Advertisement

ಇನ್ನೊಬ್ಬರನ್ನು ದೂರಬೇಡಿ ಪರಿಹಾರದ ಭಾಗವಾಗಿ

12:31 PM May 12, 2021 | Team Udayavani |

ಬೆಂಗಳೂರು: ವಿಶ್ವಯುದ್ಧದಂತಹಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವಿಧಿಸಿರುವ ನಿಯಮದಿಂದ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಆಗಿರಬಹುದು. ಆದರೆ, ಇದು ಜೀವನಶೈಲಿ ಬದಲಿಸಿಕೊಳ್ಳುವ ಸಮಯ ವಲ್ಲ, ಜೀವ ರಕ್ಷಣೆಯೇಅತಿಮುಖ್ಯ ಎಂದು ಇಶಾಫೌಂಡೇಷನ್‌ ಸಂಸ್ಥಾಪಕ ಜಗ್ಗಿವಾಸು ದೇವ (ಸದ್ಗುರು)ಅವರು ಅಭಿಪ್ರಾಯವ್ಯಕ್ತಪಡಿಸಿದರು.

Advertisement

ನಾವು ಗೆಲ್ಲುತ್ತೇವೆ- ಪಾಸಿಟಿ ವಿಟಿ ಅನ್‌ಲಿಮಿ ಟೆಡ್‌ಉಪನ್ಯಾಸ ಸರ ಣಿ ಯಅಂಗವಾಗಿ ಮಂಗಳ ‌ ವಾರಉಪನ್ಯಾಸ ನೀಡಿದ ಅವರು, ನಾವುಗಳುಒಬ್ಬರು ಇನ್ನೊಬ್ಬರನ್ನು ದೂರು ವುದು,ದ್ವೇಷಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಸಮ ಸ್ಯೆಯ ಭಾಗ ವಾಗದೇಪರಿಹಾರಕ್ಕಾಗಿ ಒಂದಾಗಬೇ ಕಿದೆ.ಮಾನವೀಯ ನೆಲೆಯಲ್ಲಿ ಎಲ್ಲರಸೇವೆಯೂ ಅಗತ್ಯ ಎಂದು ಹೇಳಿದರು.ಆರೋಗ್ಯಕರ ಜೀವನ ಶೈಲಿಯಿಂದನಮ್ಮ ಜೀವವನ್ನು ಉಳಿಸಿಕೊಳ್ಳಬೇಕು.

ನಿತ್ಯ ಯೋಗ, ವ್ಯಾಯಾಮದ ಮೂಲಕಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು.ಸರ್ಕಾರದ ನಿಯಮ ಪಾಲಿಸಿ, 14 ದಿನಮನೆಯಲ್ಲೇ ಇದ್ದು, ವೈಯಕ್ತಿಕ ಅಂತರಕಾಪಾಡಿಕೊಳ್ಳಬೇಕು. ಇದು ಕಣ್ಣಿಗೆಕಾಣದ ವೈರಿಯ ವಿರುದ್ಧದ ಯುದ್ಧನಾವೆಲ್ಲರೂ ಗೆದ್ದು ಬರಬೇಕುಎಂದು ಹೇಳಿದರು.ಸೂಕ್ಷ್ಮ ಹಾಗೂ ಜವಾಬ್ದಾರಿಯುತವಾಗಿ ನಾವೆಲ್ಲರೂ ವರ್ತಿಸಬೇಕು.ವೈದ್ಯರಿ ಗಿಂತ ನರ್ಷ್‌ ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಕೊರತೆ ಹೆಚ್ಚಿದೆ.

ಹೀಗಾಗಿ ಯುವ ಜನತೆ ಆಸ್ಪತ್ರೆ,ಕೊರೊನಾ ಕೇರ್‌ ಕೇಂದ್ರದಲ್ಲಿ ವೈದ್ಯಕೀಯೇತರ ಸೇವೆಗಾಗಿ ನರ್ಸ್‌ಅಥವಾ ಅರೆವೈದ್ಯ ಕೀಯಸಿಬ್ಬಂದಿಗೆ ಸಹಾಯಮಾಡುವಂತಾಗಬೇಕು.ಜೀವನ ಶೈಲಿ, ಶಿಕ್ಷಣ,ಉದ್ಯೋಗ ಎಲ್ಲದರಲ್ಲಿಯೂಏರುಪೇರಾಗಿರಬಹುದು.ಜವಾಬ್ದಾರಿ ಯುಕ್ತವಾಗಿ ವರ್ತಿಸಿ, ಸಮಸ್ಯೆಯಿಂದದೂರವಾಗಿ ಇವೆಲ್ಲವನ್ನು ವಾಪಾಸ್‌ ಪಡೆಯ ಬಹುದು. ಆದಕ್ಕಾಗಿ ಜೀವರಕ್ಷಣೆ ಅತಿ ಮುಖ್ಯ ಎಂದರು.

ಭಯ ಬೇಡ: ಪೂಜ್ಯ ಪ್ರಮಾಣ ಸಾಗರ್‌ಜೀ ಮಹಾರಾಜ್‌ ಮಾತ ನಾಡಿ, ಇಂತಹಅನೇಕ ರೋಗ ಗಳು ಈಗಾಗಲೇಬಂದಿದೆ. ಈಗ ಮತ್ತೇ ಮಹಾ ಮಾರಿಬಂದಿದೆ. ಮನ ಸ್ಸನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ತನುವಿಗೆ (ದೇಹ) ರೋಗಬರಬಹುದು. ಆದರೆ, ಅದು ಮನಸ್ಸಿಗೆಬರದಂತೆ ಎಚ್ಚರ ವಹಿಸಬೇಕು.ಮೊದಲು ರೋಗ ಭಯ ದಿಂದ ಹೊರಬರಬೇಕು ಎಂದರು.ಸಾವಿಗೆ ಹೆದರುಅಗತ್ಯವೇನು? ಆಯುಷ್‌ ಮುಗಿದಮೇಲೆ ನಮ್ಮನ್ನು ಯಾರು ಬದುಕಿಸಲುಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿಮನಸ್ಸಿನ ಶುದ್ಧತೆ ಅತಿ ಮುಖ್ಯ.ಅದಕ್ಕಾಗಿ ಆಧ್ಯಾ ತ್ಮಿಕ ಚಟುವಟಿಕೆಹೆಚ್ಚೆಚ್ಚು ಮಾಡಬೇಕು. ಆರೋಗ್ಯವಂತರಾಗಿ ದಾನ ಧರ್ಮಗಳಲ್ಲಿ ಭಾಗಿಯಾಗಲು ಕರೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next