Advertisement

ಯೂಸುಫ್ ಮೂಲಬೆಲೆ 75 ಲಕ್ಷ  ರೂ.

09:01 AM Jan 12, 2018 | Team Udayavani |

ಮುಂಬಯಿ: ಭಾರತ ಕ್ರಿಕೆಟ್‌ನ ಸ್ಫೋಟಕ ಆಟಗಾರರಲ್ಲೊಬ್ಬರಾದ ಯೂಸುಫ್ ಪಠಾಣ್‌ ಇತ್ತೀಚೆಗೆ ಉದ್ದೀಪನ ಸೇವನೆ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಶಿಕ್ಷೆಯ ಅವಧಿಯನ್ನೂ ಪೂರೈಸುವ ಹಾದಿಯಲ್ಲಿದ್ದಾರೆ. 

Advertisement

ಆದರೆ ಉದ್ದೀಪನ ಪ್ರಕರಣದ ಹೊರತಾಗಿಯೂ ಯೂಸುಫ್ ಪಠಾಣ್‌ ಅವರ ಬೇಡಿಕೆಯೇನು ತಗ್ಗಿಲ್ಲ. ಜ. 27, 28ರಂದು ನಡೆಯುವ ಐಪಿಎಲ್‌ ಹರಾಜಿನಲ್ಲಿ ಅವರ ಮೂಲಬೆಲೆ 75 ಲಕ್ಷ ರೂ.ಗಳೆಂದು ನಿಗದಿಯಾಗಿದೆ. ಐಪಿಎಲ್‌ ಮೊದಲ ಆವೃತ್ತಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಆಡಿದ್ದ ಯೂಸುಫ್ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ರಾಜಸ್ಥಾನ್‌ ಚಾಂಪಿಯನ್‌ ಆಗಲು ನೆರವಾಗಿದ್ದರು. ಮುಂದೆ ಕೋಲ್ಕತಾ ನೈಟ್‌ರೈಡರ್ಸ್‌ ಸೇರಿಕೊಂಡ ಅವರು, ಆ ತಂಡ 2 ಬಾರಿ ಚಾಂಪಿಯನ್‌ ಆಗಲು ಮುಖ್ಯಪಾತ್ರ ವಹಿಸಿದ್ದರು. ಇದೀಗ ಮತ್ತೆ ಹರಾಜಿಗೆ ಲಭ್ಯರಾಗಿದ್ದು ಯಾವ ತಂಡದ ಪಾಲಾಗುತ್ತಾರೆ ಎಂಬುದೊಂದು ಕುತೂಹಲ.

Advertisement

Udayavani is now on Telegram. Click here to join our channel and stay updated with the latest news.

Next