Advertisement
ಶುಕ್ರವಾರ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಎಫ್ಎಸ್‌ಎಲ್ ವರದಿ ಬಂದಿಲ್ಲ. ಸಿಸಿಟಿವಿ ಡಿವಿಆರ್ ನಲ್ಲಿರುವ ದೃಶ್ಯಗಳ ಮಾಹಿತಿ ದೊರೆತಿಲ್ಲ. ದೃಶ್ಯ ಡಿವಿಆರ್‌ನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಪೂಜಾ ಸಾಮಗ್ರಿ, ಇತರ ಪರಿಕರ ಗಳನ್ನು ಶೀರೂರು ಮಠದ ಉಸ್ತುವಾರಿಗಳು ಮತ್ತು ಸೋದೆ ಮಠದವರ ಸಮ್ಮುಖ ಸೋದೆ ಮಠಕ್ಕೆ ಹಸ್ತಾಂತರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ನೀಡುವ ಪ್ರಕ್ರಿಯೆ ನಡೆದಿದೆ. ಮಠವನ್ನು ಪೊಲೀಸ್ ಸುಪರ್ದಿಯಿಂದ ಬಿಟ್ಟುಕೊಡುವ ಕುರಿತು ಶೀಘ್ರ ತೀರ್ಮಾನಿಸಲಿದ್ದೇವೆ ಎಂದರು.
ಮಂಗಳೂರಿನ ಎಫ್ಎಸ್‌ಎಲ್ ಪ್ರಯೋಗಾಲಯದಲ್ಲಿ ಕಾರವಾರ, ಉಡುಪಿ, ದ.ಕ., ಮಡಿಕೇರಿ ಮತ್ತು ಚಿಕ್ಕ ಮಗಳೂರು ಜಿಲ್ಲೆಗಳ ಪ್ರಕರಣಗಳಿಗೆ ಸಂಬಂಧಿಸಿದ ಸ್ಯಾಂಪಲ್‌ಗಳ ಪರೀಕ್ಷೆಗಳು ಇರುತ್ತವೆ. ಅಲ್ಲಿ ಕಾರ್ಯದ ಒತ್ತಡ ಸಹಜವಾಗಿಯೇ ಇರುತ್ತದೆ. ಅದು ತಾಂತ್ರಿಕ ಪ್ರಕ್ರಿಯೆ. ನಾವು ಮಧ್ಯಪ್ರವೇಶಿಸಲು ಆಗದು. ಶೀರೂರು ಶ್ರೀಗಳ ಅಸ್ವಾಭಾವಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದ ಎಫ್ಎಸ್‌ಎಲ್ ವರದಿಯನ್ನು ಆದ್ಯತೆಯ ನೆಲೆಯಲ್ಲಿ ನೀಡುವಂತೆ ಮನವಿ ಮಾಡಿ ದ್ದೇವೆ. ಪೆರ್ಡೂರಿನಲ್ಲಿ 2018ರ ಮೇ 30ರಂದು ನಡೆ ದಿರುವ ಹಸನಬ್ಬ ಪ್ರಕರಣದ ಎಫ್ಎಸ್‌ಎಲ್ ವರದಿ ಕೂಡ ಇನ್ನೂ ಬಂದಿಲ್ಲ. ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿರುವುದರಿಂದ ಆ ವರದಿ ಸಿಐಡಿಗೆ ಹೋಗಲಿದೆ ಎಂದು ಎಸ್‌ಪಿ ತಿಳಿಸಿದರು. ಇಮೋಷನಲ್ ಅಲ್ಲ , ಪ್ರೊಫೆಷನಲ್
ಇಮೋಷನಲ್ (ಭಾವನಾತ್ಮಕ) ಅಂಶಗಳ ಆಧಾರ ದಲ್ಲಿ ತನಿಖೆ ಸಾಧ್ಯವಾಗದು. ಲಾಜಿಕ್ ಮತ್ತು ಪ್ರೊಫೆಶನಲ್ ಆಗಿ ತನಿಖೆ ನಡೆಯುತ್ತದೆ. ಒಬ್ಬರು ಡಿವೈಎಸ್‌ಪಿ, ಮೂವರು ಇನ್ಸ್‌ಪೆಕ್ಟರ್‌ಗಳು ಹಾಗೂ ಮೂವರು ಪಿಎಸ್‌ಐಗಳ ತಂಡ ಹಗಲು ರಾತ್ರಿಯೆನ್ನದೆ ತನಿಖೆ ಯಲ್ಲಿ ನಿರತವಾಗಿದೆ. ಮಣಿಪಾಲದಲ್ಲಿ ರಿಕ್ರಿ ಯೇಷನ್ ಕ್ಲಬ್ ನಡೆಸುತ್ತಿದ್ದ ಗುರುಪ್ರಸಾದ್ ಭಟ್ ಕೊಲೆ ಪ್ರಕರಣದಲ್ಲಿ ಘಟನೆ ನಡೆದ 6 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದ್ದೇವೆ. ಎಲ್ಲ ಪ್ರಕರಣ ಗಳಲ್ಲಿಯೂ ಹೀಗೆಯೇ ಆಗದು. ಏನಾದರೂ ಸಾಕ್ಷಾ é ಧಾರ ಗಳು ಬೇಕು. ಯಾರೋ ಹೇಳಿದರೆಂದು ಯಾರನ್ನೋ ತಂದು ಇವರೇ ಅಪರಾಧಿ ಎನ್ನಲಾಗದು ಎಂದು ಎಸ್‌ಪಿ ಪ್ರತಿಕ್ರಿಯಿಸಿದರು.
Related Articles
ಉಡುಪಿ: ಶೀರೂರು ಶ್ರೀಗಳ ನಿಧನದ ಬಗ್ಗೆ ಉನ್ನತ ಸ್ತರದ ತನಿಖೆಗೆ ಯಾರಿಂದಲೂ ಜಿಲ್ಲಾಡಳಿತಕ್ಕೆ ಬೇಡಿಕೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
Advertisement
ಜಿಲ್ಲಾಡಳಿತ ಅಥವಾ ಇನ್ನಾವುದರ ಮೂಲಕವಾದರೂ ಬೇಡಿಕೆ ಬಂದಲ್ಲಿ ಉನ್ನತ ಸ್ತರದ ತನಿಖೆ ನಡೆಸಲಾಗುವುದು ಸಚಿವ ಯು.ಟಿ. ಖಾದರ್ ಹೇಳಿರುವುದನ್ನು ಪತ್ರಕರ್ತರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಾಗ ಯಾರಿಂದಲೂ ಬೇಡಿಕೆ ಬಂದಿಲ್ಲ ಎಂದರು.