Advertisement

ಸಿಡಿಲು ಸಹಿತ ಮಳೆಯ ಆರ್ಭಟಕ್ಕೆ ಹಾರಿಹೋದ ಚಾವಣಿಗಳು

12:32 PM Apr 10, 2017 | |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನ ಹಾಗೂ ಹನಗೋಡು ಹೋಬಳಿ ಕೆಲ ಗ್ರಾಮಗಳಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದ್ದು, ಬಿರುಗಾಳಿಗೆ ಕೆಲವೆಡೆ ಅಸಿಪಾಸ್ತಿ ನಷ್ಟವುಂಟು ಮಾಡಿದೆ.

Advertisement

ತಾಲೂಕಿನ ಹನಗೋಡು ಭಾಗದ ಕರಣಕುಪ್ಪೆ, ಹರೀನಹಳ್ಳಿ, ಕಡೇಮನುಗನಹಳ್ಳಿ, ನೇರಳಕುಪ್ಪೆ, ಬೀಲ್ಲೇನಹೊಸಹಳ್ಳಿ, ಬಿ.ಆರ್‌ ಕಾವಲ್‌ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕಳೆದೆರಡು ದಿನಗಳಿಂದ ಮೋಡಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಮೊದಲು ಬಿರುಗಾಳಿ ಸಹಿತ, ಸ್ವಲ್ಪಮಳೆ ಬಂತು, ಮತ್ತೆ ರಾತ್ರಿ 9 ಗಂಟೆಗೆ ಆರಂಭವಾದ ಗುಡುಗು, ಸಿಡಿಲಿನಿಂದ ಕೂಡಿದ್ದ ಮಳೆಯು ಸತತ ಎರಡು ಗಂಟೆಗೂ ಹೆಚ್ಚು ಕಾಲ ಸುರಿದಿದೆ.

ಮನೆ ಚಾವಣಿ ಹಾಗೂ ಬೆಳೆ ನಾಶ: ಹನಗೋಡು ಹೋಬಳಿಯ ಹರೀನಹಳ್ಳಿ ಗ್ರಾಮದ ಶಿವಕುಮಾರ್‌ ಹಾಗೂ ಶಿವರಾಜು ಎಂಬುವರ ಮನೆಯ ಚಾವಣಿ ಹೆಂಚು ಹಾಗೂ ಶೀಟುಗಳು ಹಾರಿಹೋಗಿವೆ, ಅಲ್ಲದೆ ಇವರಿಗೆ ಸೇರಿದ ಬಾಳೆಬೆಳೆಯೂ ಸಹ  ಬಿರುಗಾಳಿಯ ಹೊಡೆತಕ್ಕೆ ಸಿಲುಕಿದ್ದು, ಕರಣಕುಪ್ಪೆ ಗ್ರಾಮದ ಕೆ.ಎಂ.ರಾಜುಗೆ ಸೇರಿದ ಬಾಳೆ ಹಾಗೂ ತೋಟದ ಸುತ್ತ ನೆಟ್ಟಿದ್ದ ಸಿಲ್ವರ್‌ ಗಿಡಗಳು ಬುಡ ಸಮೇತ ನೆಲಕ್ಕುರುಳಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ.

ಇನ್ನು ದೇವರಾಜ ಕಾಲೋನಿ (ಕರ್ಣಕುಪ್ಪೆ ಹಾಡಿ) ಯ 8 ಮನೆಗಳ ಚಾವಣಿ ಸಂಪೂರ್ಣ ಹಾನಿಗೊಳ ಗಾಗಿದ್ದು, ಸುತ್ತಮುತ್ತಲಿನಲ್ಲಿ ಮನೆಗಳಿಲ್ಲದೆ, ದೇವರಾಜು, ಜಯಮ್ಮ, ಮುನಿಯಮ್ಮ, ಶಿವಮ್ಮ, ದೊಡ್ಡಮಯ್ಯ, ಸಾಕಮ್ಮ, ರತ್ನಮ್ಮ, ಸಿಳ್ಳಮಾರಯ್ಯ ಅವರುಗಳು ಸುತ್ತಮುತ್ತಲಿನಲ್ಲಿ ಎಲ್ಲೂ ಆಶ್ರಯ ಸಿಗದೆ ಮಳೆಯಲ್ಲೇ ರಾತ್ರಿ ಇಡೀ ಕಳೆದಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿ ಶ್ರೀನಿವಾಸ್‌ ಮತ್ತು ಪಿಡಿಒ ಭೇಟಿ ನೀಡಿ ಮಹಜರು ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next