಬೈನಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್‌ನ ಜಾಗತಿಕ ಪ್ರಾಯೋಜಕರಾಗಿದ್ದಾರೆ. ಎಲ್ಲಾ ವಹಿವಾಟು ನಡೆಸುವ ಗ್ರಾಹಕರು ಅ. 17 ರಿಂದ 14 ನವೆಂಬರ್ ವರೆಗೆ ನಡೆಯಲಿರುವ ವಿಶ್ವಕಪ್ ಪಂದ್ಯಗಳಿಗೆ 3,500 ಉಚಿತ ಪಾಸ್‌ಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಅ. 24 ರಂದು ಭಾರತ vs ಪಾಕಿಸ್ತಾನ ಪಂದ್ಯದ ಪಾಸ್‌ಗಳನ್ನು ಪುರಸ್ಕರಿಸುವ ಏಕೈಕ ಅಪ್ಲಿಕೇಶನ್ ಪೋಸ್ಟ್‌ಪೇ ಮಾತ್ರ.
ಭಾರತ್ ಪೇ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ ಮಾತನಾಡಿ, ಪೋಸ್ಟ್ ಪೆ ಮೂಲಕ ನಮ್ಮ ಗುರಿಯೇನೆಂದರೆ ದೈನಂದಿನ ಖರೀದಿಗಳಿಗೂ ಇಎಂಐ ದೊರಕುವಂತೆ ಮಾಡುವುದು. ಇಎಂಐ ಮೂಲಕ ಐಫೋನ್ ಹೇಗೋ ಹಾಗೆ ಇಎಂಐ ಮೂಲಕ ಗೋಲ್ಗಪ್ಪ ಎಂಬುದು ನಮ್ಮ ಧ್ಯೇಯವಾಕ್ಯವಾಗಿದೆ ಎಂದರು.