ಮಂಗಳೂರು: ಶಿಕ್ಷಕರು ದೇಶದ ನಿರ್ಮಾಪಕರು. ಮಕ್ಕಳ ಭವಿಷ್ಯವನ್ನು ಕಟ್ಟುವ ಮಹತ್ತರ ಜವಾಬ್ದಾರಿ ಅವರ ಮೇಲಿದೆ. ಶಿಕ್ಷಕರ ನೋವು ನಲಿವಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡ ಹೇಳಿದರು.
ಸಕೀìಟ್ ಹೌಸ್‌ನಲ್ಲಿ ರವಿವಾರ ನಡೆದ ಶಿಕ್ಷಕರ ಮತ್ತು ಅಧಿಕಾರಿಗಳ ಸಂವಾದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಸರಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರಿಗೆ ಉಚಿತವಾಗಿ ಪಠ್ಯಪುಸ್ತಕ, 400 ರೂ. ವಿಶೇಷ ವೇತನದ ಬಗ್ಗೆ ಆರ್ಥಿಕ ಇಲಾಖೆಯಲ್ಲಿ ಚರ್ಚೆ, ಶಿಕ್ಷಕರ ದಿನಾಚರಣೆಗೆ ಸರಕಾರದಿಂದ ಅನುದಾನ ನೀಡು ವುದು, ಅನುದಾನಿತ ಶಾಲಾ ಮಾನ್ಯತೆ ನವೀಕರಣ ಸಮಸ್ಯೆ, ಅನುದಾನಿತ ಶಾಲಾ ನಿವೃತ್ತ ಶಿಕ್ಷಕರ ಗಳಿಕೆ ರಜೆ ನಗದೀಕರಣದ ಸಮಸ್ಯೆ, ಹೆಚ್ಚುವರಿ ವೇತನ ಭಡ್ತಿಯನ್ನು ಮೂಲವೇತನಕ್ಕೆ ಸೇರಿಸು ವುದು, ಟಿಜಿಟಿ ಶಿಕ್ಷಕರ ಹುದ್ದೆಯನ್ನು ಸೆಕೆಂಡರಿ ಸ್ಕೂಲ್ ಅಸಿಸ್ಟೆಂಟ್ ಟೀಚರ್ ಎಂದು ನಮೂದಿಸುವುದು, ವೇತನ ಅನುದಾನವನ್ನು ತತ್‌ಕ್ಷಣ ಬಿಡುಗಡೆಗೊಳಿಸುವುದು ಮುಂತಾದ ವಿಷಯಗಳ ಬಗ್ಗೆ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಭೆಯಲ್ಲಿ ಚರ್ಚಿಸಲಾಯಿತು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣ ಶಿರೂರು, ದ.ಕ. ಜಿಲ್ಲಾಧ್ಯಕ್ಷ ಸ್ಟ್ಯಾನಿ ತಾವ್ರೋ, ಸಂಘಟನಾ ಕಾರ್ಯದರ್ಶಿ ಮಜಿದ್ ಅಲಿ ಮೊದ ಲಾದವರು ಉಪಸ್ಥಿತರಿದ್ದರು.