Advertisement

ರಾಜ್ಯದಲ್ಲಿ ಇಂದು 5,031 ಹೊಸ ಕೇಸ್ : ಬೆಂಗಳೂರಿನ ಪಾಸಿಟಿವಿಟಿ ದರ 7.5% ಕ್ಕೆ ಏರಿಕೆ

06:55 PM Jan 06, 2022 | Team Udayavani |

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು 4 ಸಾವಿರ ದಾಟುತ್ತಿದ್ದಂತೆ ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣವು 7.5% ಕ್ಕೆ ಏರಿಕೆಯಾಗಿದೆ.ಸೋಂಕಿನಿಂದ ಬೆಂಗಳೂರಿನಲ್ಲಿ ಒಂದು ಸಾವು ಸಂಭವಿಸಿದೆ.

Advertisement

ರಾಜ್ಯದಲ್ಲಿ ಗುರುವಾರ 5,031 ಹೊಸ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ 4,324 ಹೊಸ ಪ್ರಕರಣಗಳು ದ್ರಢಪಟ್ಟಿವೆ.

ರಾಜ್ಯದಲ್ಲಿ ಪಾಸಿಟಿವಿಟಿ ದರ 3.95% ಇದ್ದು, ಇಂದು ಹೊಸ ಒಮಿಕ್ರಾನ್ ಪ್ರಕರಣಗಳು ಕಂಡುಬಂದಿಲ್ಲ.ರಾಜ್ಯದಲ್ಲಿ ಇದುವರೆಗೆ ಒಟ್ಟು 226 ಒಮಿಕ್ರಾನ್ ಪ್ರಕರಣಗಳು ಕಂಡು ಬಂದಿವೆ.

ರಾಜ್ಯದೆಲ್ಲೆಡೆ ಇಂದು 1,27,194 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next