ಮಂಗಳೂರು: ಗ್ರಾಮ ಪಂಚಾಯತ್‌ಗಳಲ್ಲಿ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದಕ್ಕಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಆ್ಯಂಡ್ರಾಯ್ಡ ಪಿಒಎಸ್ ಮೆಷಿನ್ ಗಳ ಬಳಕೆಯನ್ನು ಕಡ್ಡಾಯ ಗೊಳಿ ಸಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ ಒಟ್ಟು 2 ಸಾವಿರ ಗ್ರಾ.ಪಂ. ಗಳಿಗೆ ಪಂಚಾಯತ್ ರಾಜ್ ಇಲಾಖೆ ಯಿಂದ ಮೆಷಿನ್ ಒದಗಿಸಲಾಗಿದೆ.
ಗ್ರಾಮೀಣ ಜನರಿಗೆ ವಿವಿಧ ಇಲಾಖೆ ಗಳ ಸೇವೆಗಳ ದಾಖಲೆ ಗಳನ್ನು ತ್ವರಿತವಾಗಿ ಮತ್ತು ಸಮೀಪ ದಲ್ಲಿ ಒಂದೇ ಸೂರಿ ನಡಿ ಒದಗಿಸುವ ಉದ್ದೇಶದಿಂದ ಬಾಪೂಜಿ ಸೇವಾ ಕೇಂದ್ರಗಳನ್ನು ಈಗಾಗಲೇ ಎಲ್ಲ ಗ್ರಾ.ಪಂ. ಗಳಲ್ಲಿ ಸ್ಥಾಪಿಸಲಾಗಿದೆ. ಜತೆಗೆ ಆನ್‌ಲೈನ್ ಮೂಲಕ ಸೇವೆ ಒದಗಿಸಲು ಬಾಪೂಜಿ ಸೇವಾ ಕೇಂದ್ರ ತಂತ್ರಾಂಶವನ್ನೂ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲಾಗಿದೆ.
ಈಗ ಮುಂದುವರಿದು, ತೆರಿಗೆ ವಸೂಲಾತಿಯಲ್ಲಿ ಪಾರದರ್ಶಕತೆ ತರಲು ಮತ್ತು ಗ್ರಾ.ಪಂ.ಗಳಲ್ಲಿ ಡಿಜಿ ಟಲ್ ಪಾವತಿಯನ್ನು ಉತ್ತೇಜಿಸಲು ಆ್ಯಂಡ್ರಾಯ್ಡ ಪಿಒಎಸ್ ಮೆಷಿನ್‌ಗಳನ್ನು ಒದಗಿಸಲಾಗಿದೆ. ಈ ಯಂತ್ರಗಳ ಮೂಲಕ ಬಿಲ್ ಕಲೆಕ್ಟರ್‌ಗಳು ಮನೆ ಮನೆಗೆ ಭೇಟಿ ನೀಡಿ ವಸೂಲಾತಿ ಮಾಡಬಹು ದಾಗಿದ್ದು, ಗ್ರಾ.ಪಂ.ಗಳಲ್ಲಿಯೂ ಸ್ವೀಕರಿಸಬಹುದು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗ್ರಾ.ಪಂ.ಗಳಲ್ಲಿ ಈ ಸಾಲಿನ ಆಸ್ತಿ ತೆರಿಗೆಯನ್ನು ಪಿಒಎಸ್ ಯಂತ್ರದ ಮೂಲಕ ಸ್ವೀಕರಿಸಲಾ ಗುತ್ತಿದೆ. ಸ್ಕಾ Âನ್ ಆಪ್ಶನ್ ಮೂಲಕ “ಫೋನ್ ಪೇ’, “ಗೂಗಲ್ ಪೇ’ ಆಗಿ ಪಾವ ತಿಸಬಹುದಾಗಿದ್ದು, ಕಾರ್ಡ್ ಗಳ ಮೂಲಕ ಪಾವತಿಯೂ ಆಗುತ್ತದೆ.
ಪಂಚಾಯತ್ ಸಿಬಂದಿ ಇದರಿಂದ ಸ್ವಲ್ಪ ನಿರಾಳರಾಗಿದ್ದಾರೆ. ಈ ಮೊದಲು ಪ್ರತಿದಿನದ ನಗದು ಸಂಗ್ರಹಿಸಿ, ಎಣಿಕೆ ಮಾಡಿ, ತಾಳೆ ಹಾಕಿ ಮರುದಿನ ಬ್ಯಾಂಕ್‌ಗೆ ಕಟ್ಟಬೇಕಿತ್ತು. ಈಗ ಶೇ. 90ರಷ್ಟು ಮೆಷಿನ್ ಮೂಲಕ ಪಾವತಿಯಾಗುವುದರಿಂದ ಸಿಬಂದಿಯ ಒತ್ತಡ ಸ್ವಲ್ಪ ಕಡಿಮೆಯಾಗಿದೆ. ದಿನದ ಅಂತ್ಯಕ್ಕೆ ಎಷ್ಟು ಮೊತ್ತ ಪಾವತಿಯಾಗಿದೆ ಎನ್ನುವ ಪಟ್ಟಿಯನ್ನು ಮುದ್ರಿಸಬಹುದಾಗಿದೆ ಎನ್ನುತ್ತಾರೆ ಗ್ರಾ.ಪಂ. ಒಂದರ ಅಭಿವೃದ್ಧಿ ಅಧಿಕಾರಿ.
ಸದ್ಯ ಆಸ್ತಿ ತೆರಿಗೆಯನ್ನು ಮಾತ್ರ ಮೆಷಿನ್ ಮೂಲಕ ಸ್ವೀಕರಿಸಲಾ ಗುತ್ತಿದೆ. ಆದರೆ ಯಂತ್ರದಿಂದ ಸಿಗುವ ರಸೀದಿಯಲ್ಲಿರುವ ಅಕ್ಷರಗಳು ಬೇಗನೆ ಅಳಿಸಿ ಹೋಗುತ್ತದೆ ಎನ್ನುವ ಮಾತು ಕೇಳಿ ಬಂದಿದೆ.
ದ.ಕ. ಜಿಲ್ಲೆ 223; ಉಡುಪಿ 155 ಮೆಷಿನ್
ದ.ಕ. ಜಿಲ್ಲೆಯ ಎಲ್ಲ 223 ಪಂಚಾಯತ್‌ಗಳಲ್ಲೂ ಮೆಷಿನ್ ಮೂಲಕ ಕಾರ್ಯಾಚರಿಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 155 ಗ್ರಾ.ಪಂ.ಗಳಿಗೆ ಮೆಷಿನ್ ಒದಗಿಸಲಾಗಿದೆ. ವಿವರ ಹೀಗಿದೆ.
ಜಿಲ್ಲೆಯ ಗ್ರಾ.ಪಂ.ಗಳಿಗೆ ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸುವ ಉದ್ದೇಶದಿಂದ ಪಿಒಎಸ್ ಯಂತ್ರಗಳನ್ನು ಒದಗಿಸಲಾಗಿದೆ. ಎಲ್ಲ ಗ್ರಾ.ಪಂ.ಗಳಲ್ಲಿ ಈಗಾಗಲೇ ಯಶಸ್ವಿಯಾಗಿ ಬಳಸಲಾಗುತ್ತಿದೆ.
– ಡಾ| ಕುಮಾರ್, ದ.ಕ. ಜಿ.ಪಂ. ಸಿಇಒ
– ಭರತ್ ಶೆಟ್ಟಿಗಾರ್