Advertisement

ಶವಸಂಸ್ಕಾರದ ಬಳಿಕ ಬಂತು ಪಾಸಿಟಿವ್‌ ವರದಿ

09:30 AM Aug 02, 2020 | Suhan S |

ಯಳಂದೂರು: ವಿವಿಧ ಕಾಯಿಲೆಗಳಿಂದ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಚಿಕಿತ್ಸೆ ಫ‌ಲಕಾರಿಯಾಗದೆ, ಆಸ್ಪತ್ರೆಯಲ್ಲಿ ಮೃತ ರಾಗಿ, ಶವ ಸಂಸ್ಕಾರದ ಬಳಿಕ ಅವರಿಗೆ ಸೋಂಕಿರುವುದು ದೃಢಪಟ್ಟಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.

Advertisement

ಪಟ್ಟಣದ ಬಳೇಪೇಟೆಯಲ್ಲಿರುವ ಗಾಣಿಗರ ಬೀದಿಯ ವ್ಯಕ್ತಿಗೆ (70) ಮಧುಮೇಹವಿದ್ದು, ಕಾಲಿಗೆ ಗ್ಯಾಂಗ್ರಿನ್‌ ಆಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಜು.27ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫ‌ಲಕಾರಿಯಾಗದೆ ಜು.31ರ ಮಧ್ಯರಾತ್ರಿ ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ. ನಂತರ ಇವರ ಕೋವಿಡ್‌ ಪರೀಕ್ಷೆಗೆ ಇವರ ಸ್ವಾಬ್‌ ಪಡೆದು ಕೊಂಡಿದ್ದು, ಮಧ್ಯರಾತ್ರಿಯೇ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ. ಶವಸಂಸ್ಕಾರಕ್ಕೆ ಗ್ರಾಮಸ್ಥರು, ಬೆಂಗಳೂರು, ಮೈಸೂರು, ಹಾರೋಹಳ್ಳಿ ಸೇರಿದಂತೆ ಹಲವು ಜಿಲ್ಲೆಗಳ ಸಂಬಂಧಿಕರು ಭಾಗವಹಿಸಿ ದರ್ಶನ ಪಡೆದಿದ್ದಾರೆ.

ಶನಿವಾರ ಪಟ್ಟಣದ ಸುವರ್ಣಾವತಿ ನದಿ ದಡದಲ್ಲಿರುವ ಸ್ಮಶಾನದಲ್ಲಿ ನೆರವೇರಿಸಲಾಗಿದೆ. ಇದೆಲ್ಲಾ ಮುಗಿದ ಬಳಿಕ ಆರೋಗ್ಯ ಸಿಬ್ಬಂದಿ ಕೋವಿಡ್ ಪಾಸಿ ಟಿವ್‌ ಇರುವ ವಿಷಯವನ್ನು ಕುಟುಂಬದವರಿಗೆ ಮುಟ್ಟಿಸಿದ್ದಾರೆ. ಸ್ಥಳವನ್ನು ಕಂಟೈನ್ಮೆಂಟ್‌ ಪ್ರದೇಶವೆಂದು ಘೋಷಿಸಿ, ಸ್ಯಾನಿಟೈಸ್‌ ಮಾಡಿ ಸೀಲ್‌ಡೌನ್‌ ಮಾಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಬಳೇಪೇಟೆಯ ವ್ಯಕ್ತಿಯ ಗಂಟಲು ದ್ರವವನ್ನು ರ್ಯಾಪಿಡ್‌ ಟೆಸ್ಟ್‌ ಮಾಡಲಾ ಗಿತ್ತು. ಇದರಲ್ಲಿ ವರದಿ ನೆಗೆಟಿವ್‌ ಬಂದಿತ್ತು. ಇದರ ಆಧಾರದ ಮೇಲೆ ಶವವನ್ನು ನೀಡಲಾಗಿದೆ. ಆದರೆ, ಆರ್‌ ಟಿಪಿಸಿಆರ್‌ ಟೆಸ್ಟ್‌ನ ವರದಿಯಲ್ಲಿ ಶನಿವಾರ ಪಾಸಿಟಿವ್‌ ಬಂದಿದೆ.   -ಡಾ.ಎಂ.ಸಿ. ರವಿ, ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next