ಸಿಂಧನೂರು: ಮಹಿಳೆಯರು ಶಿಕ್ಷಣ ಪಡೆಯುವುದಕ್ಕೆ ಸಾಕಷ್ಟು ಸವಾಲುಗಳಿವೆ. ಅವುಗಳನ್ನು ಮೆಟ್ಟಿನಿಂತು ಧನಾತ್ಮಕ ಚಿಂತನೆ ರೂಢಿಸಿಕೊಂಡಾಗ ಸಾಧನೆಯ ಗುರಿ ತಲುಪಬಹುದು ಎಂದು ವಿಜಯಪುರ ಕೋರ್ಟ್‌ನ ಪ್ರಧಾನ ಸಿವಿಲ್ ನ್ಯಾಯಾಧೀಶೆ ಅಮೃತಾ ಬಂಗಾರಶೆಟ್ಟರ್ ಹೇಳಿದರು.
ನಗರದ ಶಾರದಾ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬಿಎ, ಬಿಕಾಂ, ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅನೇಕ ಸಮಸ್ಯೆಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಎದುರಾಗುತ್ತವೆ. ಅವುಗಳನ್ನು ಮೆಟ್ಟಿನಿಲ್ಲುವ ಗುಣ ಹೊಂದಿದರೆ, ಎಲ್ಲವನ್ನು ಮೆಟ್ಟಿ ಸಾಧನೆ ಮಾಡಬಹುದು ಎಂದರು.
ಅಕ್ಕಮಹಾದೇವಿ ವಿವಿ ಅಧ್ಯಯನ ಕೇಂದ್ರದ ವಿಶೇಷ ಅಧಿ ಕಾರಿ ಡಾ|ನಾಗರಾಜ್ ಮಾತನಾಡಿ, ಮಹಿಳೆಯರು ಶಿಕ್ಷಣ ಪಡೆಯುವುದಕ್ಕೆ ಸಾಕಷ್ಟು ಅವಕಾಶಗಳನ್ನು ಸರಕಾರಗಳು ಕೊಟ್ಟಿವೆ. ಅದನ್ನು ಬಳಸಿಕೊಳ್ಳಬೇಕು ಎಂದರು.
ಪ್ರೊ| ಶಾಶ್ವತ ಸ್ವಾಮಿ ಮುಕ್ಕುಂದಿಮಠ, ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಎನ್.ಅಮರೇಶ, ಪ್ರಾಂಶುಪಾಲ ಬಸವರಾಜ ಹಿರೇಮಠ ಬಾದರ್ಲಿ ಮಾತನಾಡಿದರು. ಇದೇ ವೇಳೆ ಬಿಎ ವಿಭಾಗದಲ್ಲಿ 9ನೇ ರ್‍ಯಾಂಕ್ ಗಳಿಸಿದ ವಿದ್ಯಾರ್ಥಿನಿ ಶಿಲ್ಪಾ ಮತ್ತು ಶಿಕ್ಷಕ ಶರಣಪ್ಪ ಗುಡದೂರು, ಬಿಕಾಂ ವಿಭಾಗದಲ್ಲಿ ಶೇ.87ರಷ್ಟು ಅಂಕ ಗಳಿಸಿದ ಸಿರಿನ್‌ಬಾನು ಅವರನ್ನು ಸನ್ಮಾನಿಸಲಾಯಿತು. ವಿಜಯಪುರದ 4ನೇ ಹೆಚ್ಚುವರಿ ನ್ಯಾಯಾ ಧೀಶ ವಿಶ್ವನಾಥ, ಸಂಸ್ಥೆಯ ಅಧ್ಯಕ್ಷ ಎನ್. ವಿಜಯಕುಮಾರ ವಕೀಲ, ಸಂಸ್ಥೆಯ ಕಾರ್ಯದರ್ಶಿ ಎನ್.ಸಚಿತ್ ಸೇರಿದಂತೆ ಇತರರು ಇದ್ದರು.