Advertisement
ವಿಂಡೀಸ್ ಒಂದು ವಿಕೆಟಿಗೆ 86 ರನ್ ಮಾಡಿದಲ್ಲಿಂದ ಶನಿವಾರದ ಆಟ ಮುಂದುವರಿಸಿತ್ತು. ನಾಯಕ ಕ್ರೆಗ್ ಬ್ರಾತ್‌ವೇಟ್ 37 ಮತ್ತು ಕರ್ಕ್ ಮೆಕೆಂಝಿ 14 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಇವರಿಬ್ಬರು ಎಚ್ಚರಿಕೆಯ ಆಟದ ಮೂಲಕ ಮೊತ್ತವನ್ನು 117ರ ತನಕ ಏರಿಸಿದರು. ಆಗ ಮುಕೇಶ್ ಕುಮಾರ್‌ಗೆ ಯಶಸ್ಸು ಸಿಕ್ಕಿತು. 32 ರನ್ ಮಾಡಿದ ಮೆಕೆಂಝಿ ಅವರನ್ನು ಕೀಪರ್ ಕಿಶನ್‌ಗೆ ಕ್ಯಾಚ್ ಕೊಡಿಸಿದರು. ಇದು ಅವರ ಮೊದಲ ಟೆಸ್ಟ್ ವಿಕೆಟ್ ಆಗಿತ್ತು. ಅಲ್ಲಿಗೆ ಮಳೆ ಸುರಿಯತೊಡಗಿತು. ಬ್ರಾತ್‌ವೇಟ್ 49 ರನ್ ಮಾಡಿ ಆಡುತ್ತಿದ್ದಾರೆ.
ದ್ವಿತೀಯ ದಿನದಾಟದಲ್ಲಿ ವಿರಾಟ್ ಕೊಹ್ಲಿ ಶತಕದ ಬಳಿಕ ಭಾರತದ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದವರೆಂದರೆ ಆರ್. ಅಶ್ವಿನ್. ಸೊಗಸಾದ ಬ್ಯಾಟಿಂಗ್ ಪ್ರದರ್ಶಿಸಿದ ಅಶ್ವಿನ್ 78 ಎಸೆತಗಳಿಂದ 56 ರನ್ ಗಳಿಸಿದರು (8 ಬೌಂಡರಿ). ಇದರೊಂದಿಗೆ ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳಿಬ್ಬರೂ ಅರ್ಧ ಶತಕ ಬಾರಿಸಿದಂತಾಯಿತು. ಇದಕ್ಕೂ ಮುನ್ನ ರವೀಂದ್ರ ಜಡೇಜ 61 ರನ್ ಕೊಡುಗೆ ಸಲ್ಲಿಸಿದ್ದರು (152 ಎಸೆತ, 5 ಬೌಂಡರಿ). ಜಡೇಜ ಆಟಕ್ಕೆ ಹೋಲಿಸಿದಾಗ ಅಶ್ವಿನ್ ಬ್ಯಾಟಿಂಗ್ ಬಿರುಸಿನಿಂದ ಕೂಡಿತ್ತು. ಇದು ಅವರ 14ನೇ ಅರ್ಧ ಶತಕ.
ಇಶಾನ್ ಕಿಶನ್ 37 ಎಸೆತಗಳಿಂದ 25 ರನ್ ಮಾಡಿದರು. ವೆಸ್ಟ್ ಇಂಡೀಸ್ ಪರ ಕೆಮರ್ ರೋಚ್, ಜೊಮೆಲ್ ವ್ಯಾರಿಕ್ಯಾನ್ ತಲಾ 3 ವಿಕೆಟ್; ಜೇಸನ್ ಹೋಲ್ಡರ್ 2 ವಿಕೆಟ್ ಉರುಳಿಸಿದರು. ಸಂಕ್ಷಿಪ್ತ ಸ್ಕೋರ್
ಭಾರತ-438 (ಜೈಸ್ವಾಲ್ 57, ರೋಹಿತ್ 80, ಗಿಲ್ 10, ಕೊಹ್ಲಿ 121, ರಹಾನೆ 8, ಜಡೇಜ 61, ಇಶಾನ್ 25, ಅಶ್ವಿನ್ 56, ಉನಾದ್ಕತ್ 7, ರೋಚ್ 104ಕ್ಕೆ 3, ವ್ಯಾರಿಕ್ಯಾನ್ 89ಕ್ಕೆ 3, ಹೋಲ್ಡರ್ 57ಕ್ಕೆ 2).
Related Articles
Advertisement