Advertisement

ಪಿನ್‌ಕೋಡ್‌ ಬಗ್ಗೆ ನಿಮಗೆಷ್ಟು ಗೊತ್ತು?

06:20 AM Aug 31, 2017 | |

ಪುಟಾಣಿಗಳೇ, ನಿಮಗೂ ಗೊತ್ತಿರುತ್ತೆ. ಪತ್ರ ಬರೆದಾಗ ವಿಳಾಸದ ನಂತರ ಪಿನ್‌ಕೋಡ್‌ ಸಂಖ್ಯೆಯನ್ನೂ ಬರೆಯಬೇಕು. ಬೆಂಗಳೂರಿನ ಪಿನ್‌ಕೋಡ್‌ 56…ರಿಂದ ಶುರುವಾದರೆ, ಉಳಿದ ಜಿಲ್ಲೆಗಳ ಪಿನ್‌ಕೋಡ್‌ 57…ರಿಂದಲೂ, ವಿಜಯಪುರ, ಬೀದರ್‌ ಮುಂತಾದ ಜಿಲ್ಲೆಗಳ ಪಿನ್‌ಕೋಡ್‌ 58…ರಿಂದಲೂ ಶುರುವಾಗುತ್ತದೆ. 6 ಅಂಕಿಗಳ ಪಿನ್‌ಕೋಡ್‌ ಬರೆದರೆ ನಮ್ಮ ಪತ್ರ ಬೇಗ ವಾರಸುದಾರರಿಗೆ ತಲುಪುತ್ತದೆ. ಈಗ ನಿಮಗೆ ಪಿನ್‌ಕೋಡ್‌ ಅಂದರೇನು? ಅದು ಜಾರಿಗೆ ಬಂದದ್ದು ಯಾವಾಗ ಎಂಬಿತ್ಯಾದಿ ಕುತೂಹಲ ಮೂಡಿರಬೇಕಲ್ಲವೆ? ಅದಕ್ಕೆ ಇಲ್ಲಿ ಉತ್ತರವಿದೆ.

Advertisement

ಪಿನ್‌ ಕೋಡ್‌ ಎಂಬುದು ಇಂಗ್ಲಿಷ್‌ನ ಪೋಸ್ಟಲ್‌ ಇಂಡೆಕ್ಸ್‌ ನಂಬರ್‌ ( Postal Index Number)  ಎಂಬುದರ ಸಂಕ್ಷಿಪ್ತರೂಪ. ಅದು ಅಂಚೆ ಕಚೇರಿಗಳಿಗೆ ಭಾರತೀಯ ಅಂಚೆ ಇಲಾಖೆ ಆಡಳಿತವು ಬಳಸುವ ಸಂಖ್ಯಾ ವ್ಯವಸ್ಥೆ ಆಗಿದೆ. ಈ ವ್ಯವಸ್ಥೆಯನ್ನು 15 ಆಗಸ್ಟ್‌ 1972ರಂದು ಜಾರಿಗೆ ತರಲಾಯಿತು. ಅಂಚೆ ವಿತರಣೆಗೆ ಸುಲಭವಾಗುವ ಸಲುವಾಗಿ ಮಾಡಿದ ವ್ಯವಸ್ಥೆಯಿದು.

ಪಿನ್‌ ಕೋಡ್‌, ಒಟ್ಟು ಆರು ಅಂಕಿಗಳ ಸಂಖ್ಯೆ. ಎಂಟು ಪ್ರಾದೇಶಿಕ ವಲಯಗಳು ಮತ್ತು ಭಾರತೀಯ ಸೇನೆಗಾಗಿಯೇ ಒಂದು  ವಲಯ ಸೇರಿದಂತೆ ಭಾರತದಲ್ಲಿ ಒಂಬತ್ತು ಪಿನ್‌ ಕೋಡ್‌ ವಲಯಗಳು ಇವೆ. ಪಿನ್‌ ಕೋಡ್‌ನ‌ ಮೊದಲ ಅಂಕಿಯು ವಲಯವನ್ನೂ , ಎರಡನೇ ಅಂಕಿಯ ಉಪವಲಯವನ್ನೂ , ಮೂರನೇ ಅಂಕಿಯ ಪ್ರದೇಶದಲ್ಲಿ ಅಂಚೆ-ವಿಂಗಡಣೆಯ ಜಿಲ್ಲೆಯನ್ನೂ ಸೂಚಿಸುತ್ತವೆ. ಪಿನ್‌ ಕೋಡಿನ ಕೊನೆಯ ಮೂರು ಅಂಕಿಗಳು ಅಂಚೆ ವಿತರಿಸುವ ಅಂಚೆ ಕಚೇರಿ ಯಾವುದೆಂದು ತಿಳಿಯಲು ಸಹಾಯ ಮಾಡುತ್ತವೆ.  

ದೇಶದಲ್ಲಿನ 9 ಪಿನ್‌ಕೋಡ್‌ ವಲಯಗಳು ಈ ಕೆಳಗಿನಂತಿವೆ:
1 – ಹರಿಯಾಣ, ಪಂಜಾಬ್‌, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ , ಚಂಡೀಘಢ
2 – ಉತ್ತರ ಪ್ರದೇಶ, ಉತ್ತರಾಖಂಡ್‌
3 – ರಾಜಸ್ಥಾನ, ಗುಜರಾತ್‌, ದಮನ್‌ ಮತ್ತು ದಿಯು, ದಾದ್ರಾ ಮತ್ತು ನಗರ್‌ ಹವೇಲಿ
4 – ಗೋವಾ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಚತ್ತೀಸ್‌ಗಡ
5 – ಆಂಧ್ರ ಪ್ರದೇಶ, ಕರ್ನಾಟಕ
6 – ತಮಿಳುನಾಡು, ಕೇರಳ, ಪುದುಚೆರಿ, ಲಕ್ಷದ್ವೀಪ
7 – ಒರಿಸ್ಸಾ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ, ತ್ರಿಪುರ, ಮೇಘಾಲಯ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು, ಅಸ್ಸಾಂ
8 – ಬಿಹಾರ, ಜಾರ್ಖಂಡ್‌
9 – ಆರ್ಮಿ ಪೋಸ್ಟ್  ಆಫೀಸ್‌ (APO) ಮತ್ತು ಫೀಲ್ಡ… ಪೋಸ್ಟ್ ಆಫೀಸ್‌ (FPO)

-ಮನೋಹರ ಜೋಶಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next